ಬೆಂಗಳೂರು: ಕಾನ್ಸ್ಟೇಬಲ್ ಹುದ್ದೆಗೆ ವಯಸ್ಸು ಸಡಿಲಿಕೆ ಮಾಡಬೇಕು ಎಂದು ಆಗ್ರಹಿಸುತ್ತಿರುವ ಅಭ್ಯರ್ಥಿಗಳು ಗೃಹ ಸಚಿವ ಪರಮೇಶ್ವರ್ ಅವರ ಮನೆಗೆ ಮನವಿ ಸಲ್ಲಿಸಲು ಹೋಗಿದ್ದರು. ತಾವು ತಮ್ಮ ಹಕ್ಕು ಕೇಳುವುದಕ್ಕೆ ಬಂದಿದ್ದೇವೆ ಎಂದು ಹೇಳಿದ ಅಭ್ಯರ್ಥಿಗಳಿಗೆ, ಪೊಲೀಸರು ತಡೆ ನೀಡಿದ್ದು, ಕಿರುಕುಳ ಅನುಭವಕ್ಕೆ ಬಿದ್ದಿದೆ.
ಮನವಿ ಸಲ್ಲಿಸಲು ಹೋಗಲು ಆದ ಅನುಮತಿ ನೀಡದಂತೆ ಪೊಲೀಸರು ಪ್ರಯತ್ನಿಸಿದ್ದು, ಇದರಿಂದಾಗಿ ಸ್ಥಳದಲ್ಲಿ ಅಹಿತಕರ ಪರಿಸ್ಥಿತಿ ಉಂಟಾಯಿತು. ಅಭ್ಯರ್ಥಿಗಳು ಮತ್ತು ಪೊಲೀಸರ ನಡುವೆ ಮಾತಿನ ವಾಗ್ಯುದ್ಧ ನಡೆಯಿತು.
ಅಭ್ಯರ್ಥಿಗಳು ವಯಸ್ಸು ಸಡಿಲಿಕೆ ಮಾಡದಿದ್ದರೆ ದಯಾಮರಣ ನೀಡಲು ಕೋರಿದ್ದು, ತಮ್ಮ ಬೇಡಿಕೆಗಳನ್ನು ಸರ್ಕಾರ ಈಡೇರಿಸದಿದ್ದರೆ, ಫ್ರೀಡಂ ಪಾರ್ಕ್ನಲ್ಲಿ ಬೃಹತ್ ಧರಣಿ ನಡೆಸುವುದಾಗಿ ಎಚ್ಚರಿಸಿದ್ದಾರೆ.
ಈ ಘಟನೆಯು ಅಭ್ಯರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದ್ದು, ಹೆಚ್ಚಿನವರು ಪೊಲೀಸರು ಮತ್ತು ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.