
Ashwaveega News 24×7 ಸೆ. 02: ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ತೀದೆ.. ಎರಡು ತಿಂಗಳಿನಿಂದ ದಿನಕ್ಕೊಂದು ನಾಟಕವಾಡಿದ್ದ ಬುರುಡೆ ಗ್ಯಾಂಗ್ಗೆ ಕ್ಷಣಕ್ಷಣಕ್ಕೂ ಢವಢವ ಶುರುವಾಗಿದೆ.. ಆರೋಪಿ ಚಿನ್ನಯ್ಯ ಹೇಳಿದ್ದೆಲ್ಲವೂ ಸುಳ್ಳು ಎಂದು ಗೊತ್ತಾಗುತ್ತಿದ್ದಂತೆ, ಎಸ್ಐಟಿ ಅಧಿಕಾರಿಗಳು ಫುಲ್ ಅಲರ್ಟ್ ಆಗಿದ್ದು, ಪ್ರತಿಯೊಂದು ಆಯಾಮಾದಲ್ಲೂ ತನಿಖೆ ನಡೆಸ್ತಿದೆ.
ಇಂಟ್ರೆಸ್ಟಿಂಗ್ ವಿಷ್ಯ ಅಂದ್ರೆ, ತನಿಖೆ ವೇಳೆ ಪ್ರಕರಣದ ಹಿಂದೆ ದೊಡ್ಡ ತಂಡವೇ ಕೆಲಸ ಮಾಡಿದೆ ಅನ್ನೋ ಅನುಮಾವೂ ವ್ಯಕ್ತವಾಗಿದೆ.. ಅಲ್ಲದೇ, ಬುರುಡೆ ಗ್ಯಾಂಗ್ಗೆ ವಿದೇಶಿ ಫಂಡ್ ಬಂದಿದೆ ಅನ್ನೋ ಆರೋಪವೂ ಕೇಳಿಬಂದಿದೆ. ಹೀಗಾಗಿ, ಧರ್ಮಸ್ಥಳ ಪ್ರಕರಣಕ್ಕೆ ಇಡಿ ಅಧಿಕೃತವಾಗಿ ಎಂಟ್ರಿಕೊಟ್ಟಿದೆ..
ಧರ್ಮಸ್ಥಳ ವಿರುದ್ಧ ಕೆಲವು ಯೂಟ್ಯೂಬರ್ಗಳು ಆಧಾರರಹಿತ ಆರೋಪಗಳನ್ನು ಮಾಡ್ತಿದ್ದಾರೆ ಎಂಬ ಆರೋಪ ಕೇಳಿಬಂದಿದ್ದವು.. ಅಪಪ್ರಚಾರದ ಹಿಂದೆ ವಿದೇಶದಿಂದ ಹಣದ ಮೂಲಗಳಿರುವ ಸಾಧ್ಯತೆಯಿದೆ ಎನ್ನಲಾಗಿದೆ.
ಈ ಕುರಿತು ಬಿಜೆಪಿ ನಾಯಕರು ಪದೇ ಪದೇ ಆರೋಪ ಮಾಡ್ತಾನೇ ಬಂದಿದ್ದಾರೆ.. ಇನ್ನೂ, ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಸೇರಿದಂತೆ ಬಜರಂಗದಳದ ಮುಖಂಡರು ಇಡಿಗೆ ದೂರು ಸಲ್ಲಿಸಿದ್ರು… ವಿದೇಶದಿಂದ ಬರುವ ಹಣದ ಮೂಲವನ್ನು ಪತ್ತೆಹಚ್ಚುವಂತೆ ಒತ್ತಾಯಿಸಿದ್ರು. ಇದ್ರ ಬೆನ್ನಲ್ಲೇ ಜಾತಿ ನಿರ್ದೇಶನಾಲಯ ಸದ್ದಿಲ್ಲದೇ ಪ್ರಕರಣಕ್ಕೆ ಎಂಟ್ರಿಕೊಟ್ಟಿದೆ.. ಈಗಾಗಲೇ ರಾಜ್ಯ ಪೊಲೀಸ್ ಇಲಾಖೆ ಹಾಗೂ SIT ಬಳಿ ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿಯನ್ನು ಕೇಳಿದೆ.
ಬುರುಡೆ ಗ್ಯಾಂಗ್ಗೆ ಷಡ್ಯಂತ್ರ ಹೆಣೆಯಲು ಹಣ ಎಲ್ಲಿಂದ ಬಂತು ಅನ್ನೋದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.. ಬುರುಡೆ ಗ್ಯಾಂಗ್ ಬೆಂಗಳೂರು, ಮಂಗಳೂರು, ದೆಹಲಿ, ತಮಿಳುನಾಡು ಸೇರಿದಂತೆ ಹಲವು ಭಾಗಗಳಲ್ಲಿ ಸಂಚಾರ ಮಾಡಿದೆ.. ಅಲ್ಲದೇ, ಕಳೆದ ಐದಾರು ಮ್ಯಾರಾಥನ್ ಮೀಟಿಂಗ್ ಮಾಡಿ, ಷಡ್ಯಂತ್ರಕ್ಕೆ ಪ್ಲ್ಯಾನ್ ರೂಪಿಸಿದೆ.. ಹಾಗಾದ್ರೆ, ಇದ್ರ ಕರ್ಚು ವೆಚ್ಚುಗಳನ್ನು ಯಾರು ನೋಡಿಕೊಂಡ್ರು ಅನ್ನೋದು ರಹಸ್ಯವಾಗಿ ಉಳಿದಿದೆ.
ಅಲ್ಲದೇ, ಧರ್ಮಸ್ಥಳ ವಿರುದ್ಧ ಆಧಾರರಹಿತ ಆರೋಪ ಮಾಡಿ, ಸುಳ್ಳು ಕಥೆಗಳನ್ನು ಸೃಷ್ಟಿಸಿ ವಿಡಿಯೋ ಮಾಡಲಾಗಿದೆ.. ಆದ್ರಿಂದ, ಕೆಲವು ಯುಟ್ಯೂಬರ್ಗಳು ಸೇರಿದಂತೆ ಗ್ಯಾಂಗ್ನ ಸದಸ್ಯರಿಗೆ ವಿದೇಶಿ ಫಂಡ್ ಬಂತಾ ಅನ್ನೋ ಚರ್ಚೆ ಶುರುವಾಗಿದೆ..
ಪ್ಲೋ
ಅದ್ರಲ್ಲೂ ಮುಖ್ಯವಾಗಿ ಎನ್ಜಿಒಗಳ ಮೂಲಕ ಗ್ಯಾಂಗ್ಗೆ ವಿದೇಶಿ ಹಣ ಹರಿದುಬಂದಿದೆ ಎಂಬ ಆರೋಪ ಕೇಳಿಬಂದಿದೆ.. ಹೀಗಾಗಿ, ಇಡಿ ಅಧಿಕಾರಿಗಳು ಹಲವು ಎನ್ಜಿಒಗಳ ಬ್ಯಾಂಕ್ ಅಕೌಂಟ್ಗಳನ್ನು ಜಾಲಾಡಿದ್ದಾರೆ. ಅಲ್ಲದೇ, ಕೆಲವು ಎನ್ಜಿಒಗಳ ಕಳೆದ 5 ವರ್ಷದ ಬ್ಯಾಂಕ್ ಡಿಟೇಲ್ಸ್ ನೀಡುವಂತೆ ಸೂಚಿಸಿದೆ. ಇನ್ನೂ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಕೂಡ, ಪ್ರಕರಣದಲ್ಲಿ ಯುಟ್ಯೂಬರ್ಗಳ ಕೈವಾಡ ಇದೆ ಎಂದು ಆರೋಪಿಸಿ ಎಸ್ಐಟಿ ದೂರು ಕೊಟ್ಟಿದ್ದಾರೆ.
ಧರ್ಮಸ್ಥಳ ಪ್ರಕರಣವನ್ನು ಎನ್ಐಟಿಗೆ ವಹಿಸುವಂತೆ ಬಿಜೆಪಿ ನಾಯಕರು ಆಗ್ರಹಿಸಿದ್ರು. ಅಲ್ಲದೇ, ಧರ್ಮಸ್ಥಳ ಚಲೋ ಕೈಗೊಂಡಿದ್ರು.. ಈ ಕುರಿತು ಗೃಹ ಸಚಿವ ಪರಮೇಶ್ವರ್ ಪ್ರತಿಕ್ರಿಯಿಸಿದ್ದು, ಯಾವುದೇ ಕಾರಣಕ್ಕೂ ಎನ್ಐಟಿ ವಹಿಸಲ್ಲಎಂದಿದ್ದಾರೆ. ಮಾತ್ರವಲ್ಲ, ವಿದೇಶಿ ಫಂಡ್ ಬಗ್ಗೆ ಇಡಿ ವಿಚಾರಣೆ ನಡೆಸಲು ನಮ್ಮ ಅಭ್ಯಂತರವಿಲ್ಲ ಎಂದಿದ್ದಾರೆ.
ಇನ್ನೂ ಧರ್ಮಸ್ಥಳ ವಿಚಾರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರು ನಡುವೆ ರಾಜಕೀಯ ಕೆಸರೆರಚಾಟ ಮುಂದುವರಿದಿದೆ. ಬಿಜೆಪಿ ನಾಯಕರು ಧರ್ಮಸ್ಥಳ ಚಲೋ ಮಾಡಲ್ಲ.. ದೆಹಲಿ ಚಲೋ ಮಾಡಲಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ಕುಣಿಗಲ್ ಶಾಸಕ ರಂಗನಾಥ್ ಕೂಡ, ಧರ್ಮಸ್ಥಳ ಚಲೋ ಕೈಗೊಂಡು ಬಿಜೆಪಿ ಕೌಂಟರ್ ಕೊಟ್ಟಿದ್ದಾರೆ. ಧರ್ಮದ್ರೋಹಿಗಳು ಧರ್ಮಸ್ಥಳ ಬಗ್ಗೆ ಅಪಮಾನ ಮಾಡ್ತಿದ್ದಾರೆ. ವೀರೇಂದ್ರ ಹೆಗ್ಗಡೆ ಅವರಿಗೂ ಅಪಮಾನ ಮಾಡುತ್ತಿದ್ದಾರೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಆಕ್ರೋಶ ಹೊರಹಾಕಿದ್ದಾರೆ. ನಟಿ ರಮ್ಯಾ ವಿರುದ್ಧ ಅವಾಚ್ಯ ಶಬ್ದ ಬಳಸಿದ್ದಕ್ಕೆ 12 ಜನರ ಅರೆಸ್ಟ್ ಆಯ್ತು. ಧರ್ಮಸ್ಥಳ ಧರ್ಮಾಧಿಕಾರಿಗಳ ಮೇಲೆ ಆರೋಪ ಮಾಡಿದ್ರು.. ಎಷ್ಡು ಜನರನ್ನ ಅರೆಸ್ಟ್ ಮಾಡಿದ್ರಿ ಎಂದು ಎಂಎಲ್ಸಿ ಸಿಟಿ ರವಿ ಪ್ರಶ್ನಿಸಿದ್ದಾರೆ.
ಒಟ್ನಲ್ಲಿ ಧರ್ಮಸ್ಥಳ ಕೇಸ್ಗೆ ಇಡಿ ಸದ್ದಿಲ್ಲದೇ ಎಂಟ್ರಿಕೊಟ್ಟಿದೆ. ನಿಜಕ್ಕೂ ಬುರುಡೆ ಗ್ಯಾಂಗ್ಗೆ ವಿದೇಶಿ ಫಂಡ್ ಬಂದಿದ್ರೆ ಇಡಿ ಇಕ್ಕಳದಲ್ಲಿ ಸಿಲುಕೋದ್ರಲ್ಲಿ ಯಾವುದೇ ಅನುಮಾನ ಇಲ್ಲ..