
woman dies after beaten
(ಅಶ್ವವೇಗ) Ashwaveega News 24×7 ಜು.08: ದೆವ್ವ ಬಿಡಿಸುವಂತಹ ಮಹಿಳಾ ಮಂತ್ರವಾದಿಯ ಹೊಡೆತಕ್ಕೆ ಮಹಿಳೆಯೊಬ್ಬರು ಜೀವ ಕಳೆದುಕೊಂಡಿರುವ ಘಟನೆ ಭದ್ರಾವತಿ ತಾಲೂಕಿನ ಜಂಬರಘಟ್ಟ ಗ್ರಾಮದಲ್ಲಿ ನಡೆದಿದೆ.
ಜಂಬರಘಟ್ಟ ಗ್ರಾಮ ಗೀತಾ (53) ಮೃತಪಟ್ಟ ಮಹಿಳೆ. ಗೀತಾಗೆ ದೆವ್ವ ಹಿಡಿದಿದೆ ಎಂದು ಹೇಳಿ ಅದನ್ನು ಬಿಡಿಸಲು ಆಶಾ ಎಂಬ ಮಹಿಳೆ ಮುಂದಾಗಿದ್ದಾರೆ. ದೆವ್ವ ಬಿಡಿಸುವ ಸಂದರ್ಭದಲ್ಲಿ ಮಹಿಳೆಗೆ ಕೋಲಿನಿಂದ ಆಶಾ ಹೊಡೆದಿದ್ದಾಳೆ. ಇದರಿಂದ ತೀವ್ರವಾದ ಅಸ್ವಸ್ಥಕ್ಕೆ ಗುರಿಯಾಗಿದ್ದ ಮಹಿಳೆ ಬೆಳಗ್ಗೆ ಜೀವ ಬಿಟ್ಟಿದ್ದಾಳೆ. ಆದ್ರೆ ಕೆಲ ದಿನಗಳಿಂದ ಮಹಿಳೆ ಅನಾರೋಗ್ಯದಿಂದ ಬಳಲುತ್ತಿದ್ದರು. ಆಸ್ಪತ್ರೆಗೆ ಕರೆದೊಯ್ಯದೇ ಮಂತ್ರವಾದಿ ಬಳಿ ಕರೆದುಕೊಂಡು ಹೋಗಲಾಗಿದೆ.
ನಿನ್ನೆ ರಾತ್ರಿ 9 ಗಂಟೆಯಿಂದ ತಡರಾತ್ರಿ 3 ಗಂಟೆಯವರೆಗೂ ಆಶಾ ಗೀತಮ್ಮಳನ್ನು ಮನಸೋಯಿಚ್ಛೆ ತಳಿಸಿದ್ದಾರೆ. ಥಳಿತಕ್ಕೊಳಗಾದ ಗೀತಮ್ಮ ಅಸ್ವಸ್ಥಗೊಂಡಿದ್ದಾರೆ. ಬಳಿಕ ಅವರನ್ನು ಹೊಳೆಹೊನ್ನುರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೆ ಇಂದು ಮೃತಪಟ್ಟಿದ್ದಾರೆ. ಇನ್ನು ಸ್ಥಳಕ್ಕೆ ಹೊಳೆಹೊನ್ನುರು ಪೋಲಿಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.