Ashwaveega News 24×7 ಅ. 17: ಧರ್ಮಸ್ಥಳದಲ್ಲಿ ನೂರಾರು ಮೃತದೇಹ ಹೂತುಹಾಕಲಾಗಿದೆ ಎಂಬ ಆರೋಪ ಸಂಬಂಧ ಎಸ್ಐಟಿ ಶವಗಳ ಶೋಧ ಕಾರ್ಯಾಚರಣೆ ನಡೆಸ್ತಿದೆ. ಅನಾಮಿಕ ದೂರುದಾರ ಗುರುತಿಸಿದ್ದ 16 ಪಾಯಿಂಟ್ಗಳನ್ನು ಅಗೆದ್ರೂ, ಒಂದೇ ಒಂದು ಜಾಗದಲ್ಲಿ ಶವ ಸಿಕ್ಕಿಲ್ಲ.. ಆದ್ರೂ, ಮಾಸ್ಕ್ ಮ್ಯಾನ್ ಮತ್ತಷ್ಟು ಜಾಗಳನ್ನು ಗುರುಸಿದ್ದಾನೆ. ಇದು ಕೇಸರಿ ನಾಯಕರ ಆಕ್ರೋಶದ ಕಟ್ಟೆ ಒಡೆಯುವಂತೆ ಮಾಡಿದೆ. ತನಿಖೆಯ ನೆಪದಲ್ಲಿ ಧರ್ಮಸ್ಥಳ ಕ್ಷೇತ್ರದ ಬಗ್ಗೆ ಅಪಪ್ರಚಾರ ನಡೀತಿದೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ.. ಅಲ್ಲದೇ, ಬಿಜೆಪಿ ನಾಯಕರು ಧರ್ಮಸ್ಥಳ ಚಲೋ ಕೈಗೊಂಡಿದ್ದಾರೆ..
ಧರ್ಮಸ್ಥಳ ವಿಚಾರದಲ್ಲಿ ಇದೀಗ ಧರ್ಮ ದಂಗಲ್ ನಡೀತಿದೆ.. ಅಪಪ್ರಚಾರ ವಿರೋಧಿ ಧರ್ಮ ಹಾಗೂ ಅಧರ್ಮ ನಡುವಿನ ಸಂಘರ್ಷ ನಡೀತಿದೆ.. ಶವಗಳ ಸಿಗದೇ ಇದ್ರೆ ಗುಂಡಿಗಳನ್ನು ತೋಡುತ್ತಿರೋದನ್ನು ಬಿಜೆಪಿ ನಾಯಕರು ವಿರೋಧಿಸಿದ್ದಾರೆ.. ಧರ್ಮಸ್ಥಳ ಹೆಸರಿಗೆ ಕಳಂಗ ತರಲಾಗ್ತಿದೆ ಎಂದು ಕೇಸರಿ ನಾಯಕರು ಆರೋಪಿಸಿದ್ದಾರೆ.. ಇದ್ರ ಮುಂದುವರಿದ ಭಾಗವಾಗಿ ಬಿಜೆಪಿ ಶಾಸಕರು, ಧರ್ಮಸ್ಥಳ ಚಲೋ ನಡೆಸಿದ್ರು.. “ಧರ್ಮಸ್ಥಳ ಪರವಾಗಿ ನಾವು” ಹೆಸರಿನಲ್ಲಿ ಬೃಹತ್ ಜಾಥಾದಲ್ಲಿ ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಮೈಸೂರು ಜಿಲ್ಲೆಗಳ ಬಿಜೆಪಿ ಶಾಸಕರು ಭಾಗಿಯಾಗಿದ್ರು..
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ವಿರೋಧ ಪಕ್ಷದ ವಿಪಕ್ಷನಾಯಕ ಛಲವಾದಿ ನಾರಾಯಣಸ್ವಾಮಿ, ಸಂಸದ ಬ್ರಿಜೇಶ್ ಚೌಟ, ಶಾಸಕರಾದ ಹರೀಶ್ ಪೂಂಜಾ, ಭರತ್ ಶೆಟ್ಟಿ ಸೇರಿದಂತೆ 15ಕ್ಕೂ ಹೆಚ್ಚು ಶಾಸಕರು ಬೆಳಗ್ಗೆಯೇ ಮಂಜುನಾಥನ ಸನ್ನಿಧಿಗೆ ಎಂಟ್ರಿಕೊಟ್ಟು, ವಿಶೇಷ ಪೂಜೆ ಸಲ್ಲಿಸಿದ್ರು.. ಬಳಿಕ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿಯಾಗಿ, ಮಾತುಕತೆ ನಡೆಸಿದ್ರು.. ಅಲ್ಲದೇ, ಧರ್ಮಸ್ಥಳ ಪರವಾಗಿ ನಾವು ಇದ್ದೇವೆ ಅನ್ನೋ ಅಭಯ ಕೊಟ್ರು..
