
karnataka health department bans 15 drugs including paracetamol
ಪ್ಯಾರಸಿಟಮೋಲ್ (ಪೋಮೋಲ್-650), ಮೈಸೂರು ಮೂಲಕ ಕಂಪೆನಿಯ ಓ ಶಾಂತಿ ಗೋಲ್ಡ್ ಕ್ಲಾಸ್ ಕುಂಕುಮ್ ಸೇರಿದಂತೆ ವಿವಿಧ ಕಂಪನಿಗಳ ಒಟ್ಟು 15 ಕಾಂತಿವರ್ಧಕ ಹಾಗೂ ಔಷಧಿಗಳು ಅಸುರಕ್ಷಿತ ಎಂದು ರಾಜ್ಯ ಸರ್ಕಾರದ ಆಹಾರ ಸುರಕ್ಷತೆ ಮತ್ತು ಔಷಧ ಇಲಾಖೆ ಸುತ್ತೋಲೆ ಹೊರಡಿಸಿದೆ.
ಬುಧವಾರ ಆಹಾರ ಸುರಕ್ಷತೆ ಮತ್ತು ಔಷಧ ಇಲಾಖೆ ಉಪ ಔಷಧ ನಿಯಂತ್ರಣಾಧಿಕಾರಿ ಬಿ.ಪಿ.ಅರುಣ್ ಸುತ್ತೋಲೆ ಹೊರಡಿಸಿದ್ದು, ಆರೋಗ್ಯ ಇಲಾಖೆಯು ಮೇ ತಿಂಗಳಲ್ಲಿ ಕಾಂತಿವರ್ಧಕ ಔಷಧ ಹಾಗೂ ಔಷಧಗಳ ಸ್ಯಾಂಪಲ್ಸ್ ಪಡೆದು, ತಪಾಸಣೆ ನಡೆಸಲಾಗಿದೆ. ಈ ಕೆಳಕಂಡ ಔಷಧಗಳು ಬಳಕೆಗೆ ಯೋಗ್ಯವಲ್ಲ ಎಂದು ಎಚ್ಚರಿಸಿದ್ದಾರೆ.
ಅಸುರಕ್ಷಿತ ಔಷಧಗಳು: ಪ್ಯಾಂಟೋಕೋಟ್-ಡಿಎಸ್ಆರ್ (ಪ್ಯಾಂಟೋಫ್ರಜೋಲ್ ಗ್ಯಾಸ್ಟ್ರೋ-ರಿಜಿಸ್ಟೆಂಟ್ ಆಂಡ್ ಡೋಮ್ಫೆರಿಡನ್ ಪ್ರೋಕಾಂಗಡ್ ರಿಲಿಸ್ ಕ್ಯಾಪ್ಸೂಲ್ಸ್ ಐಪಿ, ಸೋಡಿಯಂ ಕ್ಲೋರೈಡ್ ಇನ್ಜೆಕ್ಷನ್ ಐಪಿ 0.9% ಡಬ್ಲ್ಯೂ/ವಿ (ಎನ್ಎಸ್). ಸೋಡಿಯಂ ಕ್ಲೋರೈಡ್ ಇನ್ಜೆಕ್ಷನ್ ಐಪಿ 0.9% ಡಬ್ಲ್ಯೂ/ವಿ (ಎನ್ಎಸ್), ಅಲ್ಪಾ ಲಿಪೊಯಿಕ್ ಆಸಿಡ್, ಪೊಲಿಕ್ ಆಸಿಡ್, ಮಿಥೈಲ್ ಕೋಬಾಲಮಿನ್, ವಿಟಮಿನ್ ಬಿ6 ಆಂಡ್ ವಿಟಮಿನ್ ಡಿ3 ಟ್ಯಾಬ್ಲೆಟ್ಸ್.
ಕಂಪೌಂಡ್ ಸೋಡಿಯಂ ಲ್ಯಾಕ್ಟೆಟ್ ಇನ್ಜೆಕ್ಷನ್ ಐಪಿ, ಕಂಪೌಂಡ್ ಸೋಡಿಯಂ ಲ್ಯಾಕ್ಟೆಟ್ ಇನ್ಜೆಕ್ಷನ್ ಐಪಿ, ಪೊಮೋಲ್-650 (ಪ್ಯಾರಾಸಿಟಮೋಲ್ ಟ್ಯಾಬ್ಲೆಟಸ್ ಐ.ಪಿ 650 ಎಂಜಿ), ಮಿಟು ಕ್ಯೂ7 ಸಿರಪ್, ಸ್ಟೈರಲ್ ಡಿಲ್ಯೈಯಂಟ್ ಪಾರ್ ರೆಕಾನೋಸ್ಟಿಟಿಶ್ಯೂನ್ ಆಪ್ ಎನ್ಡಿ, ಐಬಿ, ಐಬಿಡಿ ಆಂಡ್ ಕಾಂಬಿನೇಷನ್ ವ್ಯಾಕ್ಸಿನ್ಸ್ ಫಾರ್ ಪೌಲ್ಟ್ರೀ (ವೆಟರ್ನರಿ) ಮಲ್ಟಿ ಡೋಸ್ ವಿಲಾ 200 ಎಂಲ್,ಸ್ಪಾನ್ಪ್ಲಾಕ್ಸ್-ಓಡ್ ಟ್ಯಾಬ್ಲೆಟ್ಸ್ (ಓಪ್ಲಾಕ್ಸಸಿನ್ ಆಂಡ್ ಓರ್ನಿಡಜೋಲ್ ಟ್ಯಾಬ್ಲೆಟ್ಸ್ ಐಪಿ).
ಪಿರಾಸಿಡ್-ಓ ಸಸ್ಪೆನ್ಶನ್ (ಸಲ್ಕ್ರಾಲ್ಫೇಟ್ ಆಂಡ್ ಆಕ್ಸೆಟಾಕೈನ್ ಸಸ್ ಪೆನ್ಶನ್), ಗ್ಲಿಮಿಜ್-2 (ಗ್ಲಿಮಿಫೆರೈಡ್ ಟ್ಯಾಬ್ಲೆಟ್ಸ್ ಐಪಿ 2ಎಂಜಿ), ಐರನ್ ಸುಕ್ರೋಸ್ ಇನ್ಜೆಕ್ಷನ್ ಯುಎಸ್ಪಿ 100ಎಂಜಿ (ಐರೋಗೈನ್), ಕಂಪೌಂಡ್ ಸೋಡಿಯಂ ಲ್ಯಾಕ್ಟೆಟ್ ಇನ್ಜೆಕ್ಷನ್ ಐಪಿ (ರಿಂರ್ಗ ಲ್ಯಾಕ್ಟೆಟ್ ಸಲೂಷನ್ ಪಾರ್ ಇನ್ಜೆಕ್ಷನ್ ಆರ್ಎಲ್.
ಈ ಈ ಔಷಧಿ ಮತ್ತು ಕಾಂತಿವರ್ಧಕಗಳನ್ನು ಔಷಧ ವ್ಯಾಪಾರಿಗಳು, ಮಾರಾಟಗಾರರು, ವೈದ್ಯರು, ಆಸ್ಪತ್ರೆ ಮತ್ತು ನರ್ಸಿಂಗ್ ಹೋಂನವರು ದಾಸ್ತಾನು ಮತ್ತು ಮಾರಾಟ ಮಾಡುವುದು ಅಥವಾ ಉಪಯೋಗಿಸುವುದನ್ನು ನಿಷೇಧಿಸಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.