Ashwaveega News 24×7 ಫೆಬ್ರವರಿ 22 – 2026 ಮಂಡ್ಯ : ಸ್ಯಾಂಡಲ್ವುಡ್ನಲ್ಲಿ ಹೊಸ ಚರ್ಚೆಗೆ ಕಾರಣವಾಗಿರುವುದು Vinesh Darshan ಹೀರೋ ಲಾಂಚ್ ಸುದ್ದಿ. ಡಿ ಬಾಸ್ ಅಭಿಮಾನಿಗಳಿಗೆ ಹಾಲು ಕುಡಿದಷ್ಟು ಖುಷಿ ಕೊಡುವಂತಹ ಈ ಸುದ್ದಿಯು ಗಾಂಧಿನಗರದಲ್ಲಿ ಸದ್ದು ಮಾಡುತ್ತಿದೆ. ವಿನೇಶ್ ಅವರನ್ನು ನಾಯಕನಾಗಿ ಪರಿಚಯಿಸಲು ನಿರ್ಮಾಪಕರು ಮುಗಿಬಿದ್ದಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ವಿನೇಶ್ಗೆ ಈಗಾಗಲೇ ಮೂರ್ನಾಲ್ಕು ಕಥೆಗಳು ಕೇಳಿಸಲ್ಪಟ್ಟಿವೆ ಎಂದು ತಿಳಿದುಬಂದಿದ್ದು, ತಾಯಿ Vijayalakshmi Darshan ಕಥೆಗಳನ್ನು ಪರಿಶೀಲಿಸುತ್ತಿದ್ದಾರೆ . ಆದರೆ ಈವರೆಗೆ ಯಾವುದೇ ಅಂತಿಮ ನಿರ್ಧಾರ ಕೈಗೊಂಡಿಲ್ಲ. ತಂದೆ Darshan ಹೊರಬಂದ ಬಳಿಕವೇ ವಿನೇಶ್ ಸಿನಿಮಾ ಸೆಟ್ಟೇರಬಹುದು ಎಂಬ ಮಾತುಗಳು ಹರಿದಾಡುತ್ತಿವೆ.
ಇದಕ್ಕೂ ಮೊದಲು Devil ಸಿನಿಮಾದಲ್ಲಿ ವಿನೇಶ್ ಕಾಣಿಸಿಕೊಂಡಿದ್ದು, ಅವರ ಲುಕ್ಗೆ ಸ್ಯಾಂಡಲ್ವುಡ್ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ . ಯುವ ಅಭಿಮಾನಿಗಳಲ್ಲಿ ಈಗಾಗಲೇ ವಿನೇಶ್ ಕ್ರೇಜ್ ಹೆಚ್ಚುತ್ತಿದೆ.
ಇತ್ತೀಚೆಗೆ ಮಂಡ್ಯದಲ್ಲಿ ನಡೆದ Hayagreeva ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ವಿನೇಶ್, ವಿಜಯಲಕ್ಷ್ಮಿ ದರ್ಶನ್ ಜೊತೆ ವೇದಿಕೆ ಹಂಚಿಕೊಂಡರು. ಇಬ್ಬರಿಗೂ ಗ್ರ್ಯಾಂಡ್ ವೆಲ್ಕಂ ಸಿಕ್ಕಿದ್ದು, ಬೃಹತ್ ಹೂವಿನ ಹಾರ ಹಾಕಿ ಸಂಭ್ರಮಿಸಲಾಯಿತು. ಕಾರ್ಯಕ್ರಮದಲ್ಲಿ ಹಯಗ್ರೀವ ಚಿತ್ರದ ನಾಯಕ ಧನ್ವೀರ್ ಪರವಾಗಿ ವಿಜಯಲಕ್ಷ್ಮಿ ಮಾತನಾಡಿ, ಆಪ್ತಕಾಲದ ಬಂಧು ಎಂದು ಹೊಗಳಿದರು.
ಒಟ್ಟಾರೆ, ಬಂದಲ್ಲಿ ಹೋದಲ್ಲಿ ವಿನೇಶ್ ದರ್ಶನ್ ಪರ ಕೂಗು ಕೇಳಿಬರುತ್ತಿದ್ದು, ಅಧಿಕೃತ ಘೋಷಣೆಯ ನಿರೀಕ್ಷೆಯಲ್ಲಿ ಅಭಿಮಾನಿಗಳು ಕಾದಿದ್ದಾರೆ …
