E- ಆಸ್ತಿ ನೊಂದಣಿ ಹಾಗೂ ತಂತ್ರಾಂಶ ಗೊಂದಲ ಹಿನ್ನೆಲೆಯಲ್ಲಿ ಬೆಂಗಳೂರು ನೊಂದಣಿ ಮಹಾಪರಿವೀಕ್ಷಕರಿಂದ ಮಹತ್ವದ ಸುತ್ತೋಲೆ ಹೊರಡಿಸಿದೆ. ಸೆಪ್ಟೆಂಬರ್ 9 ರ ನಂತರ ನೊಂದಣಿಯಾಗಿರುವ ಆಸ್ತಿಗಳ ವಿವರಗಳ ಬಗ್ಗೆ ಸರ್ಕಾರ ತಪಾಸಣೆ ನಡೆಸುತ್ತಿದೆ.
ಕೆಲವು ಡೀಡ್ ರೈಟಸ್೯ ಸಹಕಾರದಿಂದ ಕಾನೂನು ಬಾಹಿರವಾಗಿ ಹಳೆಯ ಸಿಟಿಜನ್ ಐಡಿಯನ್ನ ಬಳಸಿ ಮ್ಯಾನುಯಲ್ ನೊಂದಣಿ ಮಾಡಿದವರ ವಿರುದ್ಧ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಲು ಮುಂದಾಗಿದೆ.