
Ashwaveega News 24×7 ಸೆ. 16: ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣ ಸಂಬಂಧ ಒಂದ್ಕಡೆ ಎಸ್ಐಟಿ ತನಿಖೆ ನಡೆಸುತ್ತಿದೆ.. ಮತ್ತೊಂದೆಡೆ ಬಂಗ್ಲೆಗುಡ್ಡದಲ್ಲಿ ಮತ್ತೆ ಉತ್ಖನನ ಮಾಡುವಂತೆ ಕೋರಿ ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಕೆಯಾಗಿದೆ.
ಸದ್ಯ ಎಸ್ಐಟಿ ಬಂಗ್ಲೆಗುಡ್ಡ ರಹಸ್ಯ ಭೇದಿಸಲು ಮುಂದಾಗಿದ್ದು, ಕಾನೂನು ತಜ್ಞರ ಅಭಿಪ್ರಾಯ ಸಂಗ್ರಹಿಸಿ ಮುಂದಿನ ತನಿಖೆಗೆ ಪ್ಲಾನ್ ಮಾಡ್ತಿದೆ. ಸೌಜನ್ಯಾಳ ಮಾವ ವಿಠಲ ಗೌಡ ತಮ್ಮ ಪುರಂದರ ಗೌಡ ಹಾಗೂ ಸಂಬಂಧಿ ತುಕರಾಮ ಗೌಡ ಹೈಕೋರ್ಟ್ಗೆ ರಿಟ್ ಅರ್ಜಿ ಹಾಕಿದ್ದಾರೆ. ಬಂಗ್ಲೆಗುಡ್ಡೆಯಲ್ಲಿ ಶವ ಹೂತಿಟ್ಟಿರೋದನ್ನ ನಾವು ತೋರಿಸುತ್ತೇವೆ, ಅದನ್ನ ಉತ್ಖನನ ಮಾಡಲು ಎಸ್ಐಟಿಗೆ ಸೂಚನೆ ನೀಡಬೇಕೆಂದು ಮನವಿ ಮಾಡಿದ್ದಾರೆ.
ಈ ಕುರಿತು ಉತ್ತರಿಸಲು ಎಸ್ಐಟಿಗೆ ಹೈಕೋರ್ಟ್ ನೋಟಿಸ್ ನೀಡಿದೆ. ಸದ್ಯ ಬಂಗ್ಲೆಗುಡ್ಡದಲ್ಲಿ ಅರಣ್ಯ ಇಲಾಖೆ ಸರ್ವೇ ಕಾರ್ಯ ನಡೆಸಲು ಮುಂದಾಗಿದ್ದು, ಅರಣ್ಯ ಇಲಾಖೆ ವರದಿ ಆಧರಿಸಿ ಮುಂದಿನ ಕ್ರಮಕ್ಕೆ ಮುಂದಾಗಿದೆ.