
Ashwaveega News 24×7 ಜು. 31: ಬೆಂಗಳೂರು ನಗರದ ವಾಹನ ಸವಾರರೇ ಎಚ್ಚರ. ಆಗಸ್ಟ್ ತಿಂಗಳ ಅಂತ್ಯದೊಳಗಾಗಿ ಮತ್ತೆ ಬೆಂಗಳೂರಿನಲ್ಲಿ ಟೋಯಿಂಗ್ ಆರಂಭಿಸಲಾಗುತ್ತೆ. ಈ ಬಗ್ಗೆ ಸ್ವತಃ ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರೇ ತಿಳಿಸಿದ್ದಾರೆ.
ವಾಹನ ಟೋಯಿಂಗ್ ಕುರಿತಾಗಿ ಗುರುವಾರ ಮಾತನಾಡಿದ ಅವರು, “ಬೆಂಗಳೂರು ನಗರದಲ್ಲಿ ಇಲಾಖೆ ವತಿಯಿಂದ ಟೋಯಿಂಗ್ ಆರಂಭಿಸುತ್ತೇವೆ. ಈ ಹಿಂದೆ ಗುತ್ತಿಗೆ ನೀಡಲಾಗಿತ್ತು. ಈ ಬಾರಿ ಪೊಲೀಸರೇ ಟೋಯಿಂಗ್ ಮಾಡುತ್ತಾರೆ. ಯಾವುದೇ ಕಂಪನಿಗೆ ಗುತ್ತಿಗೆ ನೀಡುವುದಿಲ್ಲ” ಎಂದು ಸ್ಪಷ್ಟಪಡಿಸಿದರು.
ಪಾರ್ಕಿಂಗ್ ಆಗಬಾರದು ಎಂಬ ನಿಯಮ ಇರುತ್ತದೆಯೋ, ಜನರು ಅಲ್ಲಿಯೇ ವಾಹನಗಳನ್ನು ಪಾರ್ಕಿಂಗ್ ಮಾಡಿರುತ್ತಾರೆ. ಅಂತ ಸಂದರ್ಭದಲ್ಲಿ ಎನು ಮಾಡಬೇಕು. ಜನ ಓಡಾಡಲು ರಸ್ತೆ ಮಾಡಿದ್ದಾರೆ. ಪಾರ್ಕಿಂಗ್ ಮಾಡಲು ಅಲ್ಲ ಎಂದರು.
ಈ ಹಿಂದೆ ಬೆಂಗಳೂರು ನಗರ ಉಸ್ತುವಾರಿ ಸಚಿವನಾದ್ದಾಗ ಸಂದರ್ಭದಲ್ಲಿಯೂ ಈ ಪ್ರಶ್ನೆ ಬಂದಿತ್ತು ಎಂದ ಅವರು, ಜನರೊಂದಿಗೆ ಮಾನವೀಯತೆಯಿಂದ ವರ್ತಿಸುವಂತೆ ಸೂಚಿಸುತ್ತೇನೆ. ಜಟಾಪಟಿಯಾದರೆ ಕಾನೂನು ಇಲ್ಲವೇ? ಎಂದು ಅವರು ಹೇಳಿದರು.
ಬೆಂಗಳೂರಿನಲ್ಲಿ ಈ ಹಿಂದೆ ಟೋಯಿಂದ ವ್ಯವಸ್ಥೆ ಇತ್ತು. ಆದರೆ ಇದರ ಉಸ್ತುವಾರಿಯನ್ನು ಖಾಸಗಿ ಏಜೆನ್ಸಿಗಳಿಗೆ ನೀಡಲಾಗಿತ್ತು. ಆದರೆ ಟೋಯಿಂದ ವಿರುದ್ಧ ವ್ಯಾಪಕ ಜನಾಕ್ರೋಶ ವ್ಯಕ್ತವಾಗಿತ್ತು. ಪರಿಣಾಮವಾಗಿ ಟೋಯಿಂಗ್ ರದ್ದು ಮಾಡಲಾಗಿತ್ತು.
ಸರ್ಕಾರದ ಈ ನಡೆಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ ಟೋಯಿಂಗ್ ಜಾರಿ ತರುವುದು ಸರಿಯಲ್ಲ ಎಂಬ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಆದರೆ ಇದೀಗ ಮತ್ತೊಮ್ಮೆ ಟೋಯಿಂದ ವ್ಯವಸ್ಥೆಯನ್ನು ಜಾರಿಗೆ ತರಲು ನಿರ್ಧಾರ ಮಾಡಲಾಗಿದೆ.
ಈ ಬಾರಿ ಯಾವುದೇ ಖಾಸಗಿ ಸಂಸ್ಥೆಗಳು ಟೋಯಿಂಗ್ ನಡೆಸುವುದಿಲ್ಲ. ಬದಲಾಗಿ ಪೊಲೀಸ್ ಇಲಾಖೆಯೇ ಟೋಯಿಂಗ್ ಮಾಡಲಿದೆ. ಪಾರ್ಕಿಂಗ್ ಸಮಸ್ಯೆ ಇರುವ ರಸ್ತೆಗಳನ್ನು ಟೋಯಿಂಗ್ ಮಾಡಲು ನಿರ್ಧಾರ ಮಾಡಲಾಗಿದೆ.