Ashwaveega News 24×7 ಫೆಬ್ರವರಿ 22 – 2026 ಬೆಂಗಳೂರು : ಸೆಂಟ್ರಲ್ ಜೈಲಿನಲ್ಲಿ ಇರುವ ಚಾಲೆಂಜಿಂಗ್ ಸ್ಟಾರ್ Darshan ಅವರ ಆರೋಗ್ಯ ಮತ್ತು ಮನೋಭಾವದ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ. ಜೈಲು ವಾಸ ದರ್ಶನ್ ಅವರನ್ನು ಕುಗ್ಗಿಸಿತೇ ಎಂಬ ಪ್ರಶ್ನೆಗೆ ಸ್ಪಷ್ಟನೆ ನೀಡಿರುವುದು ಪತ್ನಿ Vijayalakshmi Darshan.
ಮಂಡ್ಯದಲ್ಲಿ ನಡೆದ Hayagreeva ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ಮಾತನಾಡಿದ ವಿಜಯಲಕ್ಷ್ಮಿ, “ನೋ.. ನೋ.. ನೋ.. ಜೈಲುವಾಸ ದರ್ಶನ್ ಅವರನ್ನು ಕುಗ್ಗಿಸಿಲ್ಲ. ಅಭಿಮಾನಿಗಳ ಪ್ರಾರ್ಥನೆ ಮತ್ತು ಹಾರೈಕೆಯಿಂದ ಅವರು ಮಾನಸಿಕವಾಗಿ ತುಂಬಾ ಸ್ಟ್ರಾಂಗ್ ಆಗಿದ್ದಾರೆ” ಎಂದು ಹೇಳಿದ್ದಾರೆ.
“ಇಷ್ಟು ಕಷ್ಟದಲ್ಲೂ, ನೋವಲ್ಲೂ ಅವರು ಮೆಂಟಲಿ ಸ್ಟ್ರಾಂಗ್ ಆಗಿದ್ದಾರೆ. ನೀವು ಎಲ್ಲರೂ ನಮ್ಮ ಜೊತೆ ಇದ್ದೀರಾ ಅನ್ನೋ ಧೈರ್ಯದಿಂದ ಇದ್ದಾರೆ” ಎಂದು ವಿಜಯಲಕ್ಷ್ಮಿ ಭಾವುಕರಾಗಿ ಹೇಳಿದರು. ಈ ಮಾತುಗಳು ಡಿ ಬಾಸ್ ಅಭಿಮಾನಿಗಳಿಗೆ ದೊಡ್ಡ ಗುಡ್ ನ್ಯೂಸ್ ಆಗಿ ಪರಿಣಮಿಸಿವೆ.
ಇತ್ತೀಚಿನ ದಿನಗಳಲ್ಲಿ ದರ್ಶನ್ ಆರೋಗ್ಯ ಮತ್ತು ಮನಸ್ಥಿತಿ ಕುರಿತು ವಿವಿಧ ಊಹಾಪೋಹಗಳು ಹರಿದಾಡುತ್ತಿದ್ದವು . ಆದರೆ ವಿಜಯಲಕ್ಷ್ಮಿ ನೀಡಿದ ಸ್ಪಷ್ಟನೆ ಅಭಿಮಾನಿಗಳಲ್ಲಿ ನೆಮ್ಮದಿ ಮೂಡಿಸಿದೆ . ಕಾರ್ಯಕ್ರಮದಲ್ಲಿ ಅಭಿಮಾನಿಗಳಿಂದ ಭರ್ಜರಿ ಬೆಂಬಲ ವ್ಯಕ್ತವಾಗಿದ್ದು , ದರ್ಶನ್ ಪರ ಕೂಗು ಕೂಡ ಕೇಳಿಬಂದಿತು.
ಒಟ್ಟಾರೆ, ಸೆಂಟ್ರಲ್ ಜೈಲಿನಲ್ಲಿದ್ದರೂ ದರ್ಶನ್ ಮಾನಸಿಕವಾಗಿ ದೃಢವಾಗಿದ್ದು, ಅಭಿಮಾನಿಗಳ ಬೆಂಬಲವೇ ಅವರ ಶಕ್ತಿ ಎಂಬ ಸಂದೇಶವನ್ನು ವಿಜಯಲಕ್ಷ್ಮಿ ನೀಡಿದ್ದಾರೆ.
