
cockroach found in pongal
Ashwaveega News 24×7 ಜು. 24: ರಾಜಧಾನಿ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ ಜನಪ್ರಿಯ ರಾಮೇಶ್ವರಂ ಕೆಫೆಯಲ್ಲಿ ಖರೀದಿಸಿದ ಪೊಂಗಲ್ನಲ್ಲಿ ಜಿರಳೆ ಪತ್ತೆಯಾಗಿದ್ದು, ಗ್ರಾಹಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ
ಇಂದು ಬೆಳಗ್ಗೆ (ಜುಲೈ 24, 2025 ರಂದು 07:42 ಕ್ಕೆ) ಲೋಕನಾಥ್ ಅವರು ವಿಮಾನ ನಿಲ್ದಾಣದ ರಾಮೇಶ್ವರಂ ಕೆಫೆಯಿಂದ 300 ರೂಪಾಯಿ ಹಣ ನೀಡಿ ಪೊಂಗಲ್ ಮತ್ತು 180 ರೂ.ಗೆ ಫಿಲ್ಟರ್ ಕಾಫಿ ಖರೀದಿಸಿದ್ದರು. ಒಟ್ಟು ಬಿಲ್ 504 ರೂ. ಆಗಿತ್ತು. ಅವರು ಅದನ್ನು ತಿನ್ನುತ್ತಿದ್ದಾಗ ಅದರಲ್ಲಿ ಜಿರಳೆ ಕಾಣಿಸಿಕೊಂಡಿದೆ.
ತಕ್ಷಣವೇ ಅವರು ಹೋಟೆಲ್ ಸಿಬ್ಬಂದಿಯನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಹೋಟೆಲ್ ಸಿಬ್ಬಂದಿ ತಪ್ಪಾಗಿದೆ ಎಂದು ಕೈ ಮುಗಿದು ಕೇಳಿಕೊಂಡಿದ್ದಾರೆ.
ಈ ಘಟನೆ ಗ್ರಾಹಕ ವಲಯದಲ್ಲಿ ತೀವ್ರ ಅಸಮಾಧಾನ ಮೂಡಿಸಿದ್ದು, ಆಹಾರ ಗುಣಮಟ್ಟ ಮತ್ತು ನೈರ್ಮಲ್ಯದ ಬಗ್ಗೆ ಪ್ರಶ್ನೆಗಳು ಎದ್ದಿವೆ.