Ashwaveega News 24×7 ಡಿಸೆಂಬರ್. 03: ಹನುಮ ಜಯಂತಿ ಪ್ರಯುಕ್ತ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಹನುಮ ಸಂಕೀರ್ತನಾ ಯಾತ್ರೆ ನಡೆದಿದ್ದು,ಹನುಮ ಮಾಲಾಧಾರಿಗಳು ಮಸೀದಿಗೆ ನುಗ್ಗಲು ಯತ್ನಿಸಿದ್ದಾರೆ.
ಈ ವೇಳೆ ತಳ್ಳಾಟ, ನೂಕಾಟ ಉಂಟಾಗಿ ಕೆಲ ಹೊತ್ತು ಭಾರೀ ಹೈಡ್ರಾಮಾವೇ ನಡೆದಿದೆ. ಮಸೀದಿಗೆ ನುಗ್ಗಲು ಯತ್ನಿಸಿದ್ದ ಹನುಮ ಮಾಲಾಧಾರಿಗಳನ್ನ ತಡೆಯಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ. ಸಂಕೀರ್ತನಾ ಯಾತ್ರೆ ಜಾಮಿಯಾ ಮಸೀದಿ ಬಳಿ ಬರುತ್ತಿದ್ದಂತೆ, ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.
ಇದೇ ವೇಳೆ ಹನುಮ ಮಾಲಾಧಾರಿಗಳು, ಕೇಸರಿ ಧ್ವಜ ತಿರುಗಿಸಿ ಮಸೀದಿ ಜಾಗ ನಮ್ಮದು ಎಂದು ಘೋಷಣೆ ಕೂಗಿದರು.
ಅಲ್ಲದೇ ಜಾಮಿಯಾ ಮಸೀದಿಯಲ್ಲಿರುವವನು ಹನುಮಂತ ಎಂದು ಘೋಷಣೆ ಕೂಗಿ ಬೂದುಗುಂಬಳ ಇಳಿ ತೆಗೆದು ಒಡೆದರು.
ಅಷ್ಟೆಅಲ್ಲದೇ, ಹನುಮ ಮಾಲಾಧಾರಿಗಳು ಜಾಮೀಯಾ ಮಸೀದಿ ಬಳಿ ಕುಳಿತು ಹನುಮಾನ್ ಚಾಲಿಸ್ ಪಠಣ ಮಾಡಿ, ನಿಂಬೆಹಣ್ಣು ಇಟ್ಟು, ಕರ್ಪೂರ ಹಚ್ಚಿ.. ಮಂದಿರ ಅಲ್ಲೇ ಕಟ್ಟುವೆವು ಎಂದು ರಸ್ತೆಯಲ್ಲಿ ಘೋಷಣೆ ಕೂಗಿದರು.
ಕೆಲಹೊತ್ತು ಪೊಲೀಸರು ಹಾಗೂ ಹನುಮ ಮಾಲಾಧಾರಿಗಳ ಮಧ್ಯೆ ವಾಗ್ವಾದ ನಡೆಯಿತು.