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮಾತನಾಡಿ, ಧರ್ಮಸ್ಥಳ ವಿಚಾರದಲ್ಲಿ ನಾವು ರಾಜಕಾರಣ ಮಾಡುತ್ತಿಲ್ಲ. ಅಪಪ್ರಚಾರಕ್ಕೆ ರಾಜ್ಯ ಸರ್ಕಾರ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದ್ರು. ಧರ್ಮಸ್ಥಳ ವಿಚಾರದಲ್ಲಿ ಸಿದ್ದರಾಮಯ್ಯ ಹಿಂದೆ ಟಿಪ್ಪು ಗ್ಯಾಂಗ್ ಇದೆ. ಯಾರೋ ಅನಾಮಿಕ ಕೊಟ್ಟ ದೂರನ್ನೇ ದೊಡ್ಡದು ಮಾಡಿದ್ದಾರೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಆಕ್ರೋಶ ಹೊರಹಾಕಿದ್ರು.
ಬಿಜೆಪಿ ಶಾಸಕರ ಧರ್ಮಸ್ಥಳ ಚಲೋಗೆ ಕಾಂಗ್ರೆಸ್ ನಾಯಕರು ತಿರುಗೇಟು ಕೊಟ್ಟಿದ್ದಾರೆ. ಬಿಜೆಪಿಯದ್ದು ಧರ್ಮದ ರ್ಯಾಲಿ ಅಲ್ಲ. ರಾಜಕೀಯ ರ್ಯಾಲಿ. ಧರ್ಮಸ್ಥಳ ಬಿಜೆಪಿ ಆಸ್ತಿನಾ? ಎಂದು ಡಿಸಿಎಂ ಡಿಕೆ ಶಿವಕುಮಾರ್ ಪ್ರಶ್ನಿಸಿದ್ರು. ಧರ್ಮಸ್ಥಳಕ್ಕೆ ಕಳಂಕ ತರಲು ಯಾರಿಂದಲೂ ಸಾಧ್ಯವಿಲ್ಲ. ಹಿಂದೂ ಧರ್ಮ ಬಿಜೆಪಿ ನಾಯಕರ ಸ್ವಂತ ಆಸ್ತಿಯಲ್ಲ ಅಂತಾ ಮಾಜಿ ಸಂಸದ ಡಿ.ಕೆ.ಸುರೇಶ್ ಕಿಡಿಕಾರಿದ್ರು.. ಧಾರ್ಮಿಕ ವಿಚಾರದಲ್ಲಿ ರಾಜಕಾರಣ ಮಾಡಬಾರದು ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ರು.
ಇನ್ನೂ ಧರ್ಮಸ್ಥಳದಲ್ಲಿ ಶವಗಳ ಶೋಧ ಕಾರ್ಯಕ್ಕೆ ಎಸ್ಐಟಿ ಬ್ರೇಕ್ ಹಾಕಿದೆ. ಅನಾಮಿಕ ದೂರುದಾರನಿಗೆ ಡ್ರಿಲ್ ಮಾಡಿರೋ ಎಸ್ಐಟಿ, ಶವಗಳ ಹೂತುಹಾಕಿದ್ದರ ಕುರಿತು ತನಿಖೆ ಮಾಡ್ತಿದೆ. ಒಟ್ನಲ್ಲಿ ಅನಾಮಿಕ ಹೇಳಿದಂತೆ ಧರ್ಮಸ್ಥಳದಲ್ಲಿ ಒಂದೇ ಒಂದು ಕುರುಹು ಪತ್ತೆಯಾಗಿಲ್ಲ. ಆದ್ರೆ, ಅನಾಮಿಕನಿಂದಾಗಿ ಧರ್ಮ ದಂಗಲ್ ಶುರುವಾಗಿದೆ.. ಈ ಕುರಿತು ರಾಜ್ಯ ಸರ್ಕಾರದ ಮುಂದಿನ ನಡೆ ಏನು ಅನ್ನೋದು ಕುತೂಹಲ ಮೂಡಿಸಿದೆ.
