
Ashwaveega News 24×7 ಸೆ. 04: ಚೀನಾದಲ್ಲಿ ನಡೆದ ವಿಕ್ಟರಿ ಪರೇಡ್ನಲ್ಲಿ ಚೀನಾದ ಶಕ್ತಿ ಪ್ರದರ್ಶನ ಗುರಿಯಾಗಿಸಿಕೊಂಡು ಅಮೆರಿಕ ಅಧ್ಯಕ್ಷ ಟ್ರಂಪ್, ರಷ್ಯಾದ ಅಧ್ಯಕ್ಷ ಪುಟಿನ್ ಮತ್ತು ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ ಅಮೆರಿಕದ ವಿರುದ್ಧ ಸಂಚು ರೂಪಿಸುತ್ತಿದ್ದಾರೆಂದು ಆರೋಪಿಸಿದ್ದಾರೆ.
ಬೀಜಿಂಗ್ನಲ್ಲಿ ನಡೆದ ಬೃಹತ್ ಮಿಲಿಟರಿ ಮೆರವಣಿಗೆಯಲ್ಲಿ ನಾಯಕರು ತಮ್ಮ ಜಂಟಿ ಉಪಸ್ಥಿತಿಯನ್ನ ನಾನು ಗಮನಿಸುತ್ತಿದ್ದೇನೆ ಎಂಬ ಆಶಯ ಹೊಂದಿದ್ದರು ಅಂತಾ ಟ್ರಂಪ್ ಹೇಳಿದ್ರು. ಇದು ತುಂಬಾ ಪ್ರಭಾವಶಾಲಿಯಾಗಿದೆ ಎಂದು ನಾನು ಭಾವಿಸಿದೆ. ಆದ್ರೆ, ಅವರು ಈ ರೀತಿ ಮಾಡುತ್ತಿರುವುದರ ಹಿಂದಿನ ಕಾರಣ ನನಗೆ ಅರ್ಥವಾಯಿತು. ಮತ್ತು ನಾನು ನೋಡುತ್ತಿದ್ದೇನೆಂದು ಹೇಳಿದ್ರು.
ಇನ್ನೂ 2ನೇ ಮಹಾಯುದ್ಧದಲ್ಲಿ ಜಪಾನ್ ಸೋಲಿನ 80ನೇ ವಾರ್ಷಿಕೋತ್ಸವ ಆಚರಿಸುವುದಕ್ಕೆ ಚೀನಾದಲ್ಲಿ ಮಿಲಿಟರಿ ಮೆರವಣಿಗೆ ನಡೆದಿದೆ. ಪುಟಿನ್, ಕ್ಸಿ, ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಮತ್ತು ಬೆಲರೂಸಿಯನ್ ಅಧ್ಯಕ್ಷ ಅಲೆಕ್ಸಾಂಡರ್ ಲುಕಾಶೆಂಕೊ ಅವರಂತಹ ಕಕ್ಷಿದಾರ ನಾಯಕರ ನಡುವೆ ಹರ್ಷಚಿತ್ತದಿಂದ ಸಂವಾದ ನಡೆದಿರುವುದು ಈಗ ಅಮೆರಿಕ ಕೆಂಗಣ್ಣಿಗೆ ಗುರಿಯಾಗಿದೆ.