
ಮಾಜಿ ಸಂಸದ ಪ್ರತಾಪ ಸಿಂಹ ಅವರು ಎಂಪಿ ಸ್ಥಾನವನ್ನು ಕಳೆದುಕೊಂಡು ಇಂದಿಗೆ ಒಂದು ವರ್ಷಗಳಾಗಿವೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ವೊಂದನ್ನು ಹಂಚಿಕೊಂಡು ಕಾರ್ಯಕರ್ತರಿಗೆ ಧನ್ಯವಾದ ತಿಳಿಸಿದ್ದಾರೆ. ಮೈಸೂರಿನಲ್ಲಿ ಬಿಜೆಪಿಯು ಕಳೆದ ಲೋಕಸಭೆ ಚುನಾವಣೆಯಲ್ಲಿ ಪ್ರತಾಪ ಸಿಂಹ ಬದಲು ಯದುವೀರ್ ಒಡೆಯರ್ ಅವರಿಗೆ ಮಣೆ ಹಾಕಿದ್ದರು. ಈ ಬಗ್ಗೆ ನೋವು ಅನುಭವಿಸಿದ್ದ ಪ್ರತಾಪ್ ಸಿಂಹ ಟಿಕೆಟ್ ಕೈ ತಪ್ಪುವ ಹಂತದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಲೈವ್ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದರು. ಇದೀಗ ತಮ್ಮ ಎಂಪಿ ಸ್ಥಾನ ಕಳೆದುಕೊಂಡು ಒಂದು ವರ್ಷವಾಗಿದ್ದು ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ವೊಂದನ್ನು ಮಾಡಿದ್ದಾರೆ. ಎಂಪಿ ಟಿಕೆಟ್ ಕಳೆದುಕೊಂಡು ಇವತ್ತಿಗೆ ಒಂದು ವರ್ಷವಾಯಿತು. ಆದರೆ ಕಾರ್ಯಕರ್ತರ ಪ್ರೀತಿ ಜನರ ಆಶೀರ್ವಾದ, ಪ್ರೋತ್ಸಾಹ ಇವತ್ತಿಗೂ ಹಾಗೇ ಇದೆ. ನೀವು ಕೊಟ್ಟಿರುವ ಈ ಶಕ್ತಿಯಿಂದಲೇ ಇವತ್ತಿಗೂ ಸೈದ್ದಾಂತಿಕ ಕೆಲಸ ಮತ್ತು ಹೋರಾಟ ಮಾಡಿ 8 ಎಫ್ಐಆರ್ ಹಾಕಿಸಿಕೊಂಡರೂ ಮುಂದುವರಿಸುತ್ತಿದ್ದೇನೆ. ನಿಮ್ಮ ಪ್ರೀತಿ, ವಿಶ್ವಾಸ ಮತ್ತು ಆಶೀರ್ವಾದ ಹೀಗೇ ನಿರಂತರವಾಗಿರಲಿ ಧನ್ಯವಾದಗಳು ಎಂದು ಪ್ರತಾಪ್ ಸಿಂಹ ಬರೆದುಕೊಂಡಿದ್ದಾರೆ.

ಅಭಿಷೇಕ್ ಎಸ್