
ರಣಜಿ 2025ರ ಟೂರ್ನಿ ಅಂತಿಮ ಘಟಕ್ಕೆ ಕಾಲಿಟ್ಟಿದೆ. ಸೆಮಿಫೈನಲ್ನಲ್ಲಿ ಕೇರಳ ಹಾಗೂ ವಿದರ್ಭ ತಂಡಗಳು ಫೈನಲ್ ಪ್ರವೇಶಿಸಿವೆ. ಗುಜರಾತ್ ವಿರುದ್ದ ಕೇರಳ ದಿಟ್ಟ ಹೋರಾಟ ನೀಡಿ 68 ವರ್ಷಗಳ ಬಳಿಕ ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟಿದೆ. ಗುಜರಾತ್ ವಿರುದ್ದ ಮೊದಲ ಇನ್ನಿಂಗ್ಸ್ನಲ್ಲಿ 457 ರನ್ಗಳನ್ನು ಗಳಿಸಿತ್ತು. ಇದಕ್ಕೆ ಉತ್ತರವಾಗಿ ಗುಜರಾತ್ ತಂಡ 455 ರನ್ ಗಳಿಸಿ ಕೇವಲ 2 ರನ್ಗಳ ಹಿನ್ನಡೆ ಅನುಭವಿಸಿತ್ತು. ನಂತರ ಎರಡನೇ ಇನ್ನಿಂಗ್ಸ್ ಆರಂಭಿಸಿದ ಕೇರಳ 114 ರನ್ ಗಳಿಸಿ ಪಂದ್ಯ ಡ್ರಾ ಮಾಡಿಕೊಂಡಿತ್ತು. ಮೊದಲ ಇನ್ನಿಂಗ್ಸ್ ಮುನ್ನಡೆ ಆಧಾರದ ಮೇಲೆ ಕೇರಳ 68 ವರ್ಷಗಳ ಬಳಿಕ ರಣಜಿ ಫೈನಲ್ ಪಂದ್ಯದಲ್ಲಿ ಆಡುತ್ತಿದೆ.

ಮುಂಬೈ ಶಾಕ್ ಫೈನಲ್ಗೆ ವಿದರ್ಭ ಎಂಟ್ರಿ
ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ವಿದರ್ಭ ತಂಡ ಬಲಿಷ್ಠ ಮುಂಬೈ ವಿರುದ್ದ 80 ರನ್ಗಳ ಜಯ ಗಳಿಸಿದೆ. ಈ ಪಂದ್ಯದಲ್ಲಿ ಮುಂಬೈಗೆ 406 ರನ್ಗಳ ಗುರಿ ನೀಡಲಾಗಿತ್ತು. ಆದರೆ ಬ್ಯಾಟರ್ಗಳ ವೈಫಲ್ಯದಿಂದ 42 ಬಾರಿಯ ಚಾಂಪಿಯನ್ ಮುಂಬೈ ಗುರಿ ಮುಟ್ಟಲು ಸಾಧ್ಯವಾಗಲಿಲ್ಲ. ಶಾರ್ದೂಲ್ ಠಾಕೂರ್ (46) ರನ್ ಗಳಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಇದೇ ಫೆಬ್ರವರಿ 26ರಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ವಿದರ್ಭ ತಂಡ ಕೇರಳ ವಿರುದ್ದ ಆಡಲಿದೆ.
ಅಭಿಷೇಕ್ ಎಸ್