
gvt spend Rs 2.88 crore to feed 'chicken rice' to stray dogs
(ಅಶ್ವವೇಗ) Ashwaveega News 24×7 ಜು.10: ರಾಜ್ಯದ ಕಾಂಗ್ರೆಸ್ ಸರ್ಕಾರ ದೇಶದಲ್ಲೇ ಮೊದಲ ಬಾರಿಗೆ ಬೀದಿ ನಾಯಿಗಳಿಗೆ ಸ್ಥಳೀಯ ಸಂಸ್ಥೆಯಿಂದ ಬಾಡೂಟದ ಭಾಗ್ಯವನ್ನು ಒದಗಿಸಲಿದೆ. ಯಾರಿಗುಂಟು ಯಾರಿಗಿಲ್ಲ ಹೇಳಿ. ಇಷ್ಟು ದಿನ ಹಸಿವಿನಿಂದ ಬಳಲುತ್ತಿದ್ದ ಬೀದಿ ನಾಯಿಗಳಿಗೆ ಇನ್ಮುಂದೆ ಬಾಡೂಟ ತಿನ್ನುವ ಯೋಗ ಒದಗಿ ಬಂದಿದೆ. ಬೆಂಗಳೂರು ಮಹಾನಗರ ಪಾಲಿಕೆ ಬೀದಿನಾಯಿಗಳ ಕಾಳಜಿಗೆ ಮುಂದಾಗಿದೆ.
ಜನರಿಗೆ ಹೊಟ್ಟೆಗೆ ಹಿಟ್ಟಿಲ್ಲದಿದ್ದರು, ಬೀದಿನಾಯಿಗಳಿಗೆ ಬಾಡೂಟದ ಭಾಗ್ಯ ಒದಗಿಸುತ್ತಿದೆ ಕಾಂಗ್ರೆಸ್ ಸರ್ಕಾರ. ಜನರ ತೆರಿಗೆ ಹಣವನ್ನು ಲೂಟಿ ಮಾಡಲು ಹೊಸ ಪ್ಲಾನ್ ಮಾಡಿದ್ದು, ಈ ದುಡ್ಡಿನಿಂದ ಬೀದಿ ನಾಯಿಗಳಿಗೆ ಮಾಂಸ, ಚಿಕನ್, ಎಗ್ ರೈಸ್ ಭಾಗ್ಯ ಒದಗಿಸಲಿದೆ. ಪಾಲಿಕೆಯಿಂದ ಇನ್ನೂ ಮುಂದೆ ಬೀದಿ ನಾಯಿಗಳಿಗೆ ಊಟದ ವ್ಯವಸ್ಥೆ ಮಾಡಲಾಗುವುದು.
ಈಗಾಗಲೇ ಬೀದಿ ನಾಯಿಗಳಿಗೆ ಊಟ ಹಾಕಲು ಪಾಲಿಕೆ ಟೆಂಡರ್ ಕರೆದಿದ್ದು, ಪಾಲಿಕೆಯ 8 ವಲಯಗಳಲ್ಲಿ ಬೀದಿ ನಾಯಿಗಳಿಗೆ ನಿತ್ಯ ಊಟದ ವ್ಯವಸ್ಥೆ ಮಾಡಲಿದೆ.
ಪ್ರತಿ ದಿನ ಚಿಕನ್ ಹಾಗೂ ಎಗ್ ರೈಸ್ ಊಟ ನೀಡಲು ಪ್ಲಾನ್ ಮಾಡಿದ್ದು, ಬೀದಿ ನಾಯಿಗಳ ಊಟಕ್ಕೆ 2.80 ಕೋಟಿ ಟೆಂಡರ್ನ್ನು ಪಾಲಿಕೆ ಕರೆದಿದೆ. ಪ್ರತಿ ವಲಯದಲ್ಲಿ ನಿತ್ಯ 600 ರಿಂದ 700 ಬೀದಿ ನಾಯಿಗಳಿಗೆ ಬಾಡೂಟ ಹಾಕಲು ತಯಾರಿನಡೆಸಲಾಗಿದೆ.