Ashwaveega News 24×7 ಫೆಬ್ರವರಿ 16 -2026 : ಏರಿಕೆ ಬಳಿಕ ಬಂಗಾರದ ದರದಲ್ಲಿ ಭಾರೀ ಕುಸಿತ ಕಂಡುಬಂದಿದೆ. ಕಳೆದ ಕೆಲವು ವಾರಗಳಿಂದ ಏರಿಳಿತದ ಹಾದಿಯಲ್ಲಿದ್ದ ಚಿನ್ನದ ಬೆಲೆ ಇದೀಗ ಸ್ವಲ್ಪ ಮಟ್ಟಿಗೆ ಇಳಿಕೆಯಾಗಿದ್ದು, ಆಭರಣ ಪ್ರಿಯರಿಗೆ ನಿರಾಳತೆಯನ್ನು ತಂದಿದೆ.
10 ಗ್ರಾಂ ಚಿನ್ನದ ಬೆಲೆ ಈಗ 1 ಲಕ್ಷ 59 ಸಾವಿರ ರೂಪಾಯಿಗೆ ಇಳಿದಿದೆ. ಕೆಲವೇ ದಿನಗಳ ಹಿಂದೆ ಇದೇ ಚಿನ್ನದ ಬೆಲೆ 1 ಲಕ್ಷ 80 ಸಾವಿರ ರೂಪಾಯಿ ವರೆಗೆ ಏರಿಕೆಯಾಗಿತ್ತು. ಅಂದರೆ ಅಲ್ಪಾವಧಿಯಲ್ಲೇ ಸುಮಾರು 20 ಸಾವಿರ ರೂಪಾಯಿಯಷ್ಟು ಇಳಿಕೆ ಕಂಡುಬಂದಿದೆ.
ಡಾಲರ್ ಎದುರು ರೂಪಾಯಿ ಮೌಲ್ಯದಲ್ಲಿ ಉಂಟಾದ ಬದಲಾವಣೆ ಹಾಗೂ ಜಾಗತಿಕ ಮಾರುಕಟ್ಟೆಯ ಏರಿಳಿತಗಳು ಚಿನ್ನದ ಬೆಲೆಯ ಮೇಲೆ ಪರಿಣಾಮ ಬೀರಿವೆ . ಅಂತರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಬೇಡಿಕೆ ಮತ್ತು ಹೂಡಿಕೆ ಧೋರಣೆಯಲ್ಲಾದ ಬದಲಾವಣೆಗಳೂ ಬೆಲೆ ಇಳಿಕೆಗೆ ಕಾರಣವಾಗಿವೆ .
ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡಿರುವುದರಿಂದ ಗ್ರಾಹಕರಿಗೆ ಇದು ಗುಡ್ನ್ಯೂಸ್ ಆಗಿದ್ದರೂ , ಹೆಚ್ಚು ದರದಲ್ಲಿ ಹೂಡಿಕೆ ಮಾಡಿದ ಹೂಡಿಕೆ ದಾರರಿಗೆ ಮಾತ್ರ ಶಾಕ್ ಆಗಿದೆ.
ಒಟ್ಟಾರೆ , ಚಿನ್ನದ ಮಾರುಕಟ್ಟೆಯಲ್ಲಿ ಮುಂದಿನ ದಿನಗಳಲ್ಲಿ ಮತ್ತೆ ಏರಿಕೆ ಕಾಣಬಹುದೇ ಅಥವಾ ಇನ್ನಷ್ಟು ಇಳಿಕೆಯಾಗ ಬಹುದೇ ಎಂಬುದನ್ನು ಕಾದು ನೋಡಬೇಕಾಗಿದೆ.
