
Bengaluru Cafe Staff 'Brutally Assaulted' For Denying Extra coffee cup
(ಅಶ್ವವೇಗ) Ashwaveega News 24×7 ಜು.03: ಗ್ರಾಹಕರು ಹೆಚ್ಚುವರಿಯಾಗಿ ಕೇಳಿದ ಟೀ ಕಪ್ ಕೊಡಲು ನಿರಾಕರಿಸಿದ ಕೆಫೆ ಸಿಬ್ಬಂದಿ ಮೇಲೆ ಮಾರಣಾಂತಿಕ ಹಲ್ಲೆ ನಡೆದಿರುವ ಅಘಾತಕಾರಿ ಘಟನೆ ಬೆಂಗಳೂರಿನ ಶೇಷಾದ್ರಿಪುರಂ ನ ನಮ್ಮ ಫಿಲ್ಟರ್ ಕಾಫಿ ಶಾಪ್ ನಲ್ಲಿ ವರದಿಯಾಗಿದೆ
ನಾಲ್ವರು ದುಷ್ಕರ್ಮಿಗಳು ಕೆಫೆ ಸಿಬ್ಬಂದಿ ಮೇಲೆ ದರ್ಪ ತೋರಿದ್ದಾರೆ. ಜು.02 ರಂದು ಸಂಜೆ 6:50ರ ಸುಮಾರಿಗೆ ಈ ಘಟನೆ ನಡೆದಿದೆ. ಕಾಫಿ ಶಾಪ್ಗೆ ಬಂದಿದ್ದ ನಾಲ್ವರು ಕಾಫಿಯನ್ನು ಕೊಂಡು ಮತ್ತೊಂದು ಕಪ್ ಕೇಳಿದ್ದಾರೆ. ಈ ವೇಳೆ, ಹೋಟೆಲ್ ಸಿಬ್ಬಂದಿ ಕೊಡಲು ನಿರಾಕರಿಸಿದ್ದಾರೆ.
ಸಿಬ್ಬಂದಿಯ ಉತ್ತರದಿಂದ ತೀವ್ರ ಆಕ್ರೋಶಗೊಂಡ ನಾಲ್ವರು, ಸಿಬ್ಬಂದಿಗೆ ಅವಾಚ್ಯವಾಗಿ ನಿಂದಿಸಿ, ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಕಪಾಳಕ್ಕೆ ಹೊಡೆದು, ಮುಖಕ್ಕೆ ಗುದ್ದಿ, ಕಾಲಿನಿಂದ ಹೊಟ್ಟೆಗೆ ಒದ್ದಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗತೊಡಗಿದೆ.