
benefits of reading books every day
ಮೊಬೈಲ್, ಸೋಷಿಯಲ್ ಮೀಡಿಯಾ ಬಳಕೆ ಹೆಚ್ಚಿದ ಮೇಲೆ ಬಹುತೇಕ ಮಂದಿ ಪುಸ್ತಕ ಓದುವುದನ್ನೇ ನಿಲ್ಸಿದಾರೆ. ಆದ್ರೆ ಪುಸ್ತಕಗಳು ನಮ್ಮ ಜೀವನದ ಸಂಗಾತಿಯಿದ್ದಂತೆ ಅನ್ನೊದನ್ನ ಮರಿಬಾರ್ದು ಕಂಡ್ರಿ. ಹೀಗಾಗಿ ಪುಸ್ತಕ ಓದುವುದರಿಂದ ಕೇವಲ ಜ್ಞಾನ ವೃದ್ಧಿ ಆಗುವುದಷ್ಟೇ ಅಲ್ಲದೇ, ಇದು ನಮ್ಮ ಆರೋಗ್ಯವನ್ನ ಸಹ ಸುಧಾರಿಸ್ತದೆ ಅಂದ್ರೆ ನೀವು ನಂಬ್ತಿರಾ ? ನಂಬ್ಲೇ ಬೇಕು ಯಾಕೆ, ಹೇಗೆ ಅಂತ ನಾವು ಹೇಳ್ತಿವಿ ಕೇಳಿ. . .
ಪುಸಕ್ತವನ್ನು ಓದುವುದರಿಂದ ಮಾನಸಿಕ ಶಕ್ತಿಯನ್ನು ಹೆಚ್ಚಿಸುತ್ತದೆ ಜೊತೆಗೆ ಆಲೋಚನಾ ಪ್ರಕ್ರಿಯೆಯನ್ನು ಸುಧಾರಿಸುತ್ತದೆ. ಪ್ರತಿದಿನ ಪುಸ್ತಕ ಓದುವುದರಿಂದ ಹೊಸ ಪದಗಳ ಪರಿಚಯ ಕೂಡಾ ಆಗ್ತದೆ. ಬಹುತೇಕ ಮಂದಿಗೆ ಪುಸ್ತಕ ಓದುವ ಹವ್ಯಾಸ ಕಡಿಮೆ ಇರ್ತದೆ. ಆದ್ರೆ ಪೋಷಕರು ಮಕ್ಕಳಿಗೆ ಬಾಲ್ಯದಲ್ಲೇ ಅವರ ವಯಸ್ಸಿಗೆ ಅನುಗುಣವಾಗಿ ಸಿಗುವ ಪುಸ್ತಕಗಳನ್ನು ಕೊಡಿಸಿ ಓದಲು ಪ್ರೇರೆಪಿಸಬೇಕು.
ಜೊತೆಗೆ ಪೋಷಕರು ಸಹ ಪುಸ್ತಕಗಳನ್ನು ಓದಬೇಕು. ಓದು, ಜ್ಞಾನವನ್ನು ಹೆಚ್ಚಿಸುವ ಜೊತೆಗೆ ವ್ಯಕ್ತಿತ್ವ ವಿಕಸನದ ಅವಿಭಾಜ್ಯ ಅಂಗವೂ ಆಗಿದೆ. ಪುಸ್ತಕ ಓದುವುದು ನಮ್ಮ ಜ್ಞಾನವನ್ನು ವಿಸ್ತರಿಸುವ ಹೊಸ ವಿಷಯವನ್ನು ಕಲಿಸುತ್ತದೆ.
ನಮ್ಮ ಮೆದುಳು ಕ್ರಿಯಾಶೀಲವಾಗಿರುತ್ತದೆ ಮತ್ತು ಸಮಸ್ಯೆ ಪರಿಹರಿಸುವ ಸಾಮರ್ಥ್ಯವನ್ನು ಸುಧಾರಿಸುತ್ತದೆ. ಜೊತೆಗೆ ನಿಮ್ಮ ಆಯಸ್ಸು ಹೆಚ್ಚುತ್ತೆ. ನಮ್ಮ ಆಲೋಚನೆಗೆ ಹೊಸ ದಿಕ್ಕನ್ನು ತೋರಿಸುತ್ತವೆ ಮತ್ತು ಸೃಜನಶೀಲತೆಯನ್ನು ಹೆಚ್ಚಿಸುತ್ತವೆ. ಕಥೆಗಳು ಮತ್ತು ವಿಷಯಗಳನ್ನು ನೆನಪಿಟ್ಟುಕೊಳ್ಳುವುದರಿಂದ ಜ್ಞಾಪಕ ಶಕ್ತಿ ಸುಧಾರಿಸುತ್ತದೆ. ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ, ಮನಸ್ಸಿಗೆ ಶಾಂತಿ ಸಿಗುತ್ತದೆ, ಸಮಾಧಾನ ಸಿಗುತ್ತದೆ.
ಮಾತ್ರವಲ್ಲದೆ ನಮ್ಮ ಭಾಷಾ ಕೌಶಲ್ಯ, ಶಬ್ದಕೋಶ ಮತ್ತು ವ್ಯಾಕರಣವನ್ನು ಸುಧಾರಿಸುತ್ತದೆ. ಅನುಕರಣೆ ಶಕ್ತಿ, ಆತ್ಮವಿಶ್ವಾಸ ಹೆಚ್ಚುತ್ತದೆ. ಒಟ್ಟಾರೆ ಪುಸ್ತಕ ಓದುವಿಕೆ ನಿಮ್ಮ ಏಕಾಗ್ರತೆ ಮತ್ತು ಸ್ಮರಣೆಯನ್ನು ಸುಧಾರಿಸುತ್ತದೆ ಮತ್ತು ವಿಶ್ರಾಂತಿ ಪಡೆಯಲು ಸಹಾಯ ಮಾಡುತ್ತದೆ, ಹಾಗೆಯೇ ನಿಮ್ಮ ಆಯಸ್ಸು ಹೆಚ್ಚಲು ಕೂಡಾ ಸಹಾಯ ಮಾಡುತ್ತದೆ ನಿಮ್ಮ ಬರವಣಿಗೆಯ ಸಾಮರ್ಥ್ಯವನ್ನು, ಶಬ್ದಕೋಶವನ್ನು, ಜ್ಞಾನವನ್ನು ಹೆಚ್ಚಿಸುತ್ತದೆ ಮತ್ತು ನಿಮ್ಮ ಕಲ್ಪನೆ ಮತ್ತು ಸೃಜನಶೀಲತೆಯನ್ನು ಹೆಚ್ಚಿಸುತ್ತದೆ.
ನೀವೂ ಒಂದು ಪುಸ್ತಕವನ್ನು ಓದಲು ಶುರು ಮಾಡಿದ್ರೆ ದಿನಕ್ಕೆ 10 ರಿಂದ 20 ಪುಟಗಳಷ್ಟು ಓದಲು ಸಮಯ ನೀಡಿ. ಬೆಳಗ್ಗೆ 30 ರಿಂದ 40 ನಿಮಿಷ, ಸಂಜೆ ನಿಮ್ಮಿಷ್ಟದ ಸಮಯ, ಹಾಗೆಯೇ ನೀವೂ ಮಲಗುವ 1 ಗಂಟೆ ಮುನ್ನ ಓದಿ ಮಲಗಿ. ಇದರಿಂದ ನಿಮ್ಮ ಒತ್ತಡಗಳು ನಿವಾರಣೆಯಾಗಿ ಉತ್ತಮ ನಿದ್ರೆಯೂ ಪ್ರಾಪ್ತಿಯಾಗುತ್ತೆ. ಪುಸ್ತಕಗಳು ಜ್ಞಾನದ ಸಂಕೇತವಾಗಿರುವುದರಿಂದ ಪ್ರತಿಯೊಬ್ಬರು ಓದುವ ಹವ್ಯಾಸ ಹೆಚ್ಚಿಸಿಕೊಳ್ಳಬೇಕು. ಅಲ್ಲದೇ ನೀವೂ ಇತರರಿಗೂ ಪುಸ್ತಕ ಓದುವ ಅಭಿರುಚಿ ಬೆಳೆಸಿಕೊಳ್ಳಲು ಪ್ರೇರೇಪಿಸಬೇಕು.
ಇನ್ನು ನೀವು ಓದಲೇಬೇಕಾದ ಪುಸ್ತಕಗಳನ್ನು ನಾವು ಸಜೆಷ್ಟ್ಮಾಡುವುದಾದರೇ, ಮಕ್ಕಳಿಗೆ ರಾಮಾಯಣ, ಮಹಾಭಾರತ ದಂತಹ ಪುಸ್ತಕ ಗಳನ್ನ ಅಭ್ಯಾಸ ಮಾಡಿಸಿ, ಸ್ವಾಮಿ ಜಗದಾತ್ಮನಂದ ಅವರು ಬರೆದಿರುವ ಬದುಕಲು ಕಲಿಯಿರಿ, ಕುವೆಂವು ಅವರ ಮೆಲೆಗಳಲ್ಲಿ ಮದುಮಗಳು, ನೆನಪಿನ ದೋಣಿಯಲ್ಲಿ, ಶಿವರಾಮ ಕಾರಂತರ ಮೂಕಜ್ಜಿಯ ಕನಸುಗಳು, ಎಸ್ಎಲ್ಭೈರಪ್ಪ ಅವರ ಪರ್ವ, ಕೆ.ಪಿ ಪೂರ್ಣ ಚಂದ್ರ ತೇಜಸ್ವಿ ಅವರ ಚಿದಂಬರ ರಹಸ್ಯ, ಜುಗಾರಿ ಕ್ರಾಸ್, ಪಾಕ ಕ್ರಾಂತಿ, ಕರ್ವಾಲೋ, ಪರಿಸರದ ಕತೆ, ಪ್ಯಾಪಿಲಾನ್ಸರಣಿ, ವಸುಧೇಂದ್ರ ಅವರ ತೇಜೋ ತುಂಗಾಭದ್ರ, ಗುರುರಾಜ ಕರ್ಜಗಿ ಅವರ ಕರುನಾಳು ಬಾ ಬೆಳಕೆ, ಕೆ.ಎಸ್ ಗಣೇಶಯ್ಯನವರ ಶಾಲಭಂಜಿಕೆ, ಸುಧಾಮೂರ್ತಿ ಅವರ ಮನದ ಮಾತು, ಎ ಆರ್ ಮಣಿಕಾಂತ್ಅವರ ಅಮ್ಮ ಹೇಳಿದ ಎಂಟು ಸುಳ್ಳುಗಳು ಹೀಗೆ ಹಲವು ಲೇಖಕರು ಸಾಹಿತಿಗಳು ಬರೆದಿರುವ ಪುಸ್ತಕ ಗಳು ನಮಗೆ ಸ್ಫೂರ್ತಿಯಾಗಬಲ್ಲದು.