ಮೈಸೂರು: ಮೈಸೂರಿನ ಸಿಸಿಬಿ (ಸಿಟಿ ಕ್ರೈಂ ಬ್ರಾಂಚ್) ಪೊಲೀಸರು ಭರ್ಜರಿ ಕಾರ್ಯಾಚರಣೆಯಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ನಾಲ್ವರು ಒಂದೇ ಕುಟುಂಬದವರು 80ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ.
ಬಂಧಿತರಿಂದ ಸುಮಾರು 45 ಲಕ್ಷ ಮೌಲ್ಯದ ಚಿನ್ನಾಭರಣವನ್ನು ವಶಕ್ಕೆ ಪಡೆಯಲಾಗಿದೆ. ಜೊತೆಗೆ, ಮೂರು ಬೈಕ್, ಎರಡು ಪಿಸ್ತೂಲ್, ಮತ್ತು 4.6 ಕೆಜಿ ಗಾಂಜಾ ಸಹ ವಶಕ್ಕೆ ಪಡೆಯಲಾಗಿದೆ.
ಮೈಸೂರಿನ ಮೇಟಗಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಮನೆ ಕಳ್ಳತನ ಪ್ರಕರಣವನ್ನು ಭೇದಿಸಿರುವ ಪೊಲೀಸರು, ಆರೋಪಿಗಳ ಬಂಧನವನ್ನು ಯಶಸ್ವಿಯಾಗಿ ನೆರವೇರಿಸಿದ್ದಾರೆ. ಬಂಧಿತ ನಾಲ್ವರು ಮೈಸೂರು, ಮಂಡ್ಯ, ದಕ್ಷಿಣ ಕನ್ನಡ, ಮತ್ತು ಕೊಡಗು ಭಾಗಗಳಲ್ಲಿ ನಡೆದಿರುವ ಸುಲಿಗೆ ಮತ್ತು ವಾಹನ ಕಳವು ಪ್ರಕರಣಗಳಲ್ಲೂ ಭಾಗಿಯಾಗಿದ್ದಾರೆ.
ಬಂಧಿತ ಆರೋಪಿ ಪೈಕಿ ಒಬ್ಬನ ಮೇಲೆ 3 ಪ್ರಕರಣಗಳು, ಮತ್ತೊಬ್ಬನ ಮೇಲೆ 36 ಪ್ರಕರಣಗಳು, ಇನ್ನೊಬ್ಬನ ಮೇಲೆ 17 ಪ್ರಕರಣಗಳು ದಾಖಲಾಗಿವೆ. ಗಾಂಜಾ ಹೊಂದಿದ ಆರೋಪಿಯ ಮೇಲೆ 18 ಪ್ರಕರಣಗಳಿವೆ.