
building on anthills
(ಅಶ್ವವೇಗ) Ashwaveega News 24×7 ಜು.12: ಮನೆಯಲ್ಲಿ ಹುತ್ತ ಬೆಳೆಯುವುದರಿಂದ ಅಥವಾ ಜೇನು ಗೂಡು ಕಟ್ಟುವುದರಿಂದ ಆಗುವ ಫಲವೇನು ಎಂಬ ಕುತೂಹಲ ಎಲ್ಲರಿಗೂ ಇದ್ದೇ ಇರುತ್ತದೆ. ಮಣ್ಣಿನಿಂದಲೇ ಗೋಡೆಗಳನ್ನು ಕಟ್ಟಿ, ಮನೆಯೊಳಗೂ ಮಣ್ಣಿನ ನೆಲವನ್ನು ಹೊಂದಿದ್ದರೆ ಅಂತಹ ಜಾಗದಲ್ಲಿ ಮಳೆಗಾಲದಲ್ಲಿ ಸಾಮಾನ್ಯವಾಗಿ ಹುತ್ತಗಳು ಬೆಳೆಯುತ್ತಿದ್ದವು.ಹುತ್ತಗಳು ಎಂದಾಕ್ಷಣ ಅದರಲ್ಲಿ ಹಾವು ಇರುತ್ತದೆ ಎನ್ನುವ ನಂಬಿಕೆ.
ಹಾವು ಹುತ್ತವನ್ನು ಕಟ್ಟದಿದ್ದರೂ ಗೆದ್ದಲು ಕಟ್ಟಿದ ಹುತ್ತದೊಳಗೆ ಹಾವು ಸೇರಿಕೊಂಡಿರುವುದು ಸಾಮಾನ್ಯ. ಮನೆಯೊಳಗೆ ಗೆದ್ದಲು ಮನೆಕಟ್ಟಿದರೆ ಅದರೊಳಗೆ ಹಾವು ಸೇರಿಕೊಳ್ಳುವುದು ಅಸಾಧ್ಯ. ಆದರೆ ಶುಭ ಸೂಚನೆ. ಅದು ನಾಗದೇವರ ಸ್ಥಳ ಎಂಬ ನಂಬಿಕೆ ಕರಾವಳಿ ಭಾಗದಲ್ಲಿ. ಕರಾವಳಿಯಲ್ಲಿ ನಾಗಾರಾಧನೆ ಮಾಡುವುದರಿಂದ ಆ ನಂಬಿಕೆ ಬಂದಿರಬಹುದು.
ಮನೆಯೊಳಗೆ ಹುತ್ತ ಕಟ್ಟಿದರೆ ಆ ಮನೆಯನ್ನು ಬಿಡಬೇಕು ಎಂಬ ನಂಬಿಕೆಯೂ ಇದೆ. ಹಾಗೆಯೇ ಮನೆಯ ದಿಕ್ಕಿಗೆ ಅನುಗುಣವಾಗಿ ಜೇನು ಗೂಡು ಕಟ್ಟಿದರೆ ಶುಭ ಅಶುಭ ಎಂದು ಪರಿಗಣಿಸಲಾಗುತ್ತದೆ.
ಜೇನು ಗೂಡು ಪೂರ್ವ ದಿಕ್ಕಿನಲ್ಲಿ ಕಟ್ಟಿದರೆ ಉತ್ತಮ ಫಲ. ಆಗ್ನೇಯದಲ್ಲಿಕಟ್ಟಿದರೆ ಆಪ್ತರು ಮನೆಗೆ ಆಗಮಿಸುತ್ತಾರೆ, ಅಥವಾ ಅವರಿಂದ ಏನಾದರೂ ಅನುಕೂಲವಾಗುತ್ತದೆ. ದಕ್ಷಿಣದಲ್ಲಿ ಜೇನು ಕಟ್ಟಿದರೆ ಶುಭ ಫಲ, ನೈರುತ್ಯದಲ್ಲಿ ಕಟ್ಟಿದರೆ ದಾರಿದ್ರ್ಯ ಕಷ್ಟಗಳು ಬರುತ್ತದೆ ಎನ್ನುವುದನ್ನು ಸೂಚಿಸುತ್ತದೆ. ಪಶ್ಚಿಮ ದಿಕ್ಕಿನಲ್ಲಿ ಕಟ್ಟಿದರೆ ಶುಭ, ಬಂಧುಗಳಿಗೆ ಹಿತ, ವಾಯವ್ಯದಲ್ಲಿ ಕಟ್ಟಿದರೆ ಕೆಲಸ ಬೇಗ ಕೈಗೂಡುತ್ತದೆ.
ಉತ್ತರ ದಿಕ್ಕಿನಲ್ಲಿ ದ್ರವ್ಯ ಪ್ರಾಪ್ತಿಯಾಗುತ್ತದೆ ಎನ್ನುತ್ತದೆ. ಈಶಾನ್ಯದಲ್ಲಿದ್ದರೂ ಶುಭ, ಮನೆಯ ಮಧ್ಯಭಾಗದಲ್ಲಿದ್ದರೆ ಸ್ತ್ರೀಯರಿಂದ ಶುಭ.
ಇನ್ನು ಹುತ್ತ ಇರುವ ನಿವೇಶನವನ್ನು ಖರೀದಿಸುವುದು ದೋಷವಲ್ಲ. ಆದರೆ, ಹುತ್ತ ಇರುವ ಸ್ಥಳದಲ್ಲಿ ನೇರವಾಗಿ ಮನೆ ಕಟ್ಟುವುದು ಸೂಕ್ತವಲ್ಲ. ಹುತ್ತ ಸಣ್ಣದಾಗಿದ್ದರೆ ಆ ಮಣ್ಣನ್ನು ನೀರಿಗೆ ಅರ್ಪಿಸಿ ಮನೆ ಕಟ್ಟಬಹುದು. ಆದರೆ ದೊಡ್ಡ ಹುಟ್ಟುಗಳನ್ನು ನಾಶ ಮಾಡಬಾರದು.
ಇದು ಅಶುಭಕರ ಎಂದು ಹೇಳಲಾಗುತ್ತದೆ. ಹುತ್ತ ಇರುವ ಸ್ಥಳವನ್ನು ಬಿಟ್ಟು ಸುತ್ತಮುತ್ತಲಿನ ಜಾಗದಲ್ಲಿ ಮನೆ ಕಟ್ಟಿದರೆ ಯಾವುದೇ ತೊಂದರೆ ಇರುವುದಿಲ್ಲ. ಹುತ್ತ ಪೂರ್ವ ಈಶಾನ್ಯ, ಆಗ್ನೇಯ, ವಾಯವ್ಯ ಅಥವಾ ನೈರುತ್ಯ ದಿಕ್ಕಿನಲ್ಲಿ ಇದ್ದರೂ ಕೂಡ ಈ ಮಾರ್ಗವನ್ನು ಅನುಸರಿಸಬಹುದು. ಹುಟ್ಟಿನ ಸುತ್ತಲೂ ಕನಿಷ್ಠ ಐದು ಅಡಿ ಜಾಗ ಬಿಟ್ಟು ಮನೆಯನ್ನು ನಿರ್ಮಿಸಬೇಕು.
ಹುತ್ತಗಳನ್ನು ಒಡೆಯುವುದರಿಂದ ನಕಾರಾತ್ಮಕ ಪರಿಣಾಮಗಳು ಉಂಟಾಗಬಹುದು ಎಂದು ಅನೇಕರು ನಂಬುತ್ತಾರೆ. ಆದ್ದರಿಂದ, ಹುತ್ತದ ಸಮಸ್ಯೆಯನ್ನು ಸೌಮ್ಯವಾಗಿ ನಿಭಾಯಿಸುವುದು ಉತ್ತಮ.