
ವುಮೆನ್ಸ್ ಪ್ರೀಮಿಯರ್ ಲೀಗ್ನ ಸೀಸನ್ 3ರ ಚಾಂಪಿಯನ್ ಯಾರೆಂಬುದು ಎಂಬ ಕುತೂಹಲಕ್ಕೆ ಇಂದು ಬ್ರೇಕ್ ಬೀಳಲಿದೆ. ಬ್ರಬೋರ್ನ್ ಸ್ಟೇಡಿಯಂನಲ್ಲಿ ಸೀಸನ್ 1ರ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ಸೀಸನ್1,2ರ ರನ್ನ ಅಪ್ ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಪಂದ್ಯ ನಡೆಯಲಿದೆ. ಡೆಲ್ಲಿಗೆ ಸೀಸನ್ 1ರ ಫೈನಲ್ ಪಂದ್ಯದಲ್ಲಿ ಸೋಲುಣಿಸಿದ್ದ ಮುಂಬೈ ವಿರುದ್ದ ಸೇಡು ತೀರಿಸಿಕೊಳ್ಳುವ ಅವಕಾಶ ಇದ್ದರೆ, ಇತ್ತ ಮುಂಬೈಗೆ ಎರಡನೇ ಬಾರಿಗೆ ಚಾಂಪಿಯನ್ ಆಗುವ ತವಕದಲ್ಲಿದೆ. ಲೀಗ್ನಲ್ಲಿ ಸ್ಥಿರ ಪ್ರದರ್ಶನ ನೀಡಿ ಟೇಬಲ್ ಟಾಪರ್ ಆಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಫೈನಲ್ಗೆ ಎಂಟ್ರಿ ಕೊಟ್ಟರೆ, ಮುಂಬೈ ತಂಡ ಎಲಿಮಿನೇಟರ್ ಪಂದ್ಯದಲ್ಲಿ ಗುಜರಾತ್ ತಂಡವನ್ನು ಸೋಲಿಸಿ ಫೈನಲ್ಗೆ ಲಗ್ಗೆಯಿಟ್ಟಿದೆ. ಉಭಯ ತಂಡಗಳಲ್ಲಿಯೂ ಪಂದ್ಯದ ದಿಕ್ಕನೂ ಬದಲಾಯಿಸುವ ಆಟಗಾರರಿದ್ದು ಫೈನಲ್ ಹೋರಾಟ ಅತ್ಯಂತ ರೋಚಕತೆಯಿಂದ ಕೂಡಿರುತ್ತದೆ ಎನ್ನಲಾಗುತ್ತಿದೆ…
ಡೆಲ್ಲಿ ಕ್ಯಾಪಿಟಲ್ಸ್ ತಂಡ
ಮೆಗ್ ಲ್ಯಾನಿಂಗ್(ನಾಯಕಿ), ಶಫಾಲಿ ಶರ್ಮಾ, ಜೆಮಿಮಾ ರೋಡ್ರಿಗಸ್, ಸ್ನೇಹದೀಪ್ತಿ, ಆಲಿಸ್ ಕ್ಯಾಪ್ಸಿ, ಅನ್ನಾಬೆಲ್ ಸದರ್ಲ್ಯಾಂಡ್, ಆರಂಧತಿ ರೆಡ್ಡಿ, ಜೆಸ್ ಜೊನಾಸೆನ್ಸ್, ನಿಕಿ ಪ್ರಸಾದ್, ಮರಿಜಾನ್ನೆ ಕಪ್, ಮಿನ್ನು ಮಣಿ, ನಲ್ಲಪುರೆಡ್ಡಿ ಚರಣಿ, ರಾಧಾ ಯಾದವ್, ಶಿಖಾ ಪಾಂಡೆ, ಸಾರಾ ಬ್ರೈಸ್, ತಾನಿಯಾ ಭಾಟಿಯಾ, ಟೈಟಾಸ್ ಸಾಧು, ನಂದಿನಿ ಕಶ್ಯಪ್.
ಮುಂಬೈ ಇಂಡಿಯನ್ಸ್ ತಂಡ
ಹರ್ಮನ್ಪ್ರೀತ್ ಕೌರ್ (ನಾಯಕಿ), ಹೇಲಿ ಮ್ಯಾಥ್ಯೂಸ್, ನ್ಯಾಟ್ ಸ್ಕಿವರ್ ಬಗ್ರಂಟ್, ಭಾಟಿಯಾ, ಸಜೀವ್ ಸಜ್ನಾ, ಸಂಸ್ಕೃತಿ ಗುಪ್ತಾ, ಶಬ್ನಿಮ್ ಇಸ್ಮಾಯಿಲ್, ಸೈಕಾ ಇಶಾಕ್, ಕ್ಲೋಯ್ ಡೆಕ್ಟ್ರಿನ್, ಕ್ಲೋಯ್ ನಕ್ಟ್ರಿನ್, ಕೆಲ್ಲರ್, ಜಿಂತಿಮಣಿ ಕಲಿತಾ, ಪರುಣಿಕಾ ಸಿಸೋಡಿಯಾ, , ಅಕ್ಷಿತಾ ಮಹೇಶ್ವರಿ, ಅಮನ್ದೀಪ್ ಕೌರ್.

ಅಭಿಷೇಕ್.ಎಸ್