
Yash Dayal Private Chat With His GF Leaked On Social Media
(ಅಶ್ವವೇಗ) Ashwaveega News 24×7 ಜು.02: ಆರ್ಸಿಬಿ ಸ್ಟಾರ್ ಯಶ್ ದಯಾಳ್, ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿದ್ದಾರೆ. ದಯಾಳ್ ವಿರುದ್ಧ ಆರೋಪಗಳನ್ನು ಮಾಡಿರುವ ಯುವತಿ, ಇದೀಗ ದಯಾಳ್ ಮಾಡಿರುವ ವಿಡಿಯೋ ಕರೆಗಳ ಸ್ಕ್ರೀನ್ಶಾಟ್ಗಳನ್ನು ಮತ್ತು ಹಳೆಯ ಚಾಟ್ಗಳನ್ನು ಹಂಚಿಕೊಂಡಿದ್ದಾಳೆ. ಬೆನ್ನಲ್ಲೇ ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಯಶ್ ದಯಾಳ್ ಅವರ ಗೆಳತಿ ಎನ್ನಲಾದ ಯುವತಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಈ ಫೋಟೋಗಳು 2022 ರದ್ದಾಗಿದ್ದು, ಆಗ ಯಶ್ ಗುಜರಾತ್ ಟೈಟಾನ್ಸ್ನಲ್ಲಿದ್ದರು.
ನಾನು ನಿನ್ನನ್ನು ಬಿಟ್ಟು ಹೋಗಲು ನಿಜವಾಗಿಯೂ ಪ್ರಯತ್ನಿಸಿದೆ. ಎಲ್ಲವನ್ನೂ ಮರೆಯಲು ಸಾಧ್ಯವಿಲ್ಲ. ವಿಶೇಷವಾಗಿ ನೀನು ನನ್ನ ಹೃದಯ ಮತ್ತು ಭಾವನೆಗಳಿಗೆ ನೀಡಿದ ನೋವು ಎಂದು ಪೋಸ್ಟ್ನಲ್ಲಿ ಬರೆದಿದ್ದಾಳೆ.
ನಾನು ನಿಮ್ಮನ್ನು ಬಿಟ್ಟು, ಎಲ್ಲವನ್ನೂ ದೇವರಿಗೆ ಬಿಡಲು ಪ್ರಯತ್ನಿಸಿದೆ. ನೀನು ನನ್ನಂತಹ ಹುಡುಗಿಯರನ್ನು ಮೋಸಗೊಳಿಸುತ್ತಿರುವ ರೀತಿ, ಬಹುಶಃ ಎಲ್ಲರಿಗೂ ಕಣ್ಣು ತೆರೆಸುವ ಅನುಭವ ಆಗಬಹುದು. ನಿಮ್ಮ ಕುಟುಂಬವು ನಿಮಗೆ ನಿಷ್ಠೆ ಮತ್ತು ಪ್ರಾಮಾಣಿಕತೆಯ ಕಲಿಸುತ್ತದೆ ಎಂದು ಭಾವಿಸುತ್ತೇನೆ. ಇದು ನಿಮ್ಮ ಯಶಸ್ಸಲ್ಲ.
ನಿಜವಾದ ಯಶಸ್ಸು ಸಂಬಂಧಗಳಲ್ಲಿ ಸ್ಪಷ್ಟತೆ, ಪ್ರಾಮಾಣಿಕತೆ ಮತ್ತು ಶುದ್ಧತೆ. ಹುಡುಗಿಯರ ಕಡೆಗೆ ಬಳಸಿ ಎಸೆಯುವ ಮನೋಭಾವ ಯಶಸ್ಸು ಅಲ್ಲ. ನಾನು ಬಹಳಷ್ಟು ಹೇಳಬಹುದಿತ್ತು.. ನಾನು ಕರ್ಮವನ್ನು ನಂಬುತ್ತೇನೆ ಎಂದು ಬರೆದುಕೊಂಡಿದ್ದಾಳೆ.
ಯುವತಿ ಇನ್ಸ್ಟಾಗ್ರಾಮ್ನಲ್ಲಿ 2022 ರಲ್ಲಿ ಯಶ್ ನಡೆಸಿದ ಮಾತುಕತೆಯ ಚಾಟ್ ಶೇರ್ ಮಾಡಲಾಗಿದೆ. ಅದಕ್ಕೆ ಯಶ್ ದಯಾಳ್ ಕಾಮೆಂಟ್ ಮಾಡಿದ್ದಾರೆ. ‘ಹಾಯ್ ಲವ್’ ಎಂದು ಬರೆದಿದ್ದಾರೆ. ಯಶ್ ದಯಾಳ್ ಬರೆದಿರುವ ಅನೇಕ ಚಾಟ್ಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇನ್ನು ಆರೋಪ ಸಂಬಂಧ ಘಾಜಿಯಾಬಾದ್ ಪೊಲೀಸರು ಕೇಸ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಈಗಾಲೇ ಅಧಿಕಾರಿಗಳು ಸಂತ್ರಸ್ತ ಯುವತಿಯ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಜೊತೆಗೆ ಯಶ್ ದಯಾಳ್ಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ.