
ವುಮೆನ್ಸ್ ಪ್ರೀಮಿಯರ್ ಲೀಗ್ನ 3 ಆವೃತ್ತಿಯಲ್ಲಿ ಡೆಲ್ಲಿ ತಂಡ ಮುಂಬೈ ವಿರುದ್ದ ಜಯ ಗಳಿಸಿದೆ. ಆ ಮೂಲಕ ಪಾಯಿಂಟ್ಸ್ ಟೇಬಲ್ನಲ್ಲಿ ಆಗ್ರಸ್ಥಾನ ಉಳಿಸುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಟಾಸ್ ಗೆದ್ದ ಡೆಲ್ಲಿ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಡೆಲ್ಲಿ ಬೌಲರ್ಗಳ ಮುಂದೆ ಮಂಕಾದ ಮುಂಬೈ ಬ್ಯಾಟರ್ಗಳು 20 ಓವರ್ಗಳಿಗೆ 123 ರನ್ಗಳ ಸಾಧಾರಣ ಮೊತ್ತ ಕಲೆ ಹಾಕಿತು. ಜೋನಾಸೆನ್, ಮಿನ್ನು ಮಣಿ ತಲಾ 3 ವಿಕೆಟ್ ಪಡೆದು ಮಿಂಚಿದರು. 124 ರನ್ಗಳ ಸಾಧಾರಣ ಮೊತ್ತ ಬೆನ್ನತ್ತಿದ್ದ ಡೆಲ್ಲಿ ನಾಯಕಿ ಮೆಗ್ ಲ್ಯಾನಿಂಗ್ (60),ಶಫಾಲಿ ವರ್ಮಾ (43) ಅವರ ಬ್ಯಾಟಿಂಗ್ ನೆರವಿನಿಂದ ಡೆಲ್ಲಿ ತಂಡ 14.3 ಓವರ್ಗಳಲ್ಲಿ ಮುಂಬೈ ನೀಡಿದ್ದ ಗುರಿಯನ್ನು ಸುಲಭವಾಗಿ ಚೇಸ್ ಮಾಡಿತ್ತು. ಆ ಮೂಲಕ ಆಡಿದ 6 ಪಂದ್ಯಗಳ ಪೈಕಿ 4 ಜಯ ಗಳಿಸಿದ್ದು ಪಾಯಿಂಟ್ಸ್ ಟೇಬಲ್ನಲ್ಲಿ ಮೊದಲ ಸ್ಥಾನದಲ್ಲಿದೆ. ಮುಂಬೈ 5 ಪಂದ್ಯ ಆಡಿ 3ರಲ್ಲಿ ಜಯ ಗಳಿಸಿ ಒಟ್ಟು 6 ಅಂಕಗಳೊಂದಿಗೆ ಪಾಯಿಂಟ್ಸ್ ಟೇಬಲ್ನಲ್ಲಿ ಎರಡನೇ ಸ್ಥಾನದಲ್ಲಿದೆ.

ಅಭಿಷೇಕ್. ಎಸ್