ಚಳಿಗಾಲದಲ್ಲಿ ಕಾಡುವ ಪ್ರಮುಖ ಸಮಸ್ಯೆಗಳಲ್ಲಿ ಒಣ ತ್ವಚೆಯು ಒಂದು . ತಂಪಾದ ಗಾಳಿ ಮತ್ತು ಆರ್ದ್ರತೆಯ ಮಟ್ಟ ಕಡಿಮೆ ಇರುವುದು ಚರ್ಮದ ಸಮಸ್ಯೆಗಳಿಗೆ ಕಾರಣವಾಗುತ್ತದೆ . ಚಳಿಗಾಲದಲ್ಲಿ ಚರ್ಮವು ಶುಷ್ಕ ಮತ್ತು ನಿರ್ಜೀವಗೊಂಡು ತೆಳುವಾಗುತ್ತದೆ. ಪ್ರತಿ ಸೀಸನ್ನಲ್ಲೂ ತ್ವಚೆಯ ಆರೈಕೆ ಬಗ್ಗೆ ಕಾಳಜಿವಹಿಸುವುದು ಬಹಳ ಮುಖ್ಯ. ಅದರಲ್ಲೂ ಚಳಿಗಾಲದಲ್ಲಿ ತ್ವಚೆಯ ಆರೈಕೆಯತ್ತ ಹೆಚ್ಚು ಗಮನ ಹರಿಸಬೇಕು. ಇಲ್ಲದಿದ್ದರೆ, ಚರ್ಮದ ಶುಷ್ಕತೆ, ದದ್ದು , ಕಪ್ಪು ಮತ್ತು ಕಲೆಗಳು ಮತ್ತು ಪಿಗ್ಮೆಂಟೇಶನ್ ಹೆಚ್ಚಾಗುತ್ತದೆ.
ಚಳಿಗಾಲದಲ್ಲಿ ಸರಿಯಾಗಿ ಕಾಳಜಿ ವಹಿಸುವುದರಿಂದ ಕಾಂತಿಯುತ ತ್ವಚೆ ನಿಮ್ಮದಾಗುತ್ತದೆ. ಅದರಲ್ಲೂ ಮನೆಯಲ್ಲಿರುವ ತೆಂಗಿನ ಎಣ್ಣೆ ನಿಮ್ಮ ತ್ವಚೆಯ ಆರೈಕೆಗೆ ಹೆಚ್ಚು ಸಹಾಯಕವಾಗಿದೆ. ಪ್ರತಿದಿನ ಈ ಎಣ್ಣೆಯನ್ನು ಹಚ್ಚುವುದರಿಂದ, ನಿಮ್ಮ ಮುಖವು ಯಾವಾಗಲೂ ಹೊಳೆಯುತ್ತಿರುದೆ ಮತ್ತು ಮುಖದಲ್ಲಿರುವ ಕಪ್ಪು ಕಲೆಗಳು ನಿವಾರಣೆ ಆಗುತ್ತವೆ. ಹಾಗಾದ್ರೆ ತ್ವಚೆಗೆ ತೆಂಗಿನ ಎಣ್ಣೆ ಹೇಗೆ ಪ್ರಯೋಜನಕಾರಿ ಮತ್ತು ಇದನ್ನು ಬಳಸುವುದು ಹೇಗೆ ಎಂದು ತಿಳಿಯೋಣ ಬನ್ನಿ.
ಪ್ರತಿಯೊಬ್ಬರಿಗೂ ತಾವು ಸುಂದರವಾಗಿ ಕಾಣಬೇಕು ಎಂಬ ಆಸೆ ಇದ್ದೇ ಇರುತ್ತದೆ. ಆದರೆ ಚಳಿಗಾಲದಲ್ಲಿ ತಂಪಾದ ವಾತಾವರಣದಿಂದ ತುರಿಕೆ, ದದ್ದು, ಮೊಡವೆ, ಎಣ್ಣೆಯುಕ್ತ ಚರ್ಮ, ಚರ್ಮದ ಕಿರಿಕಿರಿ ಹೀಗೆ ಅನೇಕ ಸಮಸ್ಯೆಗಳು ನಮ್ಮನ್ನು ಕಾಡುತ್ತದೆ. ಆದರೆ ಈ ಎಲ್ಲಾ ಸಮಸ್ಯೆಗೂ ತೆಂಗಿನ ಎಣ್ಣೆಯನ್ನು ಮನೆಮದ್ದಾಗಿ ಬಳಸಬಹುದು . ತೆಂಗಿನ ಎಣ್ಣೆ ಮುಖಕ್ಕೆ ಹೇಗೆ ಪ್ರಯೋಜನಕಾರಿ ತೆಂಗಿನ ಎಣ್ಣೆ ತ್ವಚೆಗೆ ತುಂಬಾ ಪ್ರಯೋಜನಕಾರಿ ಎಂದು ತಿಳಿಸಿದೆ. ಇದರಲ್ಲಿ ತ್ವಚೆಗೆ ಬಹಳ ಅಗತ್ಯವಾಗಿರುವ ಅಂಶಗಳಿವೆ. ಈ ಎಣ್ಣೆಯನ್ನು ಮುಖಕ್ಕೆ ಹಚ್ಚುವುದರಿಂದ ಬಾಹ್ಯ ಸೋಂಕುಗಳಿಂದ ಚರ್ಮವನ್ನು ರಕ್ಷಿಸುತ್ತದೆ. ಅಲ್ಲದೇ ಇದು ನಮ್ಮ ಚರ್ಮಕ್ಕೆ ನೈಸರ್ಗಿಕ ಮಾಯಿಶ್ಚರೈಸರ್ ಆಗಿ ಕಾರ್ಯನಿರ್ವಹಿಸುತ್ತದೆ. ಕಣ್ಣುಗಳ ಕೆಳಗೆ ಮತ್ತು ತುಟಿಗಳಂತಹ ಸೂಕ್ಷ್ಮ ಪ್ರದೇಶಗಳಿಗೂ ತೆಂಗಿನ ಎಣ್ಣೆಯನ್ನು ಹಚ್ಚುವುದರಿಂದ ಕೆಲವೇ ದಿನಗಳಲ್ಲಿ ನಿಮ್ಮ ಮುಖವನ್ನು ಸುಂದರಗೊಳಿಸುತ್ತದೆ.
ತೆಂಗಿನ ಎಣ್ಣೆಯಲ್ಲಿರುವ ಕೊಬ್ಬಿನಾಮ್ಲಗಳು ತ್ವಚೆಯನ್ನು ಹೈಡ್ರೇಟ್ ಮಾಡುತ್ತದೆ. ಅಲ್ಲದೇ ಚರ್ಮವನ್ನು ಮೃದು ಮತ್ತು ಹೊಳೆಯುವಂತೆ ಮಾಡುತ್ತದೆ. ಇದರ ಪರಿಣಾಮದಿಂದ ಮುಖದ ಮೇಲೆ ಯಾವುದೇ ಸಮಸ್ಯೆ ಆಗುವುದಿಲ್ಲ ಮತ್ತು ಚರ್ಮವು ಒಳಗಿನಿಂದ ಸ್ವಚ್ಛವಾಗುತ್ತದೆ. ಅದರಲ್ಲೂ ಚಳಿಗಾಲದಲ್ಲಿ ಈ ಎಣ್ಣೆ ನಮಗೆ ಸಾಕಷ್ಟು ರೀತಿಯಲ್ಲಿ ಪ್ರಯೋಜನಕಾರಿ ಆಗಿದೆ. ತೆಂಗಿನೆಣ್ಣೆಯು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು, ಮೊಡವೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಇದು ಮುಖದ ಕೊಳೆಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ ತ್ವಚೆಯನ್ನು ಸುಂದರ ಮತ್ತು ಕಾಂತಿಯುತವಾಗಿಸುತ್ತದೆ. ತೆಂಗಿನ ಎಣ್ಣೆಯು ಎಲ್ಲಾ ರೀತಿಯ ಕಲೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಚರ್ಮದ ಸುಕ್ಕುಗಳನ್ನು ಕಡಿಮೆ ಮಾಡುತ್ತದೆ: ತೆಂಗಿನೆಣ್ಣೆಯಲ್ಲಿರುವ ಆ್ಯಂಟಿ-ಆಕ್ಸಿಡೆಂಟ್ಗಳು ಚರ್ಮದ ಸುಕ್ಕುಗಳನ್ನು ಕಡಿಮೆ ಮಾಡಲು ಮತ್ತು ಕಲೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಇದು ಮೊಡವೆ ಸಮಸ್ಯೆಗಳನ್ನೂ ನಿವಾರಿಸುತ್ತದೆ.
ಸೂರ್ಯನ ಹಾನಿಕಾರಕ ಕಿರಣಗಳಿಂದ ತೆಂಗಿನ ಎಣ್ಣೆಯಲ್ಲಿರುವ ಸನ್ ಪ್ರೊಟೆಕ್ಷನ್ ಫ್ಯಾಕ್ಟರ್ ಸೂರ್ಯನ ಹಾನಿಕಾರಕ ಕಿರಣಗಳಿಂದ ಚರ್ಮವನ್ನು ರಕ್ಷಿಸುತ್ತದೆ ಮತ್ತು ಒಳಗಿನಿಂದ ಚರ್ಮಕ್ಕೆ ಹಾನಿಯಾಗದಂತೆ ರಕ್ಷಿಸುತ್ತದೆ. ಇದು ಬಿಸಿಲಿನಿಂದ ಮುಖವನ್ನು ರಕ್ಷಿಸಲು ಸಹಾಯ ಮಾಡುತ್ತದೆ. ತೆಂಗಿನ ಎಣ್ಣೆಯಲ್ಲಿರುವ ಉರಿಯೂತದ ಗುಣಲಕ್ಷಣಗಳು ತ್ವಚೆಯ ಮೇಲಿನ ಕಲೆಗಳನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ. ಇದನ್ನು ಸರಿಯಾಗಿ ಬಳಸಿದರೆ ಮುಖಕ್ಕೆ ಪೋಷಣೆ ಸಿಗುತ್ತದೆ ಮತ್ತು ಮುಖದ ಅಂದ ಹೆಚ್ಚಾಗುತ್ತದೆ.
ಪ್ರತಿದಿನ ರಾತ್ರಿ ಮಲಗುವ ಮುನ್ನ ನಿಮ್ಮ ಮುಖಕ್ಕೆ ತೆಂಗಿನೆಣ್ಣೆ ಹಚ್ಚಿಕೊಳ್ಳಿ. ನಿಮ್ಮ ಮುಖವನ್ನು ಸ್ವಚ್ಛಗೊಳಿಸಿದ ನಂತರ ಬೇಕಾದರೂ ತೆಂಗಿನ ಎಣ್ಣೆಯನ್ನು ಹಚ್ಚಿ. ನಿಮ್ಮ ಕೈ ಮತ್ತು ಪಾದಗಳಿಗೂ ತೆಂಗಿನ ಎಣ್ಣೆಯನ್ನು ಹಚ್ಚಬಹುದು. ನೀವು ನಿಯಮಿತವಾಗಿ ನಿಮ್ಮ ಕೂದಲಿಗೆ ತೆಂಗಿನ ಎಣ್ಣೆಯನ್ನು ಹಚ್ಚಬಹುದು. ಇದು ಕೂದಲನ್ನು ಮೃದು, ರೇಷ್ಮೆ ಮತ್ತು ಹೊಳೆಯುವಂತೆ ಮಾಡುತ್ತದೆ.