
ವುಮೆನ್ಸ್ ಪ್ರೀಮಿಯರ್ ಲೀಗ್ ಸೀಸನ್ ಮುಕ್ತಾಯಗೊಂಡಿದೆ. ಮುಂಬೈ ಇಂಡಿಯನ್ಸ್ ತಂಡ ಎರಡನೇ ಬಾರಿಗೆ ಟ್ರೋಫಿ ಜಯಿಸಿದೆ. ಸತತ ಮೂರನೇ ಬಾರಿಗೆ ಫೈನಲ್ಗೆ ಎಂಟ್ರಿ ಕೊಟ್ಟ ಮೆಗ್ ಲ್ಯಾನಿಂಗ್ ಪಡೆಗೆ ಮತ್ತೆ ನಿರಾಸೆಯಾಗಿದೆ. ಫೈನಲ್ ಪಂದ್ಯದಲ್ಲಿ ಡೆಲ್ಲಿ ತಂಡವನ್ನು ಮುಂಬೈ 8 ರನ್ಗಳಿಂದ ಬಗ್ಗು ಬಡಿದಿದೆ. ಟಾಸ್ ಗೆದ್ದ ಡೆಲ್ಲಿ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು. ಇದಕ್ಕೆ ಪ್ರತಿಯಾಗಿ ಬ್ಯಾಟಿಂಗ್ ನಡೆಸಿದ ಮುಂಬೈ 20 ಓವರ್ಗಳಲ್ಲಿ 149 ರನ್ಗಳನ್ನು ಕಲೆ ಹಾಕಿತ್ತು. ನಾಯಕಿಉಯ ಆಟವಾಡಿದ ಹರ್ಮನ್ ಪ್ರೀತ್ ಕೌರ್ (66) ತಂಡವನ್ನು ಸ್ಪರ್ಧಾತ್ಮಕ ಮೊತ್ತ ಕಲೆಹಾಕುವಲ್ಲಿ ಪ್ರಮುಖ ಪಾತ್ರವಹಿಸಿದರು. 150 ರನ್ಗಳ ಗುರಿ ಪಡೆದ ಡೆಲ್ಲಿ ಪಡೆ ಆರಂಭದಿಂದಲ್ಲೇ ವಿಕೆಟ್ ಕಳೆದುಕೊಂಡು ಬಂದಿತ್ತು. ಯಾವೊಬ್ಬ ಬ್ಯಾಟರ್ಗಳು ಕ್ರೀಸಿನಲ್ಲಿ ನಿಂತಿಲ್ಲ ಮರಿಝನ್ಸೆ(40) ತಂಡದ ಪರ ಗಳಿಸಿದ ಗರಿಷ್ಠ ಸ್ಕೋರ್ ಉಳಿದ ಯಾವ ಬ್ಯಾಟರ್ಗಳು ಮುಂಬೈ ಬೌಲರ್ಗಳ ಮುಂದೆ ಶಬ್ದ ಮಾಡಲಿಲ್ಲ.ಪರಿಣಾಮ ಡೆಲ್ಲಿ 141 ರನ್ ಗಳಿಸಲಷ್ಟೇ ಶಕ್ತವಾಯಿತ್ತು. ಫೈನಲ್ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿದ ಮುಂಬೈ ತಂಡ ಎರಡನೇ ಬಾರಿಗೆ ಮಹಿಳಾ ಪ್ರೀಮಿಯರ್ ಲೀಗ್ನ ಟ್ರೋಫಿ ಎತ್ತಿ ಹಿಡಿಯಿತ್ತು. ಬ್ಯಾಟಿಂಗ್ನಲ್ಲಿ ಉತ್ತಮ ಪ್ರದರ್ಶನ ನೀಡಿದ ಹರ್ಮನ್ ಪ್ರೀತ್ ಕೌರ್ ಪಂದ್ಯ ಶ್ರೇ಼ಷ್ಠ ಪ್ರಶಸ್ತಿ ಪಡೆದುಕೊಂಡರೆ,ನ್ಯಾಟ್ ಸಿವರ್ ಬ್ರಂಟ್ ಸರಣಿ ಶೇಷ್ಠ ಪ್ರಶಸ್ತಿ ಪಡೆದುಕೊಂಡರು.

ಅಭಿಷೇಕ್.ಎಸ್