
Ashwaveega News 24×7 ಅ. 22: ಜಾತಿ ನಿಂದನೆ ಪ್ರಕರಣದಲ್ಲಿ ವಕೀಲ ಜಗದೀಶ್ ಬೆಂಗಳೂರಲ್ಲಿ ಅರೆಸ್ಟ್ ಆಗಿದ್ದಾರೆ.ಕೊಡಗೇಹಳ್ಳಿ ಪೊಲೀಸರು ವಕೀಲ ಜಗೀಶ್ ಬಂಧಿಸಿದ್ದಾರೆ. ಜಾತಿ ನಿಂದನೆ ಪ್ರಕರಣ ಸಂಬಂಧ ವಕೀಲ ಜಗದೀಶ್ ವಿರುದ್ಧ ದೂರು ದಾಖಲಾಗಿತ್ತು. ಈ ಸಂಬಂಧ ಬೆಂಗಳೂರು ಪೊಲೀಸರು ಆಗಸ್ಟ್ 21ರಂದು ಜಗದೀಶ್ ಮನೆಗೆ ತೆರಳಿ ಬರಿಗೈಯಲ್ಲಿ ವಾಪಾಸ್ಸಾಗಿದ್ದರು.
ಮನೆ ಬಾಗಿಲು ತೆರೆಯದ ಸತಾಯಿಸಿದ್ದ ಜಗದೀಶ್ ಇಂದು ಅರೆಸ್ಟ್ ಆಗಿದ್ದಾರೆ. ಮಂಜುನಾಥ್ ಅನ್ನೋ ವ್ಯಕ್ತಿ ನೀಡಿದ್ದ ದೂರಿನ ಆಧಾರದಲ್ಲಿ ಲಾಯರ್ ಜಗದೀಶ್ ವಿರುದ್ಧ ಪ್ರಕರಣ ದಾಖಲಾಗಿತ್ತು.
ಇನ್ನು ಬಿಗ್ ಬಾಸ್ ಮಾಜಿ ಸ್ಪರ್ಧಿ ವಕೀಲ ಜಗದೀಶ್ ಬಂಧಿಸಿದ ಪೊಲೀಸರು ಕೂಡಿಗೆಹಳ್ಳಿ ಠಾಣೆಗೆ ಕರೆತಂದು ವಿಚಾರಣೆ ಆರಂಭಿಸಿದ್ದಾರೆ.
ಆಗಸ್ಟ್ 21ರಂದು ಕೊಡಿಗೆಹಳ್ಳಿ ಪೊಲೀಸರು ಜಗದೀಶ್ ಅರೆಸ್ಟ್ ಮಾಡಲು ಮನೆಗೆ ತೆರಳಿದ್ದರು. ಈ ವೇಳೆ ಮನೆ ಬಾಗಿಲು ತಗೆಯಲಿಲ್ಲ. ಇಷ್ಟೇ ಅಲ್ಲ ಪೊಲೀಸರ ನೋಟಿಸ್ ಸ್ವೀಕರಿಸಲು ನಿರಾಕರಿಸಿದ್ದರು. ಹಲವು ಗಂಟೆಗಳ ವರೆಗೆ ಕಾದರೂ ಲಾಯರ್ ಜಗದೀಶ್ ಮನೆ ಬಾಗಿಲು ತರೆಯಲೇ ಇಲ್ಲ. ಹೀಗಾಗಿ ಪೊಲೀಸರು ಬರಿಗೈಯಲ್ಲಿ ವಾಪಾಸ್ಸಾಗಿದ್ದರು.