Ashwaveega News 24×7 ಸೆ. 25: ಕಾಂಗ್ರೆಸಿನ ಮತ್ತೊಬ್ಬ ಶಾಸಕನಿಗೆ ಸಂಕಷ್ಟ ಶುರುವಾಗಿದೆ. ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ವಿರುದ್ಧದ ಆದಾಯ ಮೀರಿ ಆಸ್ತಿಗಳಿಕೆ ಪ್ರಕರಣ ಸಂಬಂಧ ಲೋಕಾಯುಕ್ತ ಕಚೇರಿಯಲ್ಲಿFIR ದಾಖಲಾಗಿದೆ. ಶಾಸಕ ಟಿ.ಡಿ.ರಾಜೇಗೌಡ, ಪತ್ನಿ ಪುಷ್ಪಾ, ಮಗ ರಾಜ್ ದೇವ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
2022ರ ಡಿಸೆಂಬರ್ನಲ್ಲಿ ಮುಖಂಡ ದಿನೇಶ್ ರಾಜೇಗೌಡ ವಿರುದ್ಧ ದೂರು ಸಲ್ಲಿಸಿದ್ದರು. ಪ್ರಕರಣ ಸಂಬಂಧ ಜನಪ್ರತಿನಿಧಿಗಳ ವಿಶೇಷ ಕೋರ್ಟ್ಅ ರ್ಜಿ ವಿಚಾರಣೆ ನಡೆಸಿತ್ತು. ಕಳೆದ ಸೆ.16ರಂದು ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ , ಪತ್ನಿ ಪುಷ್ಪಾ, ಮಗ ರಾಜ್ ದೇವ್ವಿರುದ್ಧ ಎಫ್ಐಆರ್ ದಾಖಲಿಸಿ, ತನಿಖೆ ನಡೆಸಲು ಲೋಕಾಯುಕ್ತ ಎಸ್ ಪಿಗೆ ಸೂಚನೆ ನೀಡಿತ್ತು.
ಅಲ್ಲದೇ ನವೆಂಬರ್ 17 ರೊಳಗೆ ತನಿಖಾ ವರದಿ ಸಲ್ಲಿಸಲು ಕೋರ್ಟ್ ಸೂಚನೆ ನೀಡಿತ್ತು. ಕೋರ್ಟ್ ಸೂಚನೆಯಂತೆ ರಾಜೇಗೌಡ ವಿರುದ್ಧ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ 1988ರ ಅನ್ವಯ ಸೆಕ್ಷನ್ 7,8,13, 120(B)420,193,200 ಅಡಿ FIR ದಾಖಲಿಸಿದೆ.
