
Ashwaveega News 24×7 ಸೆ. 25: ಸಾಂಸ್ಕೃತಿಕ ನಗರಿಯಲ್ಲಿ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಸಂಭ್ರಮ ಮೇಳೈಸಿದೆ. ಮಹಿಳಾ ದಸರಾ, ಆಹಾರ ಮೇಳ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯುತ್ತಿದೆ. ಇನ್ನೂ ಮಹಿಳಾ ದಸರಾಗೆ ಅಭೂತ ಪೂರ್ವ ಸ್ಪಂದನೆ ಸಿಗುತ್ತಿದೆ.
ಇಂದು ಮಹಿಳಾ ದಸರಾ ಉಪಸಮಿತಿ ವತಿಯಿಂದ ಮಹಿಳೆಯರಿಗೆ ವಾಕಥಾನ್ ಆಯೋಜಿಸಲಾಗಿತ್ತು. ನಗರದ ಕೋಟೆ ಅಂಜನೇಯ ಸ್ವಾಮಿ ದೇವಸ್ಥಾನದ ಅವರಣದಿಂದ ವಾಕಥಾನ್ ರಥಕ್ಕೆ ಮಹಿಳಾ ಅಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಚಾಲನೆ ನೀಡಿದರು.
ಇನ್ನೂ ಮಹಿಳೆಯರು ಮೈಸೂರು ಸಿಲ್ಕ್ ಸೀರೆ ಧರಿಸಿ, ಮಲ್ಲಿಗೆ ಹೂ ಮುಡಿದು ವಾಕಥಾನ್ನಲ್ಲಿ ಭಾಗಿಯಾಗಿದ್ರು.. ವಾಕಥಾನ್ ಗೆ ವಿವಿಧ ಸಾಂಸ್ಕತಿಕ ಕಲಾತಂಡಗಳ ಮೆರುಗು ನೀಡಿದ್ದು, ತಮಟೆ ಸದ್ದಿಗೆ ಮಹಿಳಾ ಅಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಮಹಿಳೆಯರೊಟ್ಟಿಗೆ ಹೆಜ್ಜೆಯಾಕಿದ್ದು ವಿಶೇಷವಾಗಿತ್ತು.