Ashwaveega News 24×7 ಫೆಬ್ರವರಿ 16 -2026 ಚಿಕ್ಕಮಗಳೂರು : ತಾಯಿ ಬೈದಿದ್ದಕ್ಕೆ 12 ವರ್ಷದ ಮಗಳು ಆತ್ಮಹತ್ಯೆ ಮಾಡಿಕೊಂಡ ಹೃದಯವಿದ್ರಾವಕ ಘಟನೆ ಬಸರಿಕಟ್ಟೆ ಸಮೀಪದ ಹೊನ್ನಗುಂಡಿ ಗ್ರಾಮದಲ್ಲಿ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕು ವ್ಯಾಪ್ತಿಯ ಈ ಗ್ರಾಮದಲ್ಲಿ ವಿದ್ಯಾರ್ಥಿನಿ ಸುಪ್ರಿತಾ (12) ಮೃತಳಾಗಿದ್ದಾಳೆ. ಊಟ ಮಾಡುವಾಗಲೂ ಟಿವಿ ನೋಡುತ್ತಿದ್ದ ಸುಪ್ರಿತಾಳ ಕೈಯಿಂದ ಊಟದ ತಟ್ಟೆ ಜಾರಿ ಬಿದ್ದಿತ್ತು. ಇದರಿಂದ ಅಸಮಾಧಾನಗೊಂಡ ತಾಯಿ, “ಊಟ ಮಾಡುವಾಗಲೂ ಟಿವಿ ನೋಡ್ತೀಯಾ ? ಟಿವಿ ನೋಡುವುದನ್ನು ಕಡಿಮೆ ಮಾಡು” ಎಂದು ಬೈದಿದ್ದರು .
ನಂತರ ತಾಯಿ ಕೆಲಸಕ್ಕೆ ತೆರಳಿದ್ದ ವೇಳೆ, ಮನೆಯಲ್ಲಿ ಒಬ್ಬಳೇ ಇದ್ದ ಸುಪ್ರಿತಾ ವೇಲ್ನಿಂದ ನೇಣಿಗೆ ಶರಣಾಗಿದ್ದಾಳೆ. ಸಂಜೆ ಮನೆಗೆ ಬಂದ ತಾಯಿ ಮಗಳನ್ನು ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಬೆಚ್ಚಿಬಿದ್ದಿದ್ದಾರೆ. ಈ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.
ಒಟ್ಟಾರೆ , ಕ್ಷಣಿಕ ಆವೇಶದ ನಿರ್ಧಾರ ಎಷ್ಟು ದೊಡ್ಡ ದುರಂತಕ್ಕೆ ಕಾರಣವಾಗಬಹುದು ಎಂಬುದಕ್ಕೆ ಈ ಘಟನೆ ದಾರುಣ ಉದಾಹರಣೆಯಾಗಿದೆ . ಮಕ್ಕಳ ಮನೋಭಾವನೆಗಳ ಬಗ್ಗೆ ಪೋಷಕರು ಹೆಚ್ಚಿನ ಜಾಗ್ರತೆ ವಹಿಸಬೇಕೆಂಬ ಸಂದೇಶವನ್ನು ಈ ಘಟನೆ ನೀಡುತ್ತಿದೆ.
