Ashwaveega News 24×7 ಫೆಬ್ರವರಿ 23 – 2026 ಬೆಂಗಳೂರು : ಸ್ಯಾಂಡಲ್ವುಡ್ ನಟ Darshan Thoogudeepa ವಿರುದ್ಧ ದಾಖಲಾಗಿರುವ ಕೊಲೆ ಪ್ರಕರಣದಲ್ಲಿ ಇಂದು ಮಹತ್ವದ ಬೆಳವಣಿಗೆ ನಡೆದಿದೆ. ಪ್ರಕರಣದ ವಿಚಾರಣೆಯನ್ನು ತ್ವರಿತಗತಿಯಲ್ಲಿ, ಡೇ ಟು ಡೇ ಬೆಸಿಸ್ನಲ್ಲಿ ನಡೆಸುವಂತೆ ಕೋರಿ ದರ್ಶನ್ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ಈ ಅರ್ಜಿಯ ವಿಚಾರಣೆ ಇಂದು ನಡೆಯಲಿದ್ದು, ಪ್ರಾಸಿಕ್ಯೂಷನ್ ಪರದಿಂದ ಆಕ್ಷೇಪಣೆ ವ್ಯಕ್ತವಾಗುವ ಸಾಧ್ಯತೆ ಇದೆ . ಪ್ರತಿದಿನ ವಿಚಾರಣೆ ನಡೆಸುವುದರಿಂದ ಸಾಕ್ಷಿದಾರರ ಲಭ್ಯತೆ ಮತ್ತು ಪ್ರಕ್ರಿಯಾ ಸಂಬಂಧಿತ ಅಡಚಣೆಗಳ ಬಗ್ಗೆ ಸರ್ಕಾರದ ವಕೀಲರು ಪ್ರಶ್ನೆ ಎತ್ತುವ ಸಾಧ್ಯತೆ ಇದೆ.
ಇನ್ನೊಂದೆಡೆ, ಪ್ರಕರಣದ ಪ್ರಮುಖ ಸಾಕ್ಷಿದಾರರ ವಿಚಾರಣೆ ಕೂಡ ಮುಂದುವರಿದಿದೆ . ಟ್ರಯಲ್ಗೆ ಸಂಬಂಧಿಸಿದಂತೆ ಆರೋಪಿಗಳು ಕೋರ್ಟ್ಗೆ ಹಾಜರಾಗಿದ್ದು, ದರ್ಶನ್ ಸೇರಿದಂತೆ Pavithra Gowda ಮತ್ತು ಇತರೆ ಆರೋಪಿಗಳು ಸೇರಿ ಒಟ್ಟು ಏಳು ಮಂದಿ ವೀಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಿದ್ದಾರೆ .
ದರ್ಶನ್ ಸಲ್ಲಿಸಿರುವ ಅರ್ಜಿಗೆ ಕೋರ್ಟ್ ಯಾವ ತೀರ್ಮಾನ ಕೈಗೊಳ್ಳಲಿದೆ ಎಂಬುದು ಕುತೂಹಲ ಕೆರಳಿಸಿದೆ. ಡೇ ಟು ಡೇ ವಿಚಾರಣೆ ಅನುಮೋದನೆ ಸಿಕ್ಕರೆ ಪ್ರಕರಣದ ವಿಚಾರಣೆ ವೇಗ ಪಡೆಯುವ ಸಾಧ್ಯತೆ ಇದೆ.
