ಬಿಗ್ ಬಾಸ್ ಸ್ಪರ್ಧಿ ಚೈತ್ರಾ ಮೇಲೆ ಉದ್ಯಮಿ ಗೋವಿಂದ ಪೂಜಾರಿ ಅವರಿಗೆ ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ವಂಚಿಸಿದ್ದಾರೆ ಎನ್ನುವ ಆರೋಪವಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್ ಬಾಸ್ ಸ್ಪರ್ಧಿ ಚೈತ್ರಾ ಕೆಲ ದಿನಗಳ ಕಾಲ ಜೈಲು ವಾಸ ಕೂಡ ಅನುಭವಿಸಿದ್ರು. ಜಾಮೀನು ಪಡೆದು ಹೊರ ಬಂದ ಚೈತ್ರಾ ಈಗ ಬಿಗ್ ಬಾಸ್ ಮನೆಯಲ್ಲಿದ್ದಾರೆ.
ಇದೀಗ ನ್ಯಾಯಾಲದಲ್ಲಿ ಚೈತ್ರಾ ಮೇಲಿನ ವಂಚನೆ ಪ್ರಕರಣದ ವಿಚಾರಣೆ ನಡೆದಿದ್ದು, ವಿಚಾರಣೆಗೆ ಚೈತ್ರಾ ಹಾಜರಾಗಿಲ್ಲ… ಮುಂದಿನ ವಿಚಾರಣೆಯಲ್ಲಿ ಚೈತ್ರಾ ಹಾಜರಾಗುವುದಾಗಿ ಚೈತ್ರಾ ಪರ ವಕೀಲರು ಮನವಿ ಮಾಡಿದ್ದು, ವಿಚಾರಣೆ ಡಿಸೆಂಬರ್ 3ಕ್ಕೆ ಮೂಂದೂಡಿದೆ. ಕೋರ್ಟ್ ವಿಚಾರಣೆಗೆ ಹಾಜರಾಗಲು ಚೈತ್ರಾ ಬಿಗ್ ಬಾಸ್ ಮನೆಯಿಂದ ಹೊರ ಬರ್ತಾರಾ ಎನ್ನುವ ಪ್ರಶ್ನೆ ಎದ್ದಿದೆ.