
Ashwaveega News 24×7 ಅ. 17: ಇಂದಿನ ತಪ್ಪಾದ ಜೀವನಶೈಲಿ ಆರೋಗ್ಯದ ಮೇಲಷ್ಟೇ ಅಲ್ಲದೇ ಕೂದಲಿನ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಅದರಲ್ಲೂ ಪುರುಷರು ಬ್ಯುಸಿ ಶೆಡ್ಯೂಲ್ಗಳಿಂದ ತಮ್ಮ ಕೂದಲಿನ ಬಗ್ಗೆ ಸರಿಯಾಗಿ ಕಾಳಜಿಸಲು ಮಾಡೋದಿಲ್ಲ . ಇದರಿಂದಾಗಿ ಕೂದಲು ಒಣಗಿ, ದುರ್ಬಲಗೊಳ್ಳುತ್ತದೆ. ಆದರೆ ಈ ಬಗ್ಗೆ ಹೆಚ್ಚಾಗಿ ಚಿಂತೆ ಮಾಡಬೇಡಿ . ಪುರುಷರಿಗೆಂದೇ ಕೆಲವು ಸರಳ ಹೇರ್ ಕೇರ್ ಟಿಪ್ಸ್ಗಳನ್ನು ನಾವು ಹೇಳಿತ್ತೀವಿ. . . .
ಕೂದಲು ತೊಳೆಯುವುದು ಒಂದು ಮುಖ್ಯವಾದ ಪ್ರಕ್ರಿಯೆ .ಆದರೆ ಕೂದಲನ್ನು ಸರಿಯಾಗಿ ವಾಶ್ ಮಾಡದಿದ್ದರೆ, ಇದು ಕೂದಲನ್ನು ಹೆಚ್ಚು ಒಣಗಿಸಬಹುದು. ಮಕ್ಕಳು ವಾರಕ್ಕೆ ಎರಡರಿಂದ ಮೂರು ಬಾರಿ ಶಾಂಪೂ ಬಳಸಬೇಕು. ಅಲ್ಲದೇ, ಕೂದಲನ್ನು ತೊಳೆಯಲು ಉಗುರು ಬೆಚ್ಚಗಿನ ನೀರನ್ನು ಬಳಸಬೇಕು. ಒಂದು ವೇಳೆ ತುಂಬಾ ಬಿಸಿನೀರು ಬಳಸಿದರೆ ಕೂದಲಿನಿಂದ ತೇವಾಂಶವನ್ನು ಕಳೆದು ಹೋಗಿ, ಕೂದಲು ನಿರ್ಜೀವವಾಗಿ ಕಾಣುವಂತೆ ಮಾಡುತ್ತದೆ.
ಹುಡುಗಿಯರಿಗೆ ಮಾತ್ರವಲ್ಲ, ಹುಡುಗರು ಕಂಡಿಷನರ್ ಬಳಸುವುದು ಬಹಳ ಮುಖ್ಯ. ಶಾಂಪೂ ಬಳಸಿದ ನಂತರ ಕೂದಲಿಗೆ ಕಂಡಿಷನರ್ ಬಳಸಿ. ಇದು ಕೂದಲನ್ನು ತೇವಗೊಳಿಸುತ್ತದೆ ಮತ್ತು ಮೃದು ಹಾಗೂ ಕಾಂತಿಯುತಗೊಳಿಸುತ್ತದೆ. ಆದರೆ ಕೂದಲಿನ ಬೇರುಗಳಿಗೆ ಕಂಡಿಷನರ್ ಹಚ್ಚಬಾರದು ಎಂಬುವುದನ್ನು ನೆನಪಿಟ್ಟುಕೊಳ್ಳಿ. ಹಾಗಾಗಿ ಕೂದಲಿನ ಮೇಲ್ಭಾಗಕ್ಕೆ ಮಾತ್ರ ಹಚ್ಚಿ, ನಂತರ ಚೆನ್ನಾಗಿ ತೊಳೆಯಿರಿ.
ಅದೇ ರೀತಿ ಕೂದಲಿನ ಆರೈಕೆಗೆ ಎಣ್ಣೆ ಮಸಾಜ್ ಬಹಳ ಮುಖ್ಯ ಪಾತ್ರ ವಹಿಸುತ್ತೆ . ವಾರಕ್ಕೊಮ್ಮೆಯಾದರೂ ತೆಂಗಿನಕಾಯಿ, ಬಾದಾಮಿ ಅಥವಾ ಆಲಿವ್ ಎಣ್ಣೆಯಿಂದ ನಿಮ್ಮ ಕೂದಲನ್ನು ಮಸಾಜ್ ಮಾಡಿ. ಎಣ್ಣೆ ಮಸಾಜ್ ನೆತ್ತಿಗೆ ಪೋಷಣೆ ನೀಡುವುದರ ಜೊತೆಗೆ ಕೂದಲನ್ನು ಬಲಪಡಿಸುತ್ತದೆ. ಎಣ್ಣೆ ಹಚ್ಚಿದ ನಂತರ ಬೆಚ್ಚಗಿನ ನೀರಿನಲ್ಲಿ ನೆನೆಸಿದ ಟವಲ್ ನಿಂದ ನಿಮ್ಮ ಕೂದಲನ್ನು ಮುಚ್ಚಿ. ಇದು ಎಣ್ಣೆಯನ್ನು ಕೂದಲು ಚೆನ್ನಾಗಿ ಹೀರಿಕೊಳ್ಳಲು ಸಹಾಯ ಮಾಡುತ್ತದೆ.
ಇನ್ನೋ ರಾಸಾಯನಿಕ ಉತ್ಪನ್ನಗಳನ್ನು ತಪ್ಪಿಸಲು ನೈಸರ್ಗಿಕ ಪರಿಹಾರಗಳು ಉತ್ತಮ ಆಯ್ಕೆ . ಇದಕ್ಕಾಗಿ ನೀವು ಮೊಸರು, ಅಲೋವೆರಾ ಜೆಲ್ ಅಥವಾ ಮೊಟ್ಟೆಯಿಂದ ತಯಾರಿಸಿದ ಹೇರ್ ಮಾಸ್ಕ್ ಬಳಸಬಹುದು. ಇವು ಕೂದಲನ್ನು ಆಳದಿಂದ ಪೋಷಿಸಿ ಆರೋಗ್ಯಕರವಾಗಿಸುತ್ತದೆ.
ನಿಮ್ಮ ಕೂದಲನ್ನು ನೈಸರ್ಗಿಕವಾಗಿ ಒಣಗಲು ಬಿಡಿ ಮತ್ತು ಹೇರ್ ಡ್ರೈಯರ್ ಬಳಕೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ. ಅತಿಯಾದ ಶಾಖವು ನಿಮ್ಮ ಕೂದಲಿನಿಂದ ತೇವಾಂಶವನ್ನು ಕಳೆದುಕೊಳ್ಳಬಹುದು, ಇದು ಒಣಗಲು ಮತ್ತು ದುರ್ಬಲಗೊಳ್ಳಲು ಕಾರಣವಾಗಬಹುದು. ನೀವು ಹೇರ್ ಡ್ರೈಯರ್ ಬಳಸಬೇಕಾದರೆ ಕಡಿಮೆ ಶಾಖದಲ್ಲಿಟ್ಟು ಬಳಸಿ.
ಬಾಹ್ಯ ಆರೈಕೆ ಕೂದಲನ್ನು ಆರೋಗ್ಯಕರವಾಗಿಸುವುದಲ್ಲದೇ, ನಿಮ್ಮ ಆಹಾರದಿಂದ ಪೋಷಣೆಯನ್ನು ಪಡೆಯುವುದು ಸಹ ಅಗತ್ಯ. ನಿಮ್ಮ ಆಹಾರದಲ್ಲಿ ಪ್ರೋಟೀನ್ಗಳು, ಜೀವಸತ್ವಗಳು ಮತ್ತು ಖನಿಜಗಳು ಸಮೃದ್ಧವಾಗಿರುವ ಪದಾರ್ಥಗಳನ್ನು ಸೇರಿಸಿ. ಮೊಟ್ಟೆಗಳು, ಬೀಜಗಳು, ಹಸಿರು ತರಕಾರಿಗಳು ಮತ್ತು ಹಣ್ಣುಗಳು ಕೂದಲಿನ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಕೆಲಸ ಮಾಡುತ್ತೆ ..
ಒತ್ತಡ ಮತ್ತು ಸಾಕಷ್ಟು ನಿದ್ರೆ ಕೂದಲಿನ ಮೇಲೆ ನೇರ ಪರಿಣಾಮ ಬೀರುತ್ತದೆ. ಪ್ರತಿದಿನ ಕನಿಷ್ಠ 7-8 ಗಂಟೆಗಳ ಕಾಲ ನಿದ್ರೆ ಮಾಡಿ ಮತ್ತು ಒತ್ತಡದಿಂದ ಮುಕ್ತಿ ಪಡೆಯಲು ಯೋಗ ಅಥವಾ ಧ್ಯಾನದ ಸಹಾಯವನ್ನು ಪಡೆಯಿರಿ.
ಒಟ್ಟಾರೆ ಈ ಸಲಹೆಗಳನ್ನು ನಿಯಮಿತವಾಗಿ ಅನುಸರಿಸುವ ಮೂಲಕ, ನಿಮ್ಮ ಕೂದಲನ್ನು ಆರೋಗ್ಯಕರ ಮತ್ತು ಮೃದುವಾಗಿಸಬಹುದು. ನಿಮ್ಮ ಕೂದಲನ್ನು ಆರೋಗ್ಯಕರ ಮತ್ತು ಮೃದುವಾಗಿಸುವುದು ಮಾತ್ರವಲ್ಲದೇ, ನಿಮ್ಮ ಲುಕ್ ಅನ್ನು ಸುಧಾರಿಸುತ್ತದೆ.