
ದಕ್ಷಿಣ ಭಾರತದ ಚಿತ್ರರಂಗದಲ್ಲಿ ವಿಜಯ್ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ಅಂತ ಗೊತ್ತು . ಆದರೆ ಇದೀಗ ಟಾಲಿವುಡ್ ನ ಮತ್ತೊಬ್ಬ ಸ್ಟಾರ್ ಅಲ್ಲೂ ಅರ್ಜುನ್ ಅತೀ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರಾಗಿದ್ದಾರೆ. ಹಾಗಾದ್ರೆ ಅಲ್ಲೂ ಅರ್ಜುನ್ ಪಡೆಯೋ ಸಂಭಾವನೆ ಎಷ್ಟು ಅಂತ ಗೊತ್ತಾ.
ಕೊರೊನಾ ನಂತರ ನಟರು ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ವಿಜಯ್, ಅಜಿತ್, ರಜನಿಕಾಂತ್, ಕಮಲ್ ಹಾಸನ್ ಹಾಗೂ ಇತರ ಸ್ಟಾರ್ ನಟರು ನೂರು ಕೋಟಿಗೂ ಹೆಚ್ಚು ಸಂಭಾವನೆ ಪಡೆಯುತ್ತಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾಗಳಿಗೆ ತೆಲುಗು ನಟರಿಗೆ ಹೋಲಿಸಿದರೆ ತಮಿಳು ನಟರಿಗೂ ಸ್ವಲ್ಪ ಹೆಚ್ಚಿನ ಸಂಭಾವನೆ ಸಿಗುತ್ತಿತ್ತು . ರಜನೀಕಾಂತ್ ‘ಕೂಲಿ’ ಚಿತ್ರಕ್ಕೆ 200 ಕೋಟಿ, ವಿಜಯ್ ‘ಕೋಡ್’ ಚಿತ್ರಕ್ಕೆ 250 ಕೋಟಿ ಪಡೆದಿದ್ದಾರೆ. ತಮ್ಮ 69ನೇ ಚಿತ್ರಕ್ಕೆ 275 ಕೋಟಿ ಪಡೆದು ಅತಿ ಹೆಚ್ಚು ಸಂಭಾವನೆ ಪಡೆದ ನಟ ದಳಪತಿ ವಿಜಯ್. ಇದೀಗ ಟಾಲಿವುಡ್ ಸ್ಟಾರ್ 300 ಕೋಟಿ ರೂಪಾಯಿ ಸಂಭಾವನೆ ಪಡೆಯುವ ಮೂಲಕ ದಾಖಲೆ ಬರೆದಿದ್ದಾರೆ.
ವಿಜಯ್ ಗಿಂತ ಹೆಚ್ಚು ಸಂಭಾವನೆ ಪಡೆದ ನಟ ಟಾಲಿವುಡ್ ಸ್ಟಾರ್ ಅಲ್ಲು ಅರ್ಜುನ್. ವಿಜಯ್ ಸಿನಿಮಾರಂಗಕ್ಕೆ ವಿದಾಯ ಹೇಳುತ್ತಿರುವುದರಿಂದ ದಳಪತಿಯನ್ನು ಮೀರಿಸುವ ಸಾಧ್ಯತೆ ಇದೆ. ಹೌದು, ಅಲ್ಲು ಅರ್ಜುನ್ 300 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ. ಪುಷ್ಪ’ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಬೆಳೆದ ಅಲ್ಲು ಅರ್ಜುನ್, ‘ಪುಷ್ಪ 2’ ಚಿತ್ರಕ್ಕೆ ಬರೋಬ್ಬರಿ 300 ಕೋಟಿ ಸಂಭಾವನೆ ಪಡೆದಿದ್ದಾರೆ ಅಂತೆ . ಈ ಚಿತ್ರಕ್ಕಾಗಿ ಮೂರು ವರ್ಷಗಳಿಗೂ ಹೆಚ್ಚು ಕಾಲ ಶ್ರಮಿಸಿದ್ದಾರೆ ಅಲ್ಲು ಅರ್ಜುನ್. ಈ ಚಿತ್ರದಲ್ಲಿ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಸಹ ನಟಿಸಿದ್ದಾರೆ.
ಈಗಾಗಲೇ ಅಧಿಕೃತವಾಗಿ ಚಿತ್ರದ ಪ್ರಚಾರ ಆರಂಭಿಸಿರುವ ಚಿತ್ರತಂಡ ಒಂದೊಂದು ಅಪ್ಡೇಟ್ ನೀಡುತ್ತಿದೆ. ಚಿತ್ರತಂಡ ದೀಪಾವಳಿ ಹಬ್ಬದ ಸಂಭ್ರಮದ ಹೊಸ ಪೋಸ್ಟರ್ ಬಿಡುಗಡೆ ಮಾಡಿದೆ. ಅಲ್ಲುಅರ್ಜುನ್ ಮತ್ತು ರಶ್ಮಿಕಾ ಅವರ ರೋಮ್ಯಾಂಟಿಕ್ ಪೋಸ್ಟರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಬಾತ್ ರೂಮ್ ನಲ್ಲಿ ಪುಷ್ಪ ಶ್ರೀವಲ್ಲಿ ರೊಮ್ಯಾನ್ಸ್ ಮಾಡುತ್ತಿರುವ ಮುದ್ದಾದ ಫೋಟೋವನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಈ ಪೋಸ್ಟರ್ ಚಿತ್ರದ ನಿರೀಕ್ಷೆಯನ್ನು ಹೆಚ್ಚಿಸಿದೆ.
ಪುಷ್ಪ 2 ಸಿನಿಮಾ ವಿಶ್ವದಾದ್ಯಂತ 6 ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ತೆಲುಗು, ತಮಿಳು, ಕನ್ನಡ, ಮಲಯಾಳಂ, ಹಿಂದಿ ಹಾಗೂ ಬಂಗಾಳಿ ಭಾಷೆಗಳಲ್ಲಿ 11,500 ಸ್ಕ್ರೀನ್ ಗಳಲ್ಲಿ ಬಿಡುಗಡೆಯಾಗಲಿದೆ. ಇದುವರೆಗೆ ಭಾರತದ ಯಾವುದೇ ಸಿನಿಮಾ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗಿಲ್ಲ. ಡಿಸೆಂಬರ್ 5 ರಂದು ಚಿತ್ರ ಪ್ರೇಕ್ಷಕರ ಮುಂದೆ ಬರುತ್ತಿದೆ. ಅಲ್ಲು ಅರ್ಜುನ್ ಫ್ಯಾನ್ಸ್ ಈ ಸಿನಿಮಾ ಮೇಲೆ ಭಾರೀ ನಿರೀಕ್ಷೆ ಹೊಂದಿದ್ದಾರೆ. ನಾರ್ತ್ ನಲ್ಲೂ ಪುಪ್ಪರಾಜ್ ಕ್ರೇಜ್ ಜೋರಾಗಿಯೇ ಇದೆ. ಅದ್ಧೂರಿಯಾಗಿ ತೆರೆಗೆ ಬರಲು ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಪುಷ್ಪ 2′ ಚಿತ್ರಕ್ಕೆ ಈಗಾಗಲೇ 1,000 ಕೋಟಿವರೆಗೆ ಪ್ರೀ ರಿಲೀಸ್ ವ್ಯವಹಾರ ನಡೆದಿದೆ ಎನ್ನಲಾಗಿದ್ದು , 1,500 ಕೋಟಿಗೂ ಹೆಚ್ಚು ಗಳಿಕೆ ಮಾಡುವ ಸಾಧ್ಯತೆ ಇದೆ ಎಂದು ಚಿತ್ರ ನಿರ್ದೇಶಕರು ಅಂದಾಜಿಸಿದ್ದಾರೆ. ಡಿಸೆಂಬರ್ 5 ರಂದು ವಿಶ್ವಾದ್ಯಂತ ಭಾರಿ ನಿರೀಕ್ಷೆಯೊಂದಿಗೆ ಬಿಡುಗಡೆಯಾಗಲಿದೆ. ಪುಷ್ಪ 2 ಚಿತ್ರ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾಯುತ್ತಿದ್ದಾರೆ.