ಬೆಂಗಳೂರು : ಸಿಬಿಐ, ಐಟಿ, ಇ.ಡಿ ಕೇಂದ್ರದ ಕೈಬೊಂಬೆ ಆಗಿದೆ, ಕರ್ನಾಟಕದಲ್ಲಿ ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದಕ್ಕೆ ಸುಣ್ಣ ಎಂದು ಸಚಿವ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ.
ಇಂದು ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ ಯಡಿಯೂರಪ್ಪ, ವಿಜಯೇಂದ್ರ ಹಾಗೂ ಕುಟುಂಬದ ವಿರುದ್ಧ 2020 ರಲ್ಲಿ ಇ.ಡಿಯಲ್ಲಿ ಪ್ರಕರಣ ದಾಖಲಾಗಿದ್ದು, 12.50 ಕೋಟಿ ಆರ್ ಟಿ ಜಿಎಸ್ ಮೂಲಕ ಹಣ ವರ್ಗಾವಣೆ ಆಗಿರುವ ಬ್ಯಾಂಕ್ ಖಾತೆ ಬಿಎಸ್ ವೈ ಕುಟುಂಬದ್ದು ಎಂಬ ಮಾಹಿತಿ ಸಹ ಇದೆ. ಆದರೆ ಯಾವುದೇ ಕ್ರಮ ಆಗಿಲ್ಲ ಏಕೆ ಎಂದು ಪ್ರಶ್ನಿಸಿದ್ದಾರೆ.
ಇನ್ನೂ ಇ.ಸಿ.ಐ.ಆರ್ ವಿಜಯೇಂದ್ರ ವಿರುದ್ಧ ಕೇಸ್ ದಾಖಲಾಗಿರುವುದರಿಂದ ಅವರು ರಾಜೀನಾಮೆ ಕೊಡಬೇಕು. ಹಾಗೂ ಬ್ಯ್ಲಾಕ್ ಮೇಲ್ ಮಾಡಲು ಕೇಸ್ ಬಳಕೆ ಮಾಡಬಹುದು. ಅಥವಾ ಕೇಸ್ ಮುಚ್ಚಿ ಹಾಕಲು ಇಷ್ಟೊಂದು ತಡ ಮಾಡಬಹುದು. ಆದರು ಬಿಜೆಪಿಗರಿಗೆ ಎರಡು ನಾಲಿಗೆ ಇದೆ, ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸುತ್ತಾರೆ, ಆದರೆ ವಿಜಯೇಂದ್ರ ಬಗ್ಗೆ ಮೌನ ವಾಗಿದ್ದಾರೆ ಏಕೆ ಎಂದು ಸುದ್ದಿಗೋಷ್ಠಿಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಕೇಳಿದ್ದಾರೆ.
ಇದನ್ನೂ ಓದಿ : https://ashwaveega.com/theft-in-gali-anjaneya-swami-temple/