
averi girl abuse villagers-beat-woman who imprisoned minor girl
(ಅಶ್ವವೇಗ) Ashwaveega News 24×7 ಜು.02: ಅಪ್ರಾಪ್ತ ಬಾಲಕಿಯನ್ನು ಕೋಣೆಯಲ್ಲಿ ಕೂಡಿ ಹಾಕಿ ಚಿಂತ್ರಹಿಂಸೆ ನೀಡುತ್ತಿದ್ದ ಮಹಿಳೆಗೆ ಗ್ರಾಮಸ್ಥರು ಧರ್ಮದೇಟು ನೀಡಿರುವ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಬ್ಯಾಗವಾದಿ ಗ್ರಾಮದಲ್ಲಿ ನಡೆದಿದೆ.
ಬ್ಯಾಗವಾದಿ ಗ್ರಾಮಸ್ಥರು ಇತ್ತೀಚಿಗೆ ಲಕ್ಕವ್ವಳ ಮನೆಗೆ ತೆರಳಿ ಪರಿಶೀಲಿಸಿದ್ದರು. ಈ ವೇಳೆ 14 ವರ್ಷದ ಅಪ್ರಾಪ್ತ ಬಾಲಕಿಯನ್ನು ರೂಮ್ನಲ್ಲಿನ ಮಂಚದ ಕೆಳಗೆ ಕೂಡಿ ಹಾಕಿ ಲಕ್ಕವ್ವ ಚಿತ್ರಹಿಂಸೆ ಕೊಟ್ಟಿರುವುದು ಬೆಳಕಿಗೆ ಬಂದಿತ್ತು. ವಿಷಯ ತಿಳಿದ ಬ್ಯಾಗವಾದಿ ಗ್ರಾಮಸ್ಥರು ಮಹಿಳೆಗೆ ಧರ್ಮದೇಟು ಕೊಟ್ಟು ಬಾಲಕಿಯನ್ನು ರಕ್ಷಿಸಿದ್ದಾರೆ.
ಮನೆ ಬಿಟ್ಟು ಬಂದವರು, ಬಡವರು, ಅನಾಥರು, ನೊಂದ ಯುವತಿಯರು, ಬಾಲಕಿಯರನ್ನೇ ಮಹಿಳೆ ಟಾರ್ಗೆಟ್ ಮಾಡುತ್ತಿದ್ದಳಂತೆ. ಈ ಬಾಲಕಿಯರನ್ನು ಪುಸಲಾಯಿಸಿ ಮನೆಗೆ ಕರೆದುಕೊಂಡು ಬಂದು ಲಕ್ಷಾಂತರ ರೂಪಾಯಿಗೆ ಮಾರಾಟ ಅಥವಾ ಮದುವೆ ಮಾಡಿಕೊಡುತ್ತಿದ್ದಳು ಎಂಬ ಆರೋಪ ಕೇಳಿಬಂದಿದೆ.
ಲಕ್ಕವ್ವ ಹುಬ್ಬಳ್ಳಿ, ದಾವಣೆಗೆರೆ, ಹಾವೇರಿ, ಮತ್ತಿತರ ಬಸ್ ನಿಲ್ದಾಣಗಳಲ್ಲಿ ಓಡಾಡುತ್ತಿದ್ದ ಒಂಟಿ ಬಾಲಕಿಯರನ್ನು ಪರಿಚಯಿಸಿಕೊಂಡು, ಅವರಿಗೆ ಉದ್ಯೋಗ ಕೊಡಿಸುವುದಾಗಿ ಪುಸಲಾಯಿಸುತ್ತಿದ್ದಳು. ನಂತರ ಬಾಲಕಿಯರನ್ನು ಮನೆಗೆ ಕರೆದುಕೊಂಡು ಬರುತ್ತಿದ್ದಳು ಎನ್ನಲಾಗಿದೆ.
ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ಗ್ರಾಮಸ್ಥರ ಜೊತೆ ಲಕ್ಕವ್ವ ಜಗಳವಾಡಿದ್ದ ಎಂಬ ಆರೋಪ ಕೇಳಿಬಂದಿದೆ. ಆಗ, ಗ್ರಾಮಸ್ಥರು ಲಕ್ಕವ್ವಗೆ ಧರ್ಮದೇಟು ನೀಡಿದ್ದರು.