ಹುಬ್ಬಳ್ಳಿ : ಯುವಕ, ಯುವತಿ ಇಬ್ಬರು ಪ್ರೀತಿಸುತ್ತಿದ್ದು, ಈ ವಿಚಾರಕ್ಕೆಇಬ್ಬರಿಗೂ ಗೂಸಾ ಬಿದಿದೆ.
ಹೌದು ಇಬ್ಬರು ಪ್ರೀತಿಸುತ್ತಿದ್ದು, ಯುವತಿ ಯುವಕನ ಹಿಂದೆ ಬಂದಿದ್ದಾಳೆ. ಇನ್ನೂ ವಿಷಯ ತಿಳಿದ ಆಕೆಯ ಕುಟುಂಬಸ್ಥರು ಇಬ್ಬರನ್ನು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ, ಹುಬ್ಬಳ್ಳಿ ಲ್ಯಾಮಿಂಗ್ಟನ್ ರಸ್ತೆ, ಕಾರ್ಪೊರೇಷನ್ ಬಸ್ ನಿಲ್ದಾಣದ ಪಕ್ಕದಲ್ಲಿ ನಡೆದಿದೆ.
ಇನ್ನೂ ಯುವತಿ ಪ್ರಿಯಕರನೊಂದಿಗೆ ನಿಂತಿರೋದನ್ನ ನೋಡಿದ, ಯುವತಿಯ ತಾಯಿ, ಮತ್ತು ತಾಯಿಯ ಸಹೋದರ ಇಬ್ಬರೂ ಪ್ರೇಮಿಗಳಿಗೆ ಹಿಗ್ಗಾಮುಗ್ಗ ಥಳಿಸಿದ್ದು, ಮನೆಗೆ ಬಾ ಮಾತಾಡೋಣ ಎಂದು ಕರೆದಿದ್ದಕ್ಕೆ ಮಾತಿಗೆ ಮಾತು ಬೆಳೆದು ಗಲಾಟೆಯಾಗಿದೆ. ಪ್ರೀತಿ ಮಾಡಿದ್ದಕ್ಕೆ ರೊಚ್ಚಿಗೆದ್ದು ಯುವತಿಯ ತಾಯಿಯ ಸಹೋದರ ಇಬ್ಬರಿಗೂ ಇಟ್ಟಿಗೆಯಿಂದ ಹಲ್ಲೆ ಮಾಡಿದ್ದಾರೆ.
ಇದನ್ನೂ ಓದಿ : https://ashwaveega.com/heavy-rain-in-many-parts-of-the-state-since-november-9/