ಆನೇಕಲ್: ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ವಿಶ್ವ ಆನೆ ದಿನ ಆಚರಿಸಲಾಯಿತು. ಉದ್ಯಾನವನದ ವ್ಯಾಪ್ತಿಯ ಒಳಪಡುವ ಸೀಗೆಕಟ್ಟೆ ಸಮೀಪ ಎಲ್ಲ ಅನೆಗಳಿಗೆ ಹಲಸು, ಕಲ್ಲಂಗಡಿ, ನೆಲಗಡಲೆಯಂತಹ ವಿಶೇಷ ಆಹಾರ ಒದಗಿಸಲಾಯಿತು. ಮೃಗಾಲಯದ ಸ್ವಯಂಸೇವಕರು ಆನೆಗಳ ನಡವಳಿಕೆ, ರೂಪಾಂತರಗಳು ಮತ್ತು ಅವುಗಳ ಪರಿಸರ ಮಹತ್ವದ ಕುರಿತು ಜಾಗೃತಿ ಅಧಿವೇಶನ ನಡೆಸಿಕೊಟ್ಟರು. ಮಾವುತರು ಹಾಗೂ ಆನೆ ಕುಟುಂಬ ಸಂಬಂಧವನ್ನು ಸಂದರ್ಶಕರಿಗೆ ವಿವರಿಸಲಾಯಿತು.
ರಸಪ್ರಶ್ನೆ, ಚಿತ್ರಸ್ಪರ್ಧೆ, ಅನೆಯ ಮುದ್ರೆಗಳು ಮತ್ತು ಅಳಿವಿನಂಚಿನಲ್ಲಿರುವ ಆನೆಮುಖ ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿತ್ತು. ಮಕ್ಕಳಿಗೆ ಫೇಸ್ಮಾಸ್ಕ್ ಸೇರಿ ಹಲವು ಸ್ಪರ್ಧೆ ಆಯೋಜಿಸ ಲಾಗಿತ್ತು. ಆನೆಗಳ ಬಗ್ಗೆ ಚಿತ್ರ ಬಿಡಿಸುವ ಸ್ಪರ್ಧೆ ಹೆಚ್ಚು ಗಮನ ಸೆಳೆಯಿತು.
ರಜಾದಿನವಾದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಉದ್ಯಾನದ ಪ್ರಾಣಿಗಳನ್ನು ನೋಡಲು ಆಗಮಿಸಿದ್ದರು. ಆನೆ ದಿನ ಎಂದು ತಿಳಿದು ಆಯೋಜಿಸಿದ್ದ ವಿಶೇಷ ಕಾರ್ಯಕ್ರಮ ಹಾಗೂ ಆನೆಗಳ ಪ್ರತಿದಿನದ ಚಲನವಲನ, ಆಹಾರ ಪದ್ಧತಿ, ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಇರುವ ಆನೆಗಳ ಸಂಖ್ಯೆ ಸೇರಿ ಹಲವು ಮಾಹಿತಿಯನ್ನು ಪಡೆದುಕೊಂಡರು.