
ಮುಸ್ಲಿಂ ಸಮುದಾಯಕ್ಕೆ ವೋಟ್ ಬೇಡ ಅನ್ನೋ ಸ್ವಾಮೀಜಿ ಹೇಳಿಕೆಗೆ ಬೆಂಗಳೂರಿನಲ್ಲಿ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯೆ ನೀಡಿದ್ದಾರೆ. ಚಂದ್ರಶೇಖರ್ ಸ್ವಾಮೀಜಿಗಳು ಮುಸ್ಲಿಂ ಸಮುದಾಯಕ್ಕೆ ಮಾತ್ರವಲ್ಲ… ಯಾವುದೇ ಸಮುದಾಯಕ್ಕೆ ಈ ರೀತಿ ಪ್ರಚೋಧನಕಾರಿ ಹೇಳಿಕೆ ನೀಡಬಾರದು.
ಸದ್ಯ ಚಂದ್ರಶೇಖರ್ ಸ್ವಾಮೀಜಿ ತಮ್ಮ ಪ್ರಚೋದನಕಾರಿ ಹೇಳಿಕೆ ನೀಡಿದಕ್ಕೆ ಕ್ಷೇಮೆಯಾಚಿಸಿದ್ದಾರೆ. ಆದ್ರೆ ಇನ್ನೂ ಹಲವು ಸ್ವಾಮೀಜಿಗಳು ಇಂತಹ ಪ್ರಚೋಧನಕಾರಿ ಹೇಳಿಕೆ ನೀಡ್ತಿದ್ದು, ಇನ್ನೂಮುಂದೆ ಯಾರೇ ಆಗಲಿ ಇಂತಹ ಹೇಳಿಕೆ ನೀಡಬಾರದು ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ರು.