ವುಮೆನ್ಸ್ ಪ್ರೀಮಿಯರ್ ಲೀಗ್ ಪಂದ್ಯಗಳು ಮುಗಿಯುತ್ತಿದ್ದಂತೆ ಇದೀಗ ಪ್ಲೆ ಆಫ್ ಪಂದ್ಯಗಳ ಸರದಿ. ಡೆಲ್ಲಿ, ಮುಂಭಯ, ಗುಜರಾತ್ ತಂಡಗಳಯ ಪೈಕಿ ಡೆಲ್ಲಿ ಕ್ಯಾಪಿಟಲ್ಸ್ ನೇರವಾಗಿ ಫೈನಲ್ ತಲುಪಿದೆ. ಇದೀಗ ಮುಂಬೈ ಹಾಗೂ ಗುಜರಾತ್ ವಿರುದ್ದ ಎಲಿಮಿನೇಟರ್ ಪಂದ್ಯ ನಡೆಯಲಿವೆ. ಮುಂಬೈನ ಬ್ರೆಬೋನ್ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಗೆದ್ದ ತಂಡ ಮಾರ್ಚ್ 15ರಂದು ಫೈನಲ್ ಪಂದ್ಯದಲ್ಲಿ ಡೆಲ್ಲಿ ವಿರುದ್ದ ಆಡಲಿದೆ. ಮುಂಬೈ ತಂಡದಲ್ಲಿ ಹೇಲಿ ಮ್ಯಾಥ್ಯೂಸ್ಮ ನಥಾಲಿ ಸ್ಕೀವರ್ ಬ್ರಂಟ್, ನಾಯಕಿ ಹರ್ಮನ್ಪ್ರೀತ್ ಕೌರ್ರಂತಹ ಆಟಗಾರರು ಮುಂಭಯ ಪಾಳಯದಲ್ಲಿದ್ದಾರೆ. ಮತ್ತೊಂದೆಡೆ ಮೊದಲೆರಡು ಆವೃತ್ತಿಯಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಗುಜರಾತ್ ಮೃನೇ ಸೀಸನ್ನಲ್ಲಿ ಪ್ಲೇ ಆಫ್ ಹಂತಕ್ಕೆ ತಲುಪಿದೆ. ಆಶ್ಲೆ ಗಾರ್ಡ್ನರ್ ನಾಯಕತ್ವ ಹಾಗೂ ಬೆಥ್ ಮೂನಿ, ಹರ್ಲೀನ್ ಡಿಯೋಲ್,ದಿಯ್ಯಾಂಡ್ರಾ ಡಾಟಿನ್, ಫೀಬಿ ಲಿಚ್ ಫೀಲ್ಡ್, ಕಾಶ್ವೀ ಗೌತಮ್ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಹೀಗಾಗಿ ಎಲಿಮಿನೇಟರ್ ಪಂದ್ಯದಲ್ಲಿ ಎರಡು ತಂಡಗಳಿಂದ ಜಿದ್ದಾಜಿದ್ದಿನ ಹೋರಾಟ ನಿರೀಕ್ಷೆ ಮಾಡಬಹುದಾಗಿದೆ.

ಅಭಿಷೇಕ್. ಎಸ್