
ಮಹಿಳಾ ಐಪಿಎಲ್ 2025ರ 2ನೇ ಪಂದ್ಯದಲ್ಲಿ ಸೀಸನ್ 1ರ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂಸೀಸನ್ 1,2ರ ರನ್ನರ್ಅಪ್ ಡೆಲ್ಲಿ ಕ್ಯಾಪಿಟಲ್ಸ್ ಎದುರಾಗಲಿವೆ. ಎರಡು ತಂಡಗಳು ತಮ್ಗ ಮೊದಲ ಪಂದ್ಯದ;ಲ್ಲೇ ಜಯ ಗಳಿಸುವ ಲೆಕ್ಕಾಚಾರದಲ್ಲಿ ಕಣಕ್ಕಿಳಿಯಲಿವೆ. ಈ ಪಂದ್ಯ ಗುಜರಾತ್ ವಡೋದರಾದಲ್ಲಿನ ಕೋಟಂಬಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಉಭಯ ತಂಡಗಳಲ್ಲಿ ಮ್ಯಾಚ್ ವಿನ್ನರ್ಗಳ ದಂಡೇ ಇದೆ. ಯಾವುದೇ ಕ್ಷಣದಲ್ಲಿ ಪಂದ್ಯದ ಗತಿಯನ್ನೇ ಬದಲಾಯಿಸುವ ಆಟಗಾರರಿದ್ದಾರೆ.

ಮಾಜಿ ಚಾಂಪಿಯನ್ ಮುಂಬೈ ತಂಡದಲ್ಲಿ ನಾಯಕಿ ಹರ್ಮನ್ಪ್ರೀತ್ ಕೌರ್ ,ಹೇಲಿ ಮ್ಯಾಥ್ಯೂಸ್, ಯಾಸ್ತಕಾ ಭಾಟಿಯಾ, ಸೇರಿದಂತೆ ಹಲವು ಸ್ಟಾರ್ ಆಟಗಾರರೇ ಇದ್ದಾರೆ. ಡೆಲ್ಲಿ ಕೂಡ ಈ ಬಾರಿ ಹೇಗಾದರೂ ಸರಿ ಚಾಂಪಿಯನ್ ಆಗಲೇ ಬೇಕೆಂಬ ಹಠದೊಂದಿಗೆ ಕಣಕ್ಕಿಳಿಯುತ್ತಿದೆ. ಡೆಲ್ಲಿ ತಂಡದಲ್ಲಿ ಶಫಾಲಿ ವರ್ಮಾ, ಮೆಗ್ ಲ್ಯಾನಿಂಗ್,ಅನ್ನಾಬೆಲ್ ಸದರ್ಲ್ಯಾಂಡ್,ತಾನಿಯಾ ಭಾಟಿಯಾರಂತಹ ಆಟಗಾರರಿದ್ದಾರೆ. ಎರಡು ಕಡೆ ಬಲಿಷ್ಠ ಆಟಗಾರರಿರುವುದ್ದರಿಂದ ಈ ಪಂದ್ಯ ಸಾಕಷ್ಟು ಪೈಪೋಟಿಯಿಂದ ಕೂಡಿರಲಿದೆ ಎಂಬ ನಿರೀಕ್ಷೆಯಿದೆ…
ಅಭಿಷೇಕ್ ಎಸ್