
Russian Plane With 50 Onboard CRASHES
Ashwaveega News 24×7 ಜು. 24: ಪೂರ್ವ ರಷ್ಯಾದ ಅಮೂರ್ ಪ್ರದೇಶದಲ್ಲಿ ಪ್ರಯಾಣಿಕ ವಿಮಾನವೊಂದು ಅಪಘಾತಕ್ಕೀಡಾಗಿದ್ದು, ವಿಮಾನದಲ್ಲಿದ್ದ 50 ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.
ವಿಮಾನವು ಟಿಂಡಾ ಪಟ್ಟಣದ ಬಳಿ ಸಮೀಪಿಸುತ್ತಿದ್ದಂತೇ ರಾಡಾರ್ನಿಂದ ಕಾಣೆಯಾಗಿದೆ. ಕೂಡಲೇ ಹೆಲಿಕಾಪ್ಟರ್ಗಳ ಮೂಲಕ ವಿಮಾನದ ಶೋಧಕಾರ್ಯ ನಡೆಸಲಾಗಿ, ಪಟ್ಟಣದ ಸಮೀಪದ ಕಾಡಿನಲ್ಲಿ ವಿಮಾನದ ಅವಶೇಷಗಳು ಪತ್ತೆಯಾಗಿವೆ.
ಕೂಡಲೇ ರಕ್ಷಣಾ ಕಾರ್ಯಾಚಣೆ ಕೈಗೊಳ್ಳಲಾಯಿತಾದರೂ, ನೆಲಕ್ಕೆ ಅಪ್ಪಳಿಸಿದ ರಭಸಕ್ಕೆ ವಿಮಾನದಲ್ಲಿ ಬೆಂಕಿ ಹೊತ್ತಿಕೊಂಡಿದ್ದರಿಂದ, ಪ್ರಯಾಣಿಕರು ಸಜೀವ ದಹನವಾಗಿದ್ದಾರೆ ಎಂದು ಹೇಳಲಾಗಿದೆ.
“ಸೈಬೀರಿಯಾ ಮೂಲದ ಅಂಗಾರ AN-24 ಎಂಬ ವಿಮಾನಯಾನ ಸಂಸ್ಥೆಯ ಈ ವಿಮಾನ, ಬ್ಲಾಗೊವೆಶ್ಚೆನ್ಸ್ಕ್ ನಗರದಿಂದ ಟಿಂಡಾಗೆ ಪ್ರಯಾಣಿಸುತ್ತಿತ್ತು. ಚೀನಾದ ಗಡಿಯಲ್ಲಿರುವ ಅಮೂರ್ ಪ್ರದೇಶದಲ್ಲಿ ರಾಡಾರ್ನಿಂದ ಕಣ್ಮರೆಯಾದ ಕೆಲವೇ ಕ್ಷಣಗಳಲ್ಲಿ ಅಪಘಾತಕ್ಕೀಡಾಗಿದೆ” ಎಂದು ರಷ್ಯಾದ ತುರ್ತು ಸಚಿವಾಲಯ ಮಾಹಿತಿ ನೀಡಿದೆ.
ಬೆಳಗ್ಗೆ 7.30ರ ಸುಮಾರಿಗೆ ಖಬರೋವ್ಸ್ಕ್ನಿಂದ ವಿಮಾನ ಹೊರಟಿತ್ತು ಮತ್ತು ಖಬರೋವ್ಸ್ಕ್-ಬ್ಲಾಗೊವೆಶ್ಚೆನ್ಸ್ಕ್-ಟಿಂಡಾ ಮಾರ್ಗದಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಅದು ರಾಡಾರ್ನಿಂದ ಕಣ್ಮರೆಯಾಯಿತು ಮತ್ತು ಟಿಂಡಾ ವಿಮಾನ ನಿಲ್ದಾಣದಿಂದ ಕೆಲವೇ ಕಿಲೋಮೀಟರ್ಗಳ ದೂರದಲ್ಲಿ ಕರೆಗಳಿಗೆ ಪ್ರತಿಕ್ರಿಯಿಸಲು ವಿಫಲವಾಯಿತು.
ಟಿಂಡಾ ಮಾಸ್ಕೋದಿಂದ ಸುಮಾರು 6,600 ಕಿ.ಮೀ ಪೂರ್ವದಲ್ಲಿದೆ. ಈ ಪ್ರದೇಶದಲ್ಲಿ ಇಂತಹ ಘಟನೆ ಇದೇ ಮೊದಲಲ್ಲ. ಕಳೆದ ವರ್ಷ ಸೆಪ್ಟೆಂಬರ್ನಲ್ಲಿ, ಈಶಾನ್ಯ ಅಮುರ್ ಪ್ರದೇಶದ ಝೆಯಾ ಜಿಲ್ಲೆಯಲ್ಲಿ ಮೂರು ಜನರನ್ನು ಹೊತ್ತೊಯ್ಯುತ್ತಿದ್ದ ರಾಬಿನ್ಸನ್ R66 ಹೆಲಿಕಾಪ್ಟರ್ ಕಾಣೆಯಾಗಿತ್ತು.
ಸೋಮವಾರ, ಮೆಕ್ಸಿಕೋ ನಗರದಲ್ಲಿ ರನ್ವೇಯಲ್ಲಿ ಏರೋಮೆಕ್ಸಿಕೊ ಪ್ರಾದೇಶಿಕ ಜೆಟ್ ವಿಮಾನವು ಡೆಲ್ಟಾ ಏರ್ ಲೈನ್ಸ್ ಬೋಯಿಂಗ್ 737 ಜೆಟ್ಗೆ ಡಿಕ್ಕಿ ಹೊಡೆಯುವ ಸಾಧ್ಯತೆ ಇತ್ತು. ಏರೋಮೆಕ್ಸಿಕೊ ವಿಮಾನವು ಲ್ಯಾಂಡಿಂಗ್ಗೆ ಬರುತ್ತಿದ್ದಾಗ, ಆಗಲೇ ಟೇಕ್ ಆಫ್ ಆಗಲು ಸಿದ್ಧವಾಗುತ್ತಿದ್ದ ಡೆಲ್ಟಾ ಏರ್ ಲೈನ್ಸ್ ಬೋಯಿಂಗ್ 737 ಜೆಟ್ನ ಮುಂದೆ ಡಿಕ್ಕಿ ಹೊಡೆದಾಗ ಈ ಘಟನೆ ಸಂಭವಿಸಿದೆ ಎಂದು ವರದಿಯಾಗಿದೆ.