Ashwaveega News 24×7 ಫೆಬ್ರವರಿ 23 – 2026 ಮೈಸೂರು : ರಾಜ್ಯ ರಾಜಕೀಯದಲ್ಲಿ ಮುಖ್ಯಮಂತ್ರಿ ರೇಸ್ ಕುರಿತ ಚರ್ಚೆಗಳು ಮತ್ತೆ ಚುರುಕುಗೊಂಡಿವೆ . ಮುಖ್ಯಮಂತ್ರಿ Siddaramaiah ಮತ್ತು ಉಪ ಮುಖ್ಯಮಂತ್ರಿ D. K. Shivakumar ಹೆಸರುಗಳ ನಡುವೆ ಇದೀಗ ಮತ್ತೊಬ್ಬ ನಾಯಕನ ಹೆಸರು ಕೇಳಿಬಂದಿದೆ.
ಸಚಿವ K. Venkatesh ಮೈಸೂರಿನಲ್ಲಿ ಮಾತನಾಡಿ, “ಸಚಿವ H. C. Mahadevappa ಸಿಎಂ ಆದ್ರೆ ನಾನು ಖುಷಿಪಡ್ತೇನೆ. ಅವರು ನನ್ನ ಆತ್ಮೀಯ ಸ್ನೇಹಿತರು . ಅವರಿಗೆ ಮುಖ್ಯಮಂತ್ರಿ ಆಗುವ ಅರ್ಹತೆ ಇದೆ” ಎಂದು ಹೇಳಿದ್ದಾರೆ.
ಆದರೆ, “ಸದ್ಯ ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ. ಖಾಲಿಯಾದ ನಂತರ ಒಕ್ಕಲಿಗ, ಲಿಂಗಾಯತ ಎನ್ನುವ ಪ್ರಶ್ನೆ ಬರಬಹುದು” ಎಂದು ಸ್ಪಷ್ಟಪಡಿಸಿದ್ದಾರೆ. ಪಕ್ಷದೊಳಗೆ ದಲಿತ ಸಿಎಂ ಕೂಗು ಇದೆಯೋ ಇಲ್ಲವೋ ಗೊತ್ತಿಲ್ಲ ಎಂದೂ ತಿಳಿಸಿದ್ದಾರೆ.
ನಿನ್ನೆ ತಾನೇ ಮಹದೇವಪ್ಪ “ದಲಿತರು ಸಿಎಂ ಆಗಬೇಕು” ಎಂದು ಹೇಳಿಕೆ ನೀಡಿದ್ದ ಹಿನ್ನೆಲೆ, ವೆಂಕಟೇಶ್ ಅವರ ಈ ಹೇಳಿಕೆ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಕಾಂಗ್ರೆಸ್ ‘ಕೈ’ ಚಿಹ್ನೆಯೊಳಗಿನ ನಾಯಕತ್ವ ಚರ್ಚೆ ಹೊಸ ತಿರುವು ಪಡೆದುಕೊಳ್ಳುತ್ತದೆಯೇ ? ಸಿಎಂ ರೇಸ್ನಲ್ಲಿ ಮತ್ತಷ್ಟು ಹೆಸರುಗಳು ಸೇರುತ್ತವೆಯೇ ? ಎಂಬ ಪ್ರಶ್ನೆಗಳು ರಾಜಕೀಯ ವಲಯದಲ್ಲಿ ಗರಿಗೆದರಿವೆ.
