
yours sincerely raam kannada movie poster on golden star ganesh birthday
(ಅಶ್ವವೇಗ) Ashwaveega News 24×7 ಜು.02: ನಟ ಗಣೇಶ್ ಅವರು ಹಲವು ಪ್ರಾಜೆಕ್ಟ್ಗಳಲ್ಲಿ ಬ್ಯುಸಿ ಆಗಿದ್ದಾರೆ. ಆ ಪೈಕಿ ‘ಪಿನಾಕ’ ಮತ್ತು ‘ಯುವರ್ಸ್ ಸಿನ್ಸಿಯರ್ಲಿ ರಾಮ್’ ಸಿನಿಮಾಗಳು ಹೆಚ್ಚು ನಿರೀಕ್ಷೆ ಸೃಷ್ಟಿ ಮಾಡಿವೆ. ಇಂದು (ಜುಲೈ 2) ಗೋಲ್ಡನ್ ಸ್ಟಾರ್ ಗಣೇಶ್ ಅವರ ಜನ್ಮದಿನ. ಆ ಪ್ರಯುಕ್ತ ಸಿನಿಮಾ ತಂಡಗಳಿಂದ ವಿಶೇಷ ಪೋಸ್ಟರ್ಗಳನ್ನು ಬಿಡುಗಡೆ ಮಾಡಲಾಗಿದೆ. ‘Yours Sincerely Raam’ ಸಿನಿಮಾದಿಂದ ಬಿಡುಗಡೆ ಆಗಿರುವ ಹೊಸ ಪೋಸ್ಟರ್ ಗಮನ ಸೆಳೆಯುತ್ತಿದೆ. ಇದರಲ್ಲಿ ಗಣೇಶ್ ಅವರು ಆಂಜನೇಯನ ಗೆಟಪ್ ಧರಿಸಿದ್ದಾರೆ. ಈ ಪೋಸ್ಟರ್ ವೈರಲ್ ಆಗುತ್ತಿದೆ.
‘ಯುವರ್ಸ್ ಸಿನ್ಸಿಯರ್ಲಿ ರಾಮ್’ ಸಿನಿಮಾದಲ್ಲಿ ಗಣೇಶ್ ಮತ್ತು ರಮೇಶ್ ಅರವಿಂದ್ ಅವರು ಒಟ್ಟಿಗೆ ನಟಿಸುತ್ತಿದ್ದಾರೆ. ಇವರಿಬ್ಬರ ಕಾಂಬಿನೇಷನ್ ಎಂಬ ಕಾರಣಕ್ಕೆ ನಿರೀಕ್ಷೆ ಜಾಸ್ತಿ ಇದೆ. ಈ ಸಿನಿಮಾದ ಶೂಟಿಂಗ್ ಬಿರುಸಿನಿಂದ ನಡೆಯುತ್ತಿದೆ. ವಿಶೇಷವಾದ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಗಣೇಶ್ ಅವರಿಗೆ ‘ಯುವರ್ಸ್ ಸಿನ್ಸಿಯರ್ಲಿ ರಾಮ್’ ಸಿನಿಮಾ ತಂಡ ವಿಶ್ ಮಾಡಿದೆ.
ಇದುವರೆಗೂ ಗಣೇಶ್ ಅವರು ಈ ರೀತಿಯ ಗೆಟಪ್ನಲ್ಲಿ ಕಾಣಿಸಿಕೊಂಡಿರಲಿಲ್ಲ. ತುಂಬ ಕ್ರಿಯೇಟಿವ್ ಆಗಿ ಈ ಪೋಸ್ಟರ್ ಮೂಡಿಬಂದಿದೆ. ಸೈಕಲ್ ಹಿಂಬದಿಯಲ್ಲಿ ಪೋಸ್ಟ್ ಮ್ಯಾನ್ ಬ್ಯಾಗ್ ಧರಿಸಿ ಭಜರಂಗಿ ಕುಳಿತಿದ್ದಾನೆ.
ಕೈಯಲ್ಲೊಂದು ಕಾಗದ ಕೂಡ ಇದೆ. ಪೋಸ್ಟರ್ ನೋಡುತ್ತಿದ್ದರೆ ಸಿನಿಮಾ ಬಗ್ಗೆ ಇನ್ನಷ್ಟು ಕುತೂಹಲ ಮೂಡುವಂತಿದೆ.
ಈ ಸಿನಿಮಾಗೆ ವಿಖ್ಯಾತ್ ಎ.ಆರ್. ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ಮೊದಲು ‘ಪುಷ್ಪಕ ವಿಮಾನ’, ‘ಇನ್ಸ್ಪೆಕ್ಟರ್ ವಿಕ್ರಮ್’, ‘ಮಾನ್ಸೂನ್ ರಾಗ’ ರೀತಿಯ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ವಿಖ್ಯಾತ್ ಅವರು ‘ಯುವರ್ಸ್ ಸಿನ್ಸಿಯರ್ಲಿ ರಾಮ್’ ಸಿನಿಮಾದ ಮೂಲಕ ಮೊದಲ ಬಾರಿಗೆ ನಿರ್ದೇಶಕನಾಗಿದ್ದಾರೆ.