ಅಶ್ವವೇಗ 24/7 ಸತ್ಯಾನ್ವೇಷಣೆಯ ಓಟದಲ್ಲಿ
ಇದು ಸಮಾನತೆಯ ಹರಿಕಾರ ಶ್ರೀರಾಮಾನುಜಾಚಾರ್ಯರು ಕಂಡ ಸತ್ಯಾನ್ವೇಷಣೆ, ಮಹಾತ್ಮ ಗಾಂಧೀಜಿ ಕಂಡ ಕನಸಿನ ಸತ್ಯಾನ್ವೇಷಣೆ, ಸಮ ಸಮಾಜಕ್ಕೆ ಶ್ರಮಿಸಿದ ವಿಶ್ವಗುರು ಬಸವಣ್ಣ, ಅಂಬೇಡ್ಕರ್ರವರ ಸತ್ಯಾನ್ವೇಷಣೆ. ರಾಜಕೀಯ, ಆರ್ಥಿಕ, ಸಮಾಜಿಕ, ಶೈಕ್ಷಣಿಕ, ಸಿನಿಮಾ, ಕಲೆ, ಸಾಹಿತ್ಯದ ಸತ್ಯಾಸತ್ಯತೆಗಳ ಸತ್ಯಾನ್ವೇಷಣೆ.
ಹೌದು ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ನಮ್ಮದು. ವಿವಿಧತೆಯಲ್ಲಿ ಏಕತೆಯೇ ನಮ್ಮ ಭಾರತದ ವಿಶೇಷತೆ. ಈ ಸಮಾಜದಲ್ಲಿ ಮಾಧ್ಯಮಗಳ ಪಾತ್ರ, ಜವಾಬ್ದಾರಿ, ನೈತಿಕತೆ ಬಹಳ ಮುಖ್ಯ. ಸ್ಪಷ್ಟವಿಶ್ಲೇಷಣೆ, ಸಾಮಾಜಿಕ ಅರಿವು, ನಿಷ್ಪಕ್ಷಪಾತ, ನಿಖರ ಮಾಹಿತಿ, ಸುದ್ದಿ, ಸಮಾಚಾರಗಳನ್ನು ಪ್ರತಿಯೊಬ್ಬ ನಾಗರಿಕನಿಗೆ ತಲುಪಿಸುವಂತಹ ಕಾರ್ಯ ಮಾಧ್ಯಮ ಮಾಡುತ್ತದೆ. ಮಾಡಬೇಕಾಗಿದೆ. ಆ ನಿಟ್ಟಿನಲ್ಲಿ ಉಳಿದ ಮಾಧ್ಯಮಗಳಿಗಿಂತ ನಮ್ಮ ಅಶ್ವವೇಗ ಸುದ್ದಿ ವಾಹಿನಿ ವಿಭಿನ್ನವಾಗಿದೆ. ಆಧುನಿಕ ಸಮಾಜದಲ್ಲಿ ಪ್ರಬಲ ರಾಯಬಾರಿಯಾಗಿ ಮಾಧ್ಯಮ ಕೆಲಸ ಮಾಡಬೇಕಿದೆ.
ಇಂದಿನ ಪತ್ರಿಕೋದ್ಯಮ ತನ್ನ ಜವಾಬ್ದಾರಿಯನ್ನು ಮರೆಯುತ್ತಿದೆ. ಜಾತಿ, ಧರ್ಮ, ಭಾಷೆ ಆಧಾರದ ಮೇಲೆ ಸುದ್ದಿಗಳನ್ನು ಬಿತ್ತರಿಸುತ್ತಿವೆ. ಈ ಮೂಲಕ ಕೋಮು-ಸಂಘರ್ಷಗಳನ್ನು ಸೃಷ್ಟಿಸುತ್ತಿವೆ. ಆದ್ದರಿಂದ ಈಗಿನ ಸುದ್ದಿಮಾಧ್ಯಮಗಳಲ್ಲಿ ವೃತ್ತಿಪರತೆ ಕೊರತೆ ಎದ್ದು ಕಾಣುತ್ತಿದೆ. ಪತ್ರಕರ್ತರಿಗಿಂತ ಹೆಚ್ಚಾಗಿ ಉದ್ಯಮಿಗಳು ಈ ಕ್ಷೇತ್ರಕ್ಕೆ ಕಾಲಿಡುತ್ತಿದ್ದಾರೆ. ಒಬ್ಬ ಪತ್ರಕರ್ತನಿಗಿರಬೇಕಾದ ಯಾವ ಗುಣಗಳೂ ಇಲ್ಲ. ಇಂಥ ಪತ್ರಿಕೋದ್ಯಮ ಇಂದು ತನ್ನ ತನವನ್ನು ಕಳೆದುಕೊಳ್ಳುತ್ತಿದೆ. ಈ ಸಂದರ್ಭದಲ್ಲಿ ವೃತ್ತಿಪರ ಪತ್ರಕರ್ತರೇ ಸೇರಿ ಕಟ್ಟಿದ ಚಾನಲ್ ಅಶ್ವವೇಗ ಸುದ್ದಿ ವಾಹಿನಿ. ಅಶ್ವರಾಮಾನುಜಾ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಅಡಿಯಲ್ಲಿ ಅಶ್ವವೇಗ ಸುದ್ದಿ ವಾಹಿನಿ ಜನತೆಗೆ ಸುದ್ದಿಯನ್ನಷ್ಟೇ ಕೊಡುತ್ತಿದೆ. ನಾವು ಯಾವ ಸಿದ್ಧಾಂತವನ್ನೂ ಜನರ ಮೇಲೆ ಹೇರಿಲ್ಲ.. ಹೇರೋದೂ ಇಲ್ಲ. ಕಾಲ ಕಾಲಕ್ಕೆ ನಿಷ್ಪಕ್ಷಪಾತ ಸುದ್ದಿಗಳನ್ನು ಕಟ್ಟ ಕಡೆಯ ಸಾಮಾನ್ಯನಿಗೂ ತಲುಪಿಸುವಂತ ಗುರಿ ನಮ್ಮದು. ನಾವು ಯಾರ ಹಂಗಿಗೂ ಒಳಗಾಗಿಲ್ಲ ಅನ್ನೋದು ನಿಮ್ಮ ಕಣ್ಣು ಮುಂದೆಯೇ ಇದೆ.. ವಾಹಿನಿಯ ಮುಖಾಂತರ ಸ್ವತಂತ್ರವಾಗಿ, ನಿಷ್ಪಕ್ಷಪಾತವಾಗಿ ಕೆಲಸ ಮಾಡುತ್ತಿದ್ದೇವೆ. ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ವಿಭಿನ್ನರೀತಿಯಲ್ಲಿ ಪ್ರಸ್ತುತಪಡಿಸುತ್ತಿದ್ದೇವೆ.
ಕಾಲ ಕಾಲಕ್ಕೆ ಹೊಸ ಹೊಸ ಪ್ರಯತ್ನಗಳಿಗೆ, ಹೊಸ ಹೊಸ ಪ್ರಯೋಗಗಳಿಗೆ ಕೈ ಹಾಕಿ ಅದರಲ್ಲಿ ಯಶಸ್ಸು ಕಂಡು ಜನಸಾಮಾನ್ಯರಿಗೆ ಮಾಹಿತಿಯನ್ನು ತಲುಪಿಸುತ್ತಿದ್ದೇವೆ. ಪ್ರಚಲಿತ ವಿದ್ಯಮಾನಗಳನ್ನು ಜನಸಾಮಾನ್ಯರಿಗೆ ತಿಳಿಯಪಡಿಸಲಾಗುತ್ತಿದೆ. ಇಷ್ಟು ಮಾತ್ರವಲ್ಲ ಭ್ರಷ್ಟಾಚಾರಗಳನ್ನು, ಭ್ರಷ್ಟ ಅಧಿಕಾರಿಗಳ ಬಂಡವಾಳವನ್ನು ಬಯಲಿಗೆಳೆಯುವುದರ ಮೂಲಕ ಅವರಿಗೆ ತಕ್ಕ ಶಿಕ್ಷೆ ಆಗುವಂತೆ ಹಗಲು -ರಾತ್ರಿ ಶ್ರಮಿಸುತ್ತಿದ್ದೇವೆ.
