ಇಂದಿನಿಂದ ರಣಜಿ ಕ್ವಾರ್ಟರ್ ಫೈನಲ್ ಪಂದ್ಯಗಳು ಆರಂಭವಾಗಲಿದೆ. ಒಟ್ಟು 8 ತಂಡಗಳು ಕ್ವಾಟರ್ ಫೈನಲ್ ಹಂತದಲ್ಲಿ ಹೋರಾಟ ನಡೆಸಲಿವೆ.ಮೊದಲ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜಮ್ಮುಕಾಶ್ಮೀರ ಹಾಗೂ ಕೇರಳ ತಂಡಗಳು ಮುಖಾಮುಖಿಯಾಗಲಿವೆ. ಎರಡನೇ ಪಂದ್ಯದಲ್ಲಿ ವಿದರ್ಭ ಮತ್ತು ತಮಿಳುನಾಡು ತಂಡಗಳು ಸೆಣಸಾಡಲಿವೆ. ಮೂರನೇ ಪಂದ್ಯದಲ್ಲಿ ಹರ್ಯಾಣ ತಂಡವು ಮುಂಬೈ ತಂಡದ ಸವಾಲನ್ನ ಎದುರಿಸಲಿದೆ. ನಾಲ್ಕನೇ ಪಂದ್ಯದಲ್ಲಿ ಸೌರಾಷ್ಟ್ರ ಹಾಗೂ ಗುಜರಾತ್ ತಂಡದ ನಡುವೆ ಪೈಪೋಟಿ ಜರುಗಲಿದೆ.

ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಗೆದ್ದಂತಹ ತಂಡಗಳು ಫೆಬ್ರವರಿ 16ರಿಂದ ಶುರುವಾಗಲಿರುವ ಸೆಮಿಫೈನಲ್ನಲ್ಲಿ ಆಡಲಿವೆ. ರಣಜಿ ಫೈನಲ್ ಪಂದ್ಯ ಫೆಬ್ರವರಿ 26ರಂದು ನಡೆಯಲಿದೆ..
ಅಭಿಷೇಕ್ . ಎಸ್