Pavithra Gowda
Ashwaveega News 24×7 ಅ. 30: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ 7 ಆರೋಪಿಗಳ ಜಾಮೀನು ರದ್ದಾಗಿ ಮತ್ತೆ ಜೈಲು ಸೇರಿದ್ದಾರೆ. ಈಗ ದರ್ಶನ್ ಹಾಗೂ ಇತರ ಆರೋಪಿಗಳನ್ನು ಪರಪ್ಪನ ಅಗ್ರಹಾರ ಜೈಲಿಂದ ಶಿಫ್ಟ್ ಮಾಡಲು ಎಸ್ಪಿಪಿ ಅರ್ಜಿ ಸಲ್ಲಿಸಿದ್ದು ಅದರ ವಿಚಾರಣೆ ನಡೆದಿದೆ.
ಒಂದು ಕಡೆ ಪೊಲೀಸರು ದರ್ಶನ್ ಸೇರಿ ಇತರ ಆರೋಪಿಗಳನ್ನು ಬೇರೆ ಜೈಲಿಗೆ ಶಿಫ್ಟ್ ಮಾಡುವ ಯೋಚನೆಯಲ್ಲಿದ್ದರೆ ಇತ್ತ ಪವಿತ್ರಾ ಗೌಡ ಅವರು ಜಾಮೀನು ಪಡೆಯೋಕೆ ಸರ್ಕಸ್ ಶುರು ಮಾಡಿದ್ದಾರೆ.
ಈಗಾಗಲೇ ಎಸ್ಪಿಪಿ ಅರ್ಜಿ ವಿಚಾರಣೆ ಮಾಡಿ ದರ್ಶನ್ ಹಾಗೂ ಇತರ ಆರೋಪಿಗಳಿಗೆ ಆಕ್ಷೇಪಣೆ ಸಲ್ಲಿಸುವಂತೆ ಕೋರ್ಟ್ ಹೇಳಿದ್ದ ಬೆನ್ನಲ್ಲಿ ಇಂದು ದರ್ಶನ್ ಪರ ವಕೀಲರು ಆಕ್ಷೇಪಣೆ ಸಲ್ಲಿಸಿದ್ದಾರೆ.
ಅದೇ ರೀತಿ ಪವಿತ್ರಾ ಗೌಡ ಪರ ವಕೀಲ ಬಾಲನ್ ಅವರು ಪವಿತ್ರಾಗೆ ಜಾಮೀನು ಸಿಗೋಕೆ ವಾದ ಮಾಡಿದ್ದಾರೆ. ಅತ್ತ ದರ್ಶನ್ ಲಾಯರ್ ನಟನನ್ನು ಬಳ್ಳಾರಿಗ ಶಿಫ್ಟ್ ಮಾಡಬಾರದು. ಅವರ ತಾಯಿಗೆ ಹುಷಾರಿಲ್ಲ. ವಿಚಾರಣೆಗೆ ಹಾಜರಾಗೋಕೆ ಕಷ್ಟ ಆಗುತ್ತೆ ಎಂದು ಹೇಳಿ ಶಿಫ್ಟ್ ಮಾಡದಂತೆ ಹೇಳಿದ್ದಾರೆ. ಸದ್ಯ ಈ ಎರಡೂ ಪ್ರಕರಣದಲ್ಲಿ ವಾದ ವಿವಾದ ಆಲಿಸಿದ ಕೋರ್ಟ್ ಎರಡಕ್ಕೂ ಸಂಬಂಧಿಸಿದ ವಿಚಾರಣೆ ಮುಂದೂಡಿದೆ.
ದರ್ಶನ್ ಗೆ ದಿಂಬು, ಬೆಡ್ ಶೀಟ್, ಕೋರಿರುವ ಅರ್ಜಿ ಸೆಪ್ಟೆಂಬರ್ 2 ಕ್ಕೆ ಮುಂದೂಡಿಕೆಯಾಗಿದೆ. ಬಳ್ಳಾರಿ ಗೆ ಶಿಫ್ಟ್ ಮಾಡುವ ಸಂಬಂಧ ಸಹ ಅರ್ಜಿ ಸೆಪ್ಟೆಂಬರ್ 2 ಕ್ಕೆ ಮುಂದೂಡಲಾಗಿದೆ. ಪವಿತ್ರಗೌಡ ಜಾಮೀನು ಅರ್ಜಿ ತೀರ್ಪು ಸೆಪ್ಟೆಂಬರ್ 2 ಕಾಯ್ದಿರಿಸಿದ 64 ನೇ ಸಿಸಿಹೆಚ್ ಕೋರ್ಟ್ ವಿಚಾರಣೆ ಮುಂದೂಡಿದೆ.