ಅಶ್ವವೇಗ ವಾಹಿನಿ ಪ್ರತಿ ದಿನ ಕನ್ನಡಿಗರ ಮನ ಗೆಲ್ಲುತ್ತಿದೆ. ಪ್ರತಿ ನಿತ್ಯ ಈ ಸಮಾಜಕ್ಕೆ ಬೇಕಿರುವ, ಅದೇ ಸಮಾಜ ಎಚ್ಚೆತ್ತುಕೊಳ್ಳುವಂತಹ ಕಾರ್ಯವನ್ನು ಈ ನಮ್ಮ ವಾಹಿನಿ ಮಾಡುತ್ತಿದೆ. ಎಲ್ಲರನ್ನು ಪ್ರಶ್ನಿಸುವಂತಹ ಹಕ್ಕು ನಮ್ಮ ವಾಹಿನಿಗಿದೆ. ಭ್ರಷ್ಟ ಅಧಿಕಾರಿಗಳನ್ನ ಹಾಗೂ ಭ್ರಷ್ಟ ಜನನಾಯಕರನ್ನ ಪ್ರಶ್ನಿಸಲಾಗದೇ ಸಾಮಾನ್ಯ ಜನರು ಮೂಕರಾಗುತ್ತಿದ್ದಾರೆ ಇಂಥವರಿಗಾಗಿ ಹುಟ್ಟಿಕೊಂಡಿದ್ದೇ ಅಶ್ವವೇಗ ಸುದ್ದಿ ವಾಹಿನಿ. ಎಲ್ಲಿ ಅನ್ಯಾಯ, ಅಕ್ರಮ, ದೌರ್ಜನ್ಯಗಳಿರುತ್ತವೆಯೋ ಅಲ್ಲಿ ನಮ್ಮ ವಾಹಿನಿ ಇರುತ್ತೆ. ನೈತಿಕ ಹೊಣೆಗಾರಿಕೆಯಿಂದ ಕಾಲಕ್ಕನುಗುಣವಾಗಿ ನಿಷ್ಪಕ್ಷಪಾತವಾಗಿ ಒಂದಲ್ಲೊಂದು ರೀತಿಯಲ್ಲಿ ಈ ಸಮಾಜಕ್ಕೆ ಉತ್ತಮ ಕೊಡುಗೆಯನ್ನು ನೀಡಲಾಗುತ್ತಿದೆ.
ಈ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ದೊರಕಿಸಿಕೊಡುವುದೇ ಉದ್ದೇಶ ಅಶ್ವವೇಗ ವಾಹಿನಿಯ ಮೂಲ ಉದ್ದೇಶ. ಜನಪರ ಕಾಳಜಿಯ ವಿರಾಟ ರೂಪವಾಗಿ ಅಶ್ವವೇಗ ವಾಹಿನಿ ಅಸಹಾಯಕರ, ನಿರ್ಗತಿಕರ, ಶೋಷಿತರ ಆಸರೆಯಾಗಿ ದುಡಿಯುತ್ತಿದೆ. ಈ ಸಮಾಜಕ್ಕೆ ತನ್ನದೇ ಆದ ಹೊಸದೊಂದು ದೃಷ್ಟಿಕೋನದಲ್ಲಿ ಸುದ್ದಿ, ಸಮಾಚಾರಗಳೊಂದಿಗೆ ಸಮಾಜ ಸೇವಾಕಾರ್ಯಗಳನ್ನೂ ಮಾಡಿಕೊಂಡು ಬರುತ್ತಿದೆ.
ಎಲ್ಲಕ್ಕಿಂತ ಮುಖ್ಯವಾಗಿ ಜನ ಸಾಮಾನ್ಯರಿಗೆ ಬೇಕಿರುವಂತಹ ಸುದ್ದಿ ಹಾಗೂ ವಿಭಿನ್ನ ಕಾರ್ಯಕ್ರಮಗಳನ್ನು ಸಕಾಲಕ್ಕೆ ನೀಡುವುದರ ಮೂಲಕ ವೀಕ್ಷಕರ ಜೊತೆಗೆ ಉತ್ತಮ ಬಾಂಧವ್ಯವನ್ನು ಬೆಳೆಸಿಕೊಂಡಿದೆ. ಯಾರ ಒತ್ತಡಗಳಿಗೆ, ಬೆದರಿಕೆಗಳಿಗೆ ಮಣಿಯದೇ ತಮ್ಮದೇ ಆದ ಸಿದ್ಧಾಂತವನ್ನು ಇಟ್ಟುಕೊಂಡು ರಾಜ್ಯದ ಮೂಲೆ ಮೂಲೆಗೆ ತಲುಪುತ್ತಿದೆ. ಇದೇ ರೀತಿ ಇನ್ನು ಮುಂದೆಯೂ ನಮ್ಮ ವಾಹಿನಿಯನ್ನು ಬೆಂಬಲಿಸಿ ಎಂದು ವೀಕ್ಷಕರಲ್ಲಿ, ಓದುಗರಲ್ಲಿ ನಮ್ಮ ಕಳಕಳಿಯ ಮನವಿ.