
two youths died after falling into agricultural pit in shivamogga
ಕೃಷಿ ಹೊಂಡಕ್ಕೆ ಬಿದ್ದು ಇಬ್ಬರು ಯುವಕರು ಮೃತಪಟ್ಟಿರುವ ಘಟನೆ ಶಿವಮೊಗ್ಗ ತಾಲೂಕು ಯಡವಾಲ ಗ್ರಾಮದಲ್ಲಿ ನಡೆದಿದೆ. ಗೌತಮ್ ನಾಯ್ಕ(22) ಮತ್ತು ಚಿರಂಜೀವಿ (22) ಮೃತರು. ಗೌತಮ್ ನಾಯ್ಕ ಯಡವಾಲ ಗ್ರಾಮದ ಕುಮಾರನಾಯ್ಕ್ ಎಂಬುವರ ಪುತ್ರನಾಗಿದ್ದು, ಚಿರಂಜೀವಿ ಶಿವಮೊಗ್ಗದ ಕುಂಬಾರಗುಂಡಿಯ ನಿವಾಸಿ.
ಚಿರಂಜೀವಿ ಸೇರಿದಂತೆ ಇತರೆ 9 ಮಂದಿ ಶನಿವಾರ ರಾತ್ರಿ ಗೌತಮ್ ಜಮೀನಿಗೆ ಹೋಗಿ ಪಾರ್ಟಿ ಮಾಡಿದ್ದಾರೆ. ಪಾರ್ಟಿ ಮುಗಿದ ಮೇಲೆ ಗೌತಮ್ ನಾಯ್ಕ ಅವರ ತೋಟದ ಪಕ್ಕದಲ್ಲಿರುವ ಕೃಷಿ ಹೊಂಡದಲ್ಲಿ ಈಜಲು ಹೋದಾಗ ಈ ದುರ್ಘಟನೆ ನಡೆದಿದೆ. ನಂತರ ಜೊತೆಗಿದ್ದ ಸ್ನೇಹಿತರು ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ.
ಮಾಹಿತಿ ತಿಳಿದ ಕುಂಸಿ ಪೊಲೀಸರು ಮೃತರ ಸ್ನೇಹಿತರನ್ನು ವಿಚಾರಣೆಗೊಳಪಡಿಸಿದ್ದಾರೆ. ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.