
Ashwaveega News 24×7 ಅಕ್ಟೋಬರ್. 10: ಕಿಲ್ಲಿಂಗ್ ಸ್ಟಾರ್ ದರ್ಶನ್ಗೆ ಹಾಸಿಗೆ, ದಿಂಬು ನೀಡದ ಹಿನ್ನೆಲೆ ಖುದ್ದು ನ್ಯಾಯಾಧೀಶರು ಜೈಲಿಗೆ ಭೇಟಿ ನೀಡುವಂತೆ ದರ್ಶನ್ ಪರ ವಕೀಲರು ಅರ್ಜಿ ಸಲ್ಲಿಸಿದ್ರು.. ಈ ಅರ್ಜಿಯನ್ನ 57ನೇ CCH ಕೋರ್ಟ್ ಸ್ವೀಕರಿಸಿದೆ.
ಖುದ್ದು ಜೈಲಿಗೆ ತೆರಳಿ ಪರಿಶೀಲಿಸಲು ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗೆ ಕೋರ್ಟ್ ಸೂಚನೆ ನೀಡಿದೆ. ಜೈಲಿಗೆ ಭೇಟಿ ನೀಡಿ ಎಲ್ಲಾ ಸವಲತ್ತು ಪರಿಶೀಲಿಸಬೇಕು. ಕೋರ್ಟ್ ಆದೇಶ ಪಾಲನೆಯಾಗಿದೆಯೋ ಇಲ್ಲವೋ ಪರಿಶೀಲಿಸಬೇಕು. ಜೈಲು ಕೈಪಿಡಿಯಂತೆ ಸವಲತ್ತು ನೀಡಲಾಗಿದೆಯೇ ಪರಿಶೀಲನೆ ಮಾಡಬೇಕು ಎಂದು ಕೋರ್ಟ್ ಸೂಚನೆ ನೀಡಿದೆ.
ಅಕ್ಟೋಬರ್ 18ರೊಳಗೆ ಪರಿಶೀಲನಾ ವರದಿ ಸಲ್ಲಿಸಬೇಕು ಎಂದು ನ್ಯಾಯಾಧೀಶರಾದ ಐ.ಪಿ.ನಾಯಕ್ ಆದೇಶ ಹೊರಡಿಸಿದ್ದಾರೆ.
ಆರೋಪಿ ದರ್ಶನ್ ಪರ ವಕೀಲ ಸುನಿಲ್ ವಾದ ಮಂಡಿಸಿದರು. ʼʼಜೈಲಾಧಿಕಾರಿಗಳಿಗೆ ಕೋರ್ಟ್ ನಿರ್ದೇಶನ ಅರ್ಥವಾಗಿಲ್ಲ. ಅಧಿಕಾರಿಗಳಿಗೆ ಇಂಗ್ಲಿಷ್ ಬರುತ್ತಿಲ್ಲವೆಂದು ಕಾಣುತ್ತದೆ. ಕೋರ್ಟ್ ಆದೇಶದ ಪ್ರತಿಯನ್ನು ಎಸೆದಿದ್ದಾರೆ. ಅವರು ಚಿನ್ನದ ಮಂಚವೇನೂ ಕೇಳಿಲ್ಲ. ಚೆಂಬು ಲೋಟ ಚಾಪೆ ಕೊಟ್ಟಿದ್ದಾರೆ. ಕಾರ್ಪೆಟ್ ಚಾದರ್ ಮೊದಲೇ ಕೊಟ್ಟಿದ್ದರು. ಕಂಬಳಿ ಮಾತ್ರ ಕೋರ್ಟ್ ಆದೇಶದ ಬಳಿಕ ಕೊಟ್ಟಿದ್ದಾರೆ. ಬ್ಯಾರಕ್ ಒಳಗೆ ಮಾತ್ರ ಅರ್ಧ ಗಂಟೆ ಓಡಾಡಲು ಬಿಟ್ಟಿದ್ದಾರೆ. ಹೊರಗಡೆ ಓಡಾಡಲು ಬಿಟ್ಟಿಲ್ಲʼʼ ಎಂದು ತಿಳಿಸಿದ್ದಾರೆ.