
IIM Calcutta Rape Case
Ashwaveega News 24×7 ಜು.17: ಯುವತಿಯನ್ನು ಹಾಸ್ಟೆಲ್ಗೆ ಕರೆಸಿಕೊಂಡು ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಬಾಗಲಕೋಟೆ ಮೂಲದ ಆರೋಪಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಲೋಕಾಪುರ ಪಟ್ಟಣದ ನಿವಾಸಿ ಪರಮಾನಂದ ಟೋಪಣ್ಣನವರ್ ಎಂದು ಗುರುತಿಸಲಾಗಿದೆ.
ಈತ ಕೊಲ್ಕತ್ತಾದ ಜೋಕಾದಲ್ಲಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ನಲ್ಲಿ ಎರಡೇ ವರ್ಷದ ಎಂಬಿಎ ವ್ಯಾಸಾಂಗ ಮಾಡುತ್ತಿದ್ದ.
ಆರೋಪಿಯ ವಿರುದ್ಧ ಯುವತಿ, ಹಾಸ್ಟೆಲ್ಗೆ ಕರೆಸಿಕೊಂಡು ಫಿಜ್ಜಾ ತಿನ್ನಿಸಿ ಮತ್ತು ಬರುವ ಪಾನೀಯ ಕುಡಿಸಿ ಅತ್ಯಾಚಾರ ಎಸಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಜು.12 ರಂದು ಆರೋಪಿ ಪರಮಾನಂದನನ್ನ ಪೊಲೀಸರು ಬಂಧಿಸಿದ್ದರು.
ಪರಮಾನಂದ ಬಂಧನದ ಮಾಹಿತಿಯನ್ನು ಆತನ ಸ್ನೇಹಿತರು ಕುಟುಂಬಸ್ಥರಿಗೆ ನೀಡಿದ್ದು, ಕೊಲ್ಕತ್ತಾಗೆ ಆತನ ಪೋಷಕರು ತೆರಳಿದ್ದಾರೆ.
ಸಂತ್ರಸ್ತ ಮತ್ತು ಆಕೆಯ ಕುಟುಂಬ ಸದಸ್ಯರು ತನಿಖೆಗೆ ಸಹಕರಿಸುತ್ತಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಅತ್ಯಾಚಾರದ ತನಿಖೆಗಾಗಿ ಕೋಲ್ಕತ್ತಾ ಪೊಲೀಸರು 9 ಸದಸ್ಯರ ಎಸ್ಐಟಿಯನ್ನು ರಚಿಸಿದ್ದಾರೆ. ಶಿಕ್ಷಣ ಸಂಸ್ಥೆಯಿಂದ ಸಿಸಿಟಿವಿ ದೃಶ್ಯಾವಳಿಗಳನ್ನು ಕೊಡುವಂತೆ ಸೂಚಿಸಿದ್ದಾರೆ.